ಮೈಸೂರು ಮೃಗಾಲಯಕ್ಕೆ ನೆರವು ನೀಡಲು ಮನವಿ
ಮೈಸೂರು

ಮೈಸೂರು ಮೃಗಾಲಯಕ್ಕೆ ನೆರವು ನೀಡಲು ಮನವಿ

June 21, 2020

ಮೈಸೂರು, ಜೂ.20- ಮೈಸೂರಿನ ಪ್ರತಿಯೊಬ್ಬರೂ ಮೃಗಾ ಲಯದ ನೆರವಿಗೆ ಕೈಚಾಚುವಂತೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ. ಸ್ನೇಹಿತರ ಸಹಕಾರದೊಂದಿಗೆ 20 ಸಾವಿರ ರೂ.ಗಳನ್ನು ಶನಿವಾರ ಮೃಗಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಚಾಮುಂಡಿಬೆಟ್ಟ, ಅರಮನೆ ಜೊತೆಗೆ ಮೃಗಾಲಯವೂ ಪ್ರವಾಸಿಗರ ನೆಚ್ಚಿನ ಸ್ಥಳ. ಆದರೆ ಕೊರೊನಾ ಪರಿಣಾಮದಿಂದ ಎರಡೂವರೆ ತಿಂಗಳು ಬಂದ್ ಮಾಡಿದ್ದರಿಂದ ಮೃಗಾಲಯದ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎಂದರು.

ಇತ್ತೀಚೆಗೆ ಎಸ್‍ಓಪಿ ಮೂಲಕ ಮೃಗಾಲಯವನ್ನು ತೆರೆದಿದ್ದರೂ ಬೆರಳೆಣಿಕೆಯಷ್ಟು ವೀಕ್ಷಕರು ಭೇಟಿ ನೀಡುತ್ತಿದ್ದಾರೆ. ಪ್ರಾಣಿ-ಪಕ್ಷಿಗಳು, ಅವುಗಳ ಪಾಲಕರ ನಿರ್ವಹಣೆ ಸುಲಭದ ಮಾತಲ್ಲ. ಆದರೂ ಲಾಕ್‍ಡೌನ್ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮ ಶೇಖರ್ ಅವರ ಆಸಕ್ತಿಯಿಂದ ಸುಮಾರು ಮೂರೂವರೆ ಕೋಟಿ ರೂ. ದೇಣಿಗೆ ಬಂದಿದೆ. ಹಲವರು ಪ್ರಾಣಿ-ಪಕ್ಷಿಗಳ ದತ್ತು ಪಡೆ ಯುವ ಮೂಲಕ ಮೃಗಾಲಯಕ್ಕೆ ನೆರವಾಗಿದ್ದಾರೆ. ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷರಾದ ಸುಧಾಮೂರ್ತಿ ಅವರಂತಹ ಹೃದಯ ವಂತರು ಸಹಾಯ ಹಸ್ತ ಚಾಚಿರುವುದು ಅಭಿನಂದನಾರ್ಹ.

2_Page

ಕೊರೊನಾ ಜೊತೆಗೆ ಹೊಂದಿಕೊಂಡು ಮುನ್ನೆಚ್ಚರಿಕೆಯೊಂ ದಿಗೆ ಜೀವನ ನಡೆಸುವುದು ಅನಿವಾರ್ಯವಾದ್ದರಿಂದ ಎಲ್ಲಾ ಚಟುವಟಿಕೆ ಆರಂಭಿಸಲಾಗಿದೆ. ಆದರೆ ಪ್ರವಾಸೋದ್ಯಮ ತಕ್ಷಣಕ್ಕೆ ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ಹೊರ ರಾಜ್ಯಗಳಿಂದ ಪ್ರವಾಸಿಗರು ಬರಲು ಸಾಕಷ್ಟು ತಿಂಗಳು ಕಳೆಯಬೇಕು. ಅಲ್ಲಿಯವರೆಗೆ ಮೃಗಾ ಲಯದ ನಿರ್ವಹಣೆಗೆ ಸಾರ್ವಜನಿಕರು ನೆರವಾಗಬೇಕಿದೆ. ಮೈಸೂರು ನಗರದ ವ್ಯಾಪ್ತಿಯಲ್ಲೇ 12 ಲಕ್ಷಕ್ಕೂ ಹೆಚ್ಚು ಜನರಿದ್ದೇವೆ. ಕೆಲವೊಮ್ಮೆ ಅನಗತ್ಯವಾಗಿ ಸಾವಿರಾರು ರೂ. ವ್ಯಯಿಸುತ್ತೇವೆ. ಈ ಹಣದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರ ಒದಗಿಸಬಹುದು. ಪ್ರತಿಯೊಬ್ಬರು ತಲಾ ಕನಿಷ್ಠ 100 ರೂ.ಗಳಿಂದ ತಮ್ಮ ಶಕ್ತಿಯನುಸಾರ ಮೃಗಾ ಲಯಕ್ಕೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆ ಯೋಣ ಎಂದು ಸಂದೇಶ್ ಸ್ವಾಮಿ ಕೋರಿದ್ದಾರೆ.

Translate »