ಯೋಗ ಮಂಥನ ಕೃತಿ ಬಿಡುಗಡೆ
ಮೈಸೂರು

ಯೋಗ ಮಂಥನ ಕೃತಿ ಬಿಡುಗಡೆ

June 21, 2020

ಮೈಸೂರು, ಜೂ.20 (ಪಿಎಂ)- ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಯೋಗ ಸ್ಪೋಟ್ರ್ಸ್ ಫೌಂಡೇಷನ್ ಹಾಗೂ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಿಂದ ಪಿ.ಎನ್.ಗಣೇಶ್‍ಕುಮಾರ್ ಅವರ `ಯೋಗ ಮಂಥನ’(ಭಾಗ 1-2) ಪುಸ್ತಕವನ್ನು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಬಿಡುಗಡೆ ಗೊಳಿಸಲಾಯಿತು.

ಅಧ್ಯಾತ್ಮ ಚಿಂತಕಿ ಸುಚರಿತ ಮಾತಾಜಿ ಹಾಗೂ ಸರ್ಕಾರಿ ಹೈಟೆಕ್ ಪಂಚಕರ್ಮ ಆಸ್ಪತ್ರೆ ಆರ್‍ಎಂಓ ಡಾ.ಶಶಿರೇಖಾ ಪುಸ್ತಕ ಗಳನ್ನು ಬಿಡುಗಡೆಗೊಳಿಸಿದರು. ಪ್ರಾಚೀನ, ಪರಿಪೂರ್ಣ ವಿಜ್ಞಾನವೇ ಯೋಗ. ಯೋಗಾಭ್ಯಾಸದ ವಿವಿಧ ವಿಚಾರಗಳ ಮೇಲೆ ಬೆಳಕು ಚೆಲ್ಲಲು ಕೃತಿ ರಚಿಸಿದ್ದೇನೆ ಎಂದು ಗಣೇಶ್‍ಕುಮಾರ್ ಹೇಳಿದರು.

ಬಳಿಕ ಯೋಗ ಪಟುಗಳಾದ ಸೌರಭ, ಅಂಕಿತಾ, ವಂಶಿಕಾ, ಸಾಗರಿ, ಧನುಶ್ರೀ, ಮುಕ್ತಾ, ಶೃಜನ್‍ರಾವ್, ವರ್ಷಾ, ಬ್ರಿಟಿ, ಉಷಾ ಯೋಗ ಪ್ರದರ್ಶನ ನೀಡಿದರು. ಯೋಗ ಸ್ಪೋಟ್ರ್ಸ್ ಫೌಂಡೇಷನ್ ಕಾರ್ಯದರ್ಶಿ ಭಾಸ್ಕರ್, ಸಂಘಟನಾ ಕಾರ್ಯದರ್ಶಿ ಗೀತಾಕುಮಾರ್ ಮತ್ತಿತರರಿದ್ದರು.

 

Translate »