ಯೋಗವಾಕ್ ಜಾಗೃತಿ ಜಾಥಾಗೆ ಎಡಿಸಿ ಡಿ.ಎಂ.ಸತೀಶ್ ಕುಮಾರ್ ಚಾಲನೆ
ಕೊಡಗು

ಯೋಗವಾಕ್ ಜಾಗೃತಿ ಜಾಥಾಗೆ ಎಡಿಸಿ ಡಿ.ಎಂ.ಸತೀಶ್ ಕುಮಾರ್ ಚಾಲನೆ

June 18, 2018

ಮಡಿಕೇರಿ: ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪೂರ್ವ ಭಾವಿಯಾಗಿ ಭಾನುವಾರ ನಗರದಲ್ಲಿ ಯೋಗವಾಕ್ ಜರುಗಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ಯೋಗಥಾನ್ ಜಾಗೃತಿ ಜಾಥಾಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್ ಅವರು ಚಾಲನೆ ನೀಡಿದರು.

ನಗರದ ಗಾಂಧಿ ಮೈದಾನದಲ್ಲಿ ಚಾಲನೆ ನೀಡಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ಅವರು, ಯೋಗವು ಜೀವನದ ಅವಿಭಾಜ್ಯ ಅಂಗವಾಗಿದ್ದು, ಪ್ರತಿನಿತ್ಯ ಯೋಗದಲ್ಲಿ ತೊಡಗಿಸಿಕೊಳ್ಳುವುದರಿಂದ ಹಲವು ಕಾಯಿಲೆ ಗಳಿಂದ ದೂರವಿರಬಹುದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಯೋಗ ಸಹಕಾರಿಯಾಗಿದ್ದು, ಯೋಗದ ಮಹತ್ವ ಮತ್ತು ಪ್ರಯೋಜನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯೋಗವಾಕ್ ಆಯೋಜಿಸಲಾಗಿದೆ ಎಂದು ಡಿ.ಎಂ. ಸತೀಶ್ ಕುಮಾರ್ ತಿಳಿಸಿದರು. ಡಿವೈಎಸ್‍ಪಿ ಸುಂದರರಾಜ್ ಮಾತನಾಡಿ, ಇಂದಿನ ಶರವೇಗದ ಬದುಕಿನಲ್ಲಿ ಒತ್ತಡ ದಿಂದ ಪಾರಾಗಲು ಯೋಗ ಸಹಕಾರಿ ಯಾಗಿದೆ ಎಂದು ಅಭಿಪ್ರಾಯಪಟ್ಟರು.

ಯೋಗವಾಕ್ ಜಾಗೃತಿ ಜಾಥಾವು ನಗರದ ಗಾಂಧಿ ಮೈದಾನದಿಂದ ಹೊರಟು, ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮೂಲಕ ಪ್ರಮುಖ ಮುಖ್ಯ ರಸ್ತೆ ಮಾರ್ಗ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಕಾಲೇಜು ರಸ್ತೆ, ಕೋಹಿನೂರು ರಸ್ತೆ ಮೂಲಕ ಕೆಎಸ್ ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಬಂದು ಜೂನಿಯರ್ ಕಾಲೇಜು ರಸ್ತೆ ಮುಖಾಂ ತರ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿಯ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪ ದಲ್ಲಿ ಕೊನೆಗೊಂಡಿತು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಚ್.ರಾಮಚಂದ್ರ, ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಜಗದೀಶ್, ಯೋಗ ತರಬೇತಿದಾರರಾದ ರಮೇಶ್ ಕುಮಾರ್ ಇತರರು ಇದ್ದರು.

Translate »