ನಾಳೆಯಿಂದ ಮೈಸೂರಲ್ಲಿ 2 ದಿನ ಅಂತಾರಾಷ್ಟ್ರೀಯ ಯೋಗ ಸಮ್ಮೇಳನ
ಮೈಸೂರು

ನಾಳೆಯಿಂದ ಮೈಸೂರಲ್ಲಿ 2 ದಿನ ಅಂತಾರಾಷ್ಟ್ರೀಯ ಯೋಗ ಸಮ್ಮೇಳನ

November 14, 2019

ಮೈಸೂರು,ನ.13(ಆರ್‍ಕೆಬಿ)- ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ವತಿಯಿಂದ ಮೈಸೂರಿನಲ್ಲಿ ನ.15, 16 ರಂದು `ಹೃದಯ ಆರೈಕೆಗಾಗಿ ಯೋಗ’ ಕುರಿತಂತೆ 2 ದಿನಗಳ ಅಂತಾರಾಷ್ಟ್ರೀಯ ಯೋಗ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕೇಂದ್ರದ ಆಯುಷ್ ಇಲಾಖೆ ನಿರ್ದೇಶಕ ವಿಕ್ರಮ್ ಸಿಂಗ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ವಿವರಗಳನ್ನು ನೀಡಿದ ಅವರು, ಮೈಸೂ ರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಆವರಣದಲ್ಲಿ ನಡೆಯುವ ಸಮ್ಮೇ ಳನದಲ್ಲಿ 15ಕ್ಕೂ ಹೆಚ್ಚು ದೇಶಗಳ ಹಾಗೂ ಭಾರತದ 700ಕ್ಕೂ ಹೆಚ್ಚು ಅತಿಥಿಗಳು ವಿಷಯ ಮಂಡಿಸಲಿದ್ದಾರೆ ಎಂದರು.

ಆಧುನಿಕ ಜೀವನ ಶೈಲಿ, ಒತ್ತಡ, ಚಟ ಮೊದಲಾದವುಗಳಿಂದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ `ಹೃದಯದ ಆರೈಕೆಗಾಗಿ ಯೋಗ ಘೋಷವಾಕ್ಯದಡಿ ಸಮ್ಮೇಳನ ಆಯೋಜಿಸಲಾಗಿದೆ. ನ.15 ರಂದು ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು, ಸಂಸದ ಪ್ರತಾಪ ಸಿಂಹ, ಪತಂಜಲಿ ಯೋಗಪೀಠ ಸಂಸ್ಥಾಪಕ ಬಾಬಾ ರಾಮ್‍ದೇವ್, ಡಾ.ಹೆಚ್.ಆರ್. ನಾಗೇಂದ್ರ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ವೈದ್ಯ ರಾಜೇಶ್ ಕಟೋಚ, ಮುಕ್ತ ವಿವಿ ಕುಲಪತಿ ಪೆÇ್ರ.ಎಸ್.ವಿದ್ಯಾಶಂಕರ್ ಮುಖ್ಯ ಅತಿಥಿ ಯಾಗಿ ಭಾಗವಹಿಸುವರು. ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿದೇವಿ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ಸಮ್ಮೇಳನವನ್ನು ಕಳೆದ 4 ವರ್ಷಗಳಿಂದ ದೆಹಲಿಯಲ್ಲಿ ಮಾತ್ರ ಆಯೋಜಿಸಲಾಗುತ್ತಿತ್ತು. ಮೈಸೂರು ಯೋಗ ನಗರಿ. ಯೋಗ ಪರಂಪರೆ ಉಳಿಸಿ ಕೊಂಡಿದೆ. ಬೇರೆ ನಗರಗಳಿಗಿಂತ ಮೈಸೂರಿ ನಲ್ಲಿ ಯೋಗಕ್ಕೆ ವಿಶಿಷ್ಟ ಸ್ಥಾನವಿದೆ. ಹೀಗಾಗಿ ಈ ಬಾರಿ 5ನೇ ಅಂತಾರಾಷ್ಟ್ರೀಯ ಯೋಗ ಸಮ್ಮೇಳವನ್ನು ಮೊದಲ ಬಾರಿಗೆ ಮೈಸೂ ರಿನಲ್ಲಿ ಆಯೋಜಿಸಲಾಗಿದೆ ಎಂದರು.

ವಿಶ್ವವ್ಯಾಪಿಯಾಗಿರುವ ಯೋಗ ರೋಗ ಗಳನ್ನು ಗುಣಪಡಿಸುತ್ತದೆ ಎನ್ನುವುದಕ್ಕೆ ವೈಜ್ಞಾ ನಿಕ ಕಾರಣಗಳೇನು ಎಂದು ಹಲವರು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರವಾಗಿ ಈ ಸಮ್ಮೇ ಳನದಲ್ಲಿ ಯೋಗದ ವೈಜ್ಞಾನಿಕ ಅಂಶಗಳ ಬಗ್ಗೆ ಗೋಷ್ಠಿ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಆಯುರ್ವೇದ ಮಹಾವಿದ್ಯಾ ಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಗಜಾನನ ಹೆಗ್ಡೆ, ಹೈಟೆಕ್ ಪಂಚಕರ್ಮ ಆಯುರ್ವೇದ ಆಸ್ಪತ್ರೆ ನಿರ್ದೇಶಕ ವಿಜಯ ಮಹಂತೇಶ ಹೂಗಾರ ಉಪಸ್ಥಿತರಿದ್ದರು.

Translate »