ಬೀಟೆ ಮರ ಸಾಗಾಣೆ: ಇಬ್ಬರು ಆರೋಪಿ ಬಂಧನ ಮತ್ತೋರ್ವ ಆರೋಪಿ ಪರಾರಿ
ಕೊಡಗು

ಬೀಟೆ ಮರ ಸಾಗಾಣೆ: ಇಬ್ಬರು ಆರೋಪಿ ಬಂಧನ ಮತ್ತೋರ್ವ ಆರೋಪಿ ಪರಾರಿ

June 18, 2018

ಮಡಿಕೇರಿ: ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯಿಂದ ಮಡಿ ಕೇರಿ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆಮರದ ನಾಟಾಗಳನ್ನು ಕುಶಾಲ ನಗರ ವಲಯ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಂಬಿಬಾಣೆ ಅಂದಗೋವೆಯಿಂದ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಅಂದಾಜು ಎರಡು ಲಕ್ಷ ಮೌಲ್ಯದ ಮೂರು ಬೀಟೆನಾಟಾಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಗ್ರಾಮಸ್ಥರಿಂದ ಖಚಿತ ಮಾಹಿತಿ ಪಡೆದ ಕುಶಾಲನಗರ ವಲಯ ಅರಣ್ಯಾ ಧಿಕಾರಿಗಳು ಮತ್ತು ಸಿಬ್ಬಂದಿಗಳು, ಸಿನಿ ಮೀಯ ಮಾದರಿಯಲ್ಲಿ ಕಂಬಿಬಾಣೆ ಬಳಿ ಮರ ಸಾಗಿಸುತ್ತಿದ್ದ ವಾಹನ ವನ್ನು ಅಡ್ಡಗಟ್ಟಿದ್ದಾರೆ. ಆದರೆ ಮರಗಳ್ಳರು ಅರಣ್ಯ ಇಲಾಖೆಯ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿ ಯಾಗಲು ಯತ್ನಿಸಿದ್ದಾರೆ. ಈ ಸಂದರ್ಭ ಕಾರ್ಯ ಪ್ರವತ್ತರಾದ ಸಿಬ್ಬಂದಿಗಳು ಚಾಣಾಕ್ಷತನದಿಂದ ಗೂಡ್ಸ್ ವಾಹನ ಚಾಲಕ ಮಡಿ ಕೇರಿಯ ರಾಜರಾಜೇಶ್ವರಿ ನಗರ ನಿವಾಸಿ ಯಾದ ಉಮೇಶ್, ಸುಂಟಿ ಕೊಪ್ಪದ ಶಾಹಿರ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆದರೆ ವಾಹನದಲ್ಲಿದ್ದ ಮತ್ತೋರ್ವ ಆರೋಪಿ ಮಡಿಕೇರಿ ತ್ಯಾಗರಾಜ ಕಾಲೋನಿ ನಿವಾಸಿ ಆಶಿಕ್ ಎಂಬಾತ ಪರಾರಿಯಾಗಿದ್ದಾನೆ.

ಮರ ಸಾಗಿಸಲು ಬಳಸಿದ ವಾಹನ ಸಹಿತ ಬೀಟೆಮರದ ನಾಟಾಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಕಾರ್ಯಾ ಚರಣೆಯಲ್ಲಿ ಕುಶಾಲನಗರ ವಲಯ ಡಿಆರ್‍ಎಫ್‍ಓ ಕನ್ನಂಡ ರಂಜನ್, ಆರ್ ಎಫ್‍ಓ ಸಿ.ಆರ್.ಅರುಣ್, ಸಿಬ್ಬಂದಿಗಳಾದ ಸಂತೋಷ್, ಪೊನ್ನಪ್ಪ, ಗಿರೀಶ್, ಸತೀಶ್, ಶಾಂತ ಮತ್ತು ಸಂಜು ಪಾಲ್ಗೊಂಡಿದ್ದರು.

Translate »