ಚುನಾವಣೆ, ಪರೀಕ್ಷೆ, ಹೆಚ್ಚಿದ ತಾಪಮಾನ ಎಫೆಕ್ಟ್ಕುಗ್ಗಿದ ಮೈಸೂರು ಪ್ರವಾಸೋದ್ಯಮ
ಮೈಸೂರು

ಚುನಾವಣೆ, ಪರೀಕ್ಷೆ, ಹೆಚ್ಚಿದ ತಾಪಮಾನ ಎಫೆಕ್ಟ್ಕುಗ್ಗಿದ ಮೈಸೂರು ಪ್ರವಾಸೋದ್ಯಮ

April 21, 2019

ಮೈಸೂರು: ದೇಶದಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ಹೆಚ್ಚಿದ ತಾಪಮಾನದ ಹಿನ್ನೆಲೆಯಲ್ಲಿ ಮೈಸೂರಿನ ಪ್ರವಾಸೋದ್ಯಮ ಬಾಡಿ ಹೋಗಿದ್ದು, ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ.

ಸದಾ ಗಿಜಿಗುಡುತ್ತಿದ್ದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ್ದು, ಹೋಟೆಲ್ ಉದ್ಯಮ, ವಿವಿಧ ವ್ಯಾಪಾರೋದ್ಯಮ ಕುಗ್ಗಿದೆ. ಸಾಮಾನ್ಯ ವಾಗಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಮೈಸೂರಿನತ್ತ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಿರುತ್ತದೆ. ವಿದ್ಯಾರ್ಥಿಗಳ ಪರೀಕ್ಷೆ ನಡೆ ಯುವ ಹಿನ್ನೆಲೆಯಲ್ಲಿ ಮಾರ್ಚ್ ಎರಡನೇ ವಾರದಿಂದ ಪ್ರವಾಸಿಗರು ಸಾಂಸ್ಕøತಿಕ ನಗರಿಯತ್ತ ಧಾವಿಸುವುದು ವಾಡಿಕೆಯಾಗಿತ್ತು. ಈ ಅವಧಿ ಯಲ್ಲಿ ಕೇರಳ, ಆಂಧ್ರ, ತೆಲಂಗಾಣ, ತಮಿಳು ನಾಡು, ಮಹಾರಾಷ್ಟ್ರ, ಗುಜ ರಾತ್ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳ ಪ್ರವಾಸಿ ಗರು ತಂಡೋಪತಂಡವಾಗಿ ಬರುತ್ತಿದ್ದರು. ಇದರೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಪ್ರವಾಸಿಗರು ಮೈಸೂರು ಹಾಗೂ ಸುತ್ತಮುತ್ತ ಲಿನ ಪ್ರೇಕ್ಷಣೀಯ ಸ್ಥಳಕ್ಕೆ ಬಂದು ಆನಂದಿ ಸುತ್ತಿದ್ದರು. ಆದರೆ ಇದುವರೆಗೂ ಮೈಸೂ ರಿನತ್ತ ಪ್ರವಾಸಿಗರು ಆಗಮಿಸದೆ ಇರುವುದು ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಚುನಾವಣೆಯಿಂದ ಬರೆ: ದೇಶದಾದ್ಯಂತ 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖ ವಾಗಿದೆ. ಈ ಬಾರಿ ಮತದಾನ ಮಾಡುವ ಕುರಿ ತಂತೆ ಜಾಗೃತಿ ಕಾರ್ಯಕ್ರಮ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅನೇಕ ಪ್ರವಾಸಿಗರು ತಮ್ಮ ತಮ್ಮ ಪ್ರವಾಸ ರದ್ದು ಮಾಡಿರುವುದೇ ಪ್ರವಾಸೋ ದ್ಯಮ ಕುಗ್ಗುವಂತಾಗಿದೆ. ಅಲ್ಲದೆ ಎಲ್ಲೆಡೆ ತಪಾಸಣೆ ಹೆಚ್ಚಾಗಿ ನಡೆಯು ತ್ತಿರುವುದರಿಂದ ಪ್ರವಾಸಿಗರು ಚುನಾವಣೆ ಮುಗಿಯುವವರೆಗೂ ಎಲ್ಲಿಯೂ ಪ್ರವಾಸಕ್ಕೆ ಹೋಗ ಬಾರದೆಂದು ನಿರ್ಧರಿಸಿರುವಂತೆ ಕಂಡು ಬಂದಿದೆ.

