ಬ್ರಿಟೀಷ್ ಪೌರತ್ವ ತಂದ ಸಂಕಷ್ಟ ರಾಹುಲ್ ಗಾಂಧಿ ನಾಮಪತ್ರ ಪರಿಶೀಲನೆ ಮುಂದಕ್ಕೆ
ಮೈಸೂರು

ಬ್ರಿಟೀಷ್ ಪೌರತ್ವ ತಂದ ಸಂಕಷ್ಟ ರಾಹುಲ್ ಗಾಂಧಿ ನಾಮಪತ್ರ ಪರಿಶೀಲನೆ ಮುಂದಕ್ಕೆ

April 21, 2019

ಅಮೇಥಿ:ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಮಪತ್ರದ ಜತೆಗೆ ಸಲ್ಲಿಕೆಯಾಗಿದ್ದ ದಾಖಲೆಗಳಲ್ಲಿ ಕೆಲ ತಪ್ಪು ಮಾಹಿತಿ ಇರುವ ದೂರು ಬಂದಿದ್ದ ಹಿನ್ನೆಲೆಯಲ್ಲಿ ನಾಮಪತ್ರ ಪರಿಶೀಲನೆಯನ್ನು ಏಪ್ರಿಲ್ 22ಕ್ಕೆ ಮುಂದೂಡಬೇಕೆಂದು ಅಮೇಥಿ ಚುನಾವಣಾ ಅಧಿಕಾರಿ  ರಾಮ್ ಮನೋಹರ್ ಮಿಶ್ರಾ ಆದೇಶಿಸಿದ್ದಾರೆ.

ಸ್ವತಂತ್ರ ಅಭ್ಯರ್ಥಿ ಧ್ರುವ್‍ಲಾಲ್, ರಾಹುಲ್ ಅವರ ದಾಖಲೆಗಳಲ್ಲಿ ಗೊಂದಲಗಳಿವೆ ಎಂದು ದೂರು ಸಲ್ಲಿಸಿದ್ದರು. ಈ ಕುರಿತಂತೆ ನಾವು ಪ್ರಮುಖವಾಗಿ ಮೂರು ಪ್ರಶ್ನೆಗಳನ್ನಿಟ್ಟಿ ದ್ದೇವೆ ಎಂದು ಲಾಲ್ ಪರ ವಕೀಲರು ಹೇಳಿದ್ದಾರೆ. ಮೊದಲನೆಯದಾಗಿ ರಾಹುಲ್ ಗಾಂಧಿ ಯುಕೆ ಪ್ರಜೆಯಾಗಿದ್ದಾರೆ. ಅವರು ಯುಕೆನಲ್ಲಿ ಒಂದು ಕಂಪನಿಯನ್ನು ನೋಂದಾಯಿಸಿದ್ದು, ಆ ಕಂಪನಿ ನೋಂದಾವಣೆ ಪ್ರಮಾಣಪತ್ರದಲ್ಲಿ ಇದನ್ನು ಉಲ್ಲೇಖಿಸ ಲಾಗಿದೆ. ಆದರೆ ಭಾರತೀಯ ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಯಾವುದೇ ವಿದೇಶೀ ಪ್ರಜೆ ಭಾರತೀಯ ಚುನಾವಣೆಯಲ್ಲಿ ಸ್ಪರ್ಧಿಸಬಾರದು. “ಅವರು ಯಾವ ಆಧಾರದ ಮೇಲೆ ಬ್ರಿಟಿಷ್ ನಾಗರಿಕರಾಗಿದ್ದಾರೆ? ಈಗ ಅವರು ಭಾರತೀಯ ಪೌರತ್ವವನ್ನು ಹೇಗೆ ಪಡೆದರು? ಈ ವಿಷಯದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ,

ನಾವು ರಾಹುಲ್ ಗಾಂಧಿಯವರ ನಾಮಪತ್ರಗಳನ್ನು ಸ್ವೀಕರಿಸದಂತೆ ಚುನಾವಣಾ ಧಿಕಾರಿಗಳಿಗೆ ಮನವಿ ಮಾಡಿದ್ದೇವೆ” ಎಂದು ಲಾಲ್ ಪರ ವಕೀಲರಾದ ರವಿ ಪ್ರಕಾಶ್ ಹೇಳಿದ್ದಾರೆ. 2003ರಿಂದ 2009ರ ನಡುವೆ ಯುಕೆ ಕಂಪನಿಯ ಆಸ್ತಿ ಮತ್ತು ಸ್ವತ್ತುಗಳ ಕುರಿತು ರಾಹುಲ್ ಅವರ ಚುನಾವಣಾ ಅಫಿಡವಿಟ್‍ನಲ್ಲಿ ಯಾವುದೇ ವಿವರಗಳಿಲ್ಲ ಎಂದು ವಕೀಲರು ಆರೋಪಿಸಿದ್ದಾರೆ. ಇನ್ನು ರಾಹುಲ್ ಅವರ ಶೈಕ್ಷಣಿಕ ಅರ್ಹತೆಗಳಲ್ಲಿ ಬಹಳಷ್ಟು ಸಮಸ್ಯೆಗಳಿವೆ ಎಂದು ಆರೋಪಿಸಿರುವ ರವಿಪ್ರಕಾಶ್, ಅವರ ವಿದ್ಯಾರ್ಹತೆಗಳು ದಾಖಲೆಗಳಲ್ಲಿನ ವಿವರಗಳಿಗೆ ಹೊಂದಾಣಿಕೆ ಆಗುತ್ತಿಲ್ಲ.ಅವರು ತಮ್ಮ ಕಾಲೇಜಿನಲ್ಲಿ ರೌಲ್ ವಿನ್ಸಿ ಎಂದು ಹೆಸರು ಬಳಸಿದ್ದು, ರಾಹುಲ್ ಗಾಂಧಿ ಎಂಬ ಹೆಸರಿನಲ್ಲಿ ಯಾವುದೇ ಪ್ರಮಾಣಪತ್ರಗಳಿಲ್ಲ.

“ಹಾಗಾದರೆ, ರಾಹುಲ್ ಗಾಂಧಿ ಮತ್ತು ರೌಲ್ ವಿನ್ಸಿ ಒಬ್ಬರೆಯೆ? ಎಂದು ನಾವು ಪ್ರಶ್ನಿಸಬೇಕಿದೆ. ಹಾಗಲ್ಲದಿದ್ದಲ್ಲಿ ರಾಹುಲ್ ತಮ್ಮ ಮೂಲ ವಿದ್ಯಾರ್ಹತೆಯ ಅಂಕಪಟ್ಟಿಯನ್ನು ನೀಡಬೇಕು. ಆಗ ಅವುಗಳ ಪರಿಶೀಲನೆ ನಡೆಯಬೇಕು.

ಗಾಂಧಿ ಕುಟುಂಬದ ಸಾಂಪ್ರದಾಯಿಕ ಭದ್ರಕೋಟೆಯಾದ ಅಮೇಥಿಯಲ್ಲಿ ಮೇ6 ರಂದು ಚುನಾವಣೆ ನಡೆಯಲಿದೆ. ಮೇ 23 ರಂದು ಮತಗಳ ಎಣಿಕೆ ನಡೆಯಲಿದೆ.

 

Translate »