ಪರೀಕ್ಷಾ ಸಮಯ: ಶಾಲಾ-ಕಾಲೇಜು ವಿದ್ಯಾರ್ಥಿ ಗಳಿಗೆ ಪರೀಕ್ಷೆ ನಡೆಯುತ್ತಿರುವುದ ರಿಂದ ಪ್ರವಾಸಕ್ಕೆ ಬರುವವರ ಸಂಖ್ಯೆ ಕಡಿಮೆ ಯಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಪದವಿ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಯುತ್ತಿರುವುದರಿಂದ ಸಹಜವಾಗಿ ಪೋಷಕರು ಮಕ್ಕಳನ್ನು ಬಿಟ್ಟು ಪ್ರವಾಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಪ್ರವಾಸೋದ್ಯಮ ಕುಂದಲು ಪರೀಕ್ಷೆಯೂ ಒಂದು ಕಾರಣವಾಗಿದೆ.

ಹೆಚ್ಚಿದ ಬಿಸಿಲು: ಕಳೆದ ಸಾಲಿಗಿಂತ ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಿದೆ. ಮೈಸೂರು ಜಿಲ್ಲೆಯಲ್ಲಿ 34 ಡಿಗ್ರಿ ಸೆಲ್ಷಿಯಸ್ ಇದ್ದ ತಾಪಮಾನ ಈ ಬಾರಿ 39 ಡಿಗ್ರಿ ಸೆಲ್ಷಿಯಸ್ ತಲುಪಿದ್ದು, ಜನರನ್ನು ಕಂಗೆಡಿಸಿದೆ. ಇದರಿಂದ ಸ್ಥಳೀಯರು ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ಅಲ್ಲದೆ ನೀರಿರುವ ಪ್ರವಾಸಿ ತಾಣಕ್ಕಷ್ಟೇ ತಮ್ಮ ಪ್ರವಾಸ ವನ್ನು ಸೀಮಿತಗೊಳಿಸುತ್ತಿದ್ದಾರೆ.

ಶೇ.50ರಷ್ಟು ಕಡಿತ: ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಮೈಸೂರಿನಲ್ಲಿ ಮಾರ್ಚ್ ತಿಂಗಳಿಂದ ಪ್ರವಾಸೋದ್ಯಮ ಶೇ.50ರಷ್ಟು ಕಡಿಮೆಯಾಗಿದೆ. ಶನಿವಾರ, ಭಾನುವಾರದಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಪ್ರವಾಸಿಗರು ಮೈಸೂರಿಗೆ ಬರುತ್ತಿದ್ದಾರೆ. ಉಳಿದ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ಮೈಸೂರಿನಲ್ಲಿ 750ಕ್ಕೂ ಹೆಚ್ಚು ಹೊಟೇಲ್‍ಗಳಿವೆ. ವಸತಿ ಗೃಹಗಳಲ್ಲಿ ಎಲ್ಲಾ ದರ್ಜೆಯ 8 ಸಾವಿರ ಕೊಠಡಿಗಳಿವೆ. ರಜೆ ದಿನದಲ್ಲಿ 4 ಸಾವಿರ ರೂಮ್ ಬುಕ್ ಆಗುತ್ತಿದ್ದರೆ, ಸಾಮಾನ್ಯ ದಿನಗಳಲ್ಲಿ ಎರಡು ಸಾವಿರ ರೂಮ್‍ಗಳಲ್ಲಿ ಪ್ರವಾಸಿಗರು ವಾಸ್ತವ್ಯ ಹೂಡುತ್ತಿದ್ದಾರೆ. ರಾಜ್ಯ ದಲ್ಲಿ ಎರಡನೇ ಹಂತದ ಚುನಾವಣೆ ಏ.23ರಂದು ನಡೆಯಲಿರುವುದರಿಂದ ರಾಜ್ಯದ ಪ್ರವಾಸಿಗರೂ ಮೈಸೂರಿಗೆ ಬರಲು ಹಿಂಜರಿಯುತ್ತಿದ್ದಾರೆ. ಏ.23ರ ನಂತರವಷ್ಟೇ ಬೇರೆ ಬೇರೆ ಜಿಲ್ಲೆಗಳ ಜನರು ಮೈಸೂರಿನತ್ತ ಬರುವ ನಿರೀಕ್ಷೆ ನಮ್ಮಲ್ಲಿದೆ. ಮೇ18ಕ್ಕೆ ಕೊನೆ ಹಂತದ ಚುನಾವಣೆ ಮುಗಿಯುವುದರಿಂದ, ಮೇ 20 ಅಥವಾ 23ರ ನಂತರವಷ್ಟೇ ಮೈಸೂರಿನ ಪ್ರವಾಸೋದ್ಯಮ ಚೇತರಿಸಿಕೊಳ್ಳಲಿದೆ. ಆದರೆ ಇಂದು (ಶನಿವಾರ) ಹಾಗೂ ನಾಳೆ (ಭಾನುವಾರ) ಮಾತ್ರ ಶೇ. ನೂರರಷ್ಟು ವಸತಿಗೃಹಗಳು ಬುಕ್ಕಿಂಗ್ ಆಗಿರುವುದು ಸಮಾಧಾನದ ಸಂಗತಿ ಎಂದರು.

ಅರಮನೆಗೆ: ಚುನಾವಣೆ ನಡುವೆಯೂ ವಿಶ್ವ ಪ್ರಸಿದ್ಧ ಮೈಸೂರು ಅರಮನೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಮುಖವಾಗಿಲ್ಲ. ಸಾಮಾನ್ಯವಾಗಿ ದಿನವೊಂದಕ್ಕೆ 8ರಿಂದ 9 ಸಾವಿರ ಪ್ರವಾಸಿಗರು, ರಜೆ ದಿನಗಳಲ್ಲಿ 13 ರಿಂದ 15 ಸಾವಿರ ಪ್ರವಾಸಿಗರು ಅರಮನೆಗೆ ಭೇಟಿ ನೀಡುತ್ತಿದ್ದರು. ಆದರೆ ಮಾರ್ಚ್‍ನಿಂದ ಏ.19ರವರೆಗೆ ಸಾಮಾನ್ಯ ದಿನಗಳಲ್ಲಿ 5ರಿಂದ 6 ಸಾವಿರ, ರಜೆ ದಿನಗಳಲ್ಲಿ 11ರಿಂದ 12 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ. 2016-17ನೇ ಸಾಲಿನಲ್ಲಿ 33,24,454 ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ್ದರೆ, 2017-18ನೇ ಸಾಲಿನಲ್ಲಿ 38,61,162, 2018-19ನೇ ಸಾಲಿನಲ್ಲಿ 37,40,839 ಪ್ರವಾಸಿಗರು ಭೇಟಿ ನೀಡಿ, ಅರಮನೆಯ ಸೌಂದರ್ಯವನ್ನು ಆಸ್ವಾದಿಸಿದ್ದಾರೆ. ಈ ಕುರಿತಂತೆ ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದೆ. ಆದರೆ ಭಾರಿ ಪ್ರಮಾಣದಲ್ಲಿ ಅರಮನೆಗೆ ಪ್ರವಾಸಿಗರ ಕೊರತೆ ಎದುರಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಮೃಗಾಲಯದಲ್ಲಿ: ಮೈಸೂರಿನ ಮೃಗಾಲಯಕ್ಕೂ ಪ್ರವಾಸಿಗರ ಸಂಖ್ಯೆ ತೀರ ಇಳಿಮುಖವಾಗಿಲ್ಲ. ಪ್ರತಿದಿನ ಸರಾಸರಿ 8 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಯಾವ ಪ್ರಮಾಣದಲ್ಲಿ ಪ್ರವಾಸಿಗರು ಮೃಗಾಲಯಕ್ಕೆ ಬರುತ್ತಿದ್ದರೋ ಅದೇ ಪ್ರಮಾಣದಲ್ಲಿ ಪ್ರವಾಸಿಗರು ಮೃಗಾಲಯಕ್ಕೆ ಬರುತ್ತಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ.

ಟ್ರಾವೆಲ್ಸ್: ಮಾರ್ಚ್‍ನಿಂದ ಏ.18ರವರೆಗೆ ಪ್ರವಾಸೋದ್ಯಮ ಕುಂಠಿತವಾಗಿತ್ತು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ರಜೆ ಹಾಕಲು ಸಾಧ್ಯವಾಗದ ಕಾರಣ ಹಾಗೂ 14 ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಪ್ರವಾಸೋದ್ಯಮ ಕುಗ್ಗಿತ್ತು. ಆದರೆ ಕಾರ್‍ನಿಂದ 35 ಆಸನದ ಬಸ್‍ವರೆಗೂ 800 ಪ್ರವಾಸಿಗರ ವಾಹನ ಮೈಸೂರಿನಲ್ಲಿವೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸಿದ್ದಾರೆ. ಇದರಿಂದ ಎಲ್ಲಾ ವಾಹನಗಳು ಪ್ರವಾಸಿಗರನ್ನು ಕರೆದೊಯ್ದಿವೆ. ನಾಳೆಯಿಂದ(ಏ.21) ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತದೆ ಎಂದು ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ.

Translate »