ವಿವಿಧೆಡೆ ಐಟಿ ಅಧಿಕಾರಿಗಳ ಕಾರ್ಯಾಚರಣೆ ಚುನಾವಣೆಗೆ ಹಂಚಲು ಸಂಗ್ರಹಿಸಿಟ್ಟಿದ್ದ 4 ಕೋಟಿಗೂ ಹೆಚ್ಚು ಹಣ ವಶ
ಮೈಸೂರು

ವಿವಿಧೆಡೆ ಐಟಿ ಅಧಿಕಾರಿಗಳ ಕಾರ್ಯಾಚರಣೆ ಚುನಾವಣೆಗೆ ಹಂಚಲು ಸಂಗ್ರಹಿಸಿಟ್ಟಿದ್ದ 4 ಕೋಟಿಗೂ ಹೆಚ್ಚು ಹಣ ವಶ

April 21, 2019

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನಕ್ಕೂ ಮುನ್ನ ಶನಿವಾರ ಒಂದೇ ದಿನ ಆದಾಯ ತೆರಿಗೆ ಅಧಿಕಾರಿಗಳು ವಿವಿಧೆಡೆ ಕಾರ್ಯಾಚರಣೆ ನಡೆಸಿ 4 ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಒಂದು ಪ್ರಕರಣದಲ್ಲಿ ಕಾರಿನ ಸ್ಟೆಪ್ನಿ ಟೈರ್ ಒಳಗೆ ಬಚ್ಚಿಟ್ಟಿದ್ದ 2.30 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿ ನಿಂದ ಶಿವಮೊಗ್ಗ ಮತ್ತು ಭದ್ರಾವತಿಗೆ ಹಣ ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರೊಂದನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಸ್ಟೆಪ್ನಿ ಟೈರ್‍ನಲ್ಲಿ 2.30 ಕೋಟಿ ರೂ. ಸಿಕ್ಕಿದೆ ಎಂದು ತಿಳಿಸಿರುವ ಐಟಿ ಅಧಿಕಾರಿಗಳು, ಟೈರ್‍ನಿಂದ ಹಣ ತೆಗೆಯುತ್ತಿರುವ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಅದೇ ವೇಳೆ ಭದ್ರಾವತಿಯಲ್ಲಿ ಕೂಡ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು 60 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಬಾಗಲ ಕೋಟೆಯ ನವನಗರದಲ್ಲಿರುವ ಬ್ಯಾಂಕ್ ಉದ್ಯೋಗಿ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, 1 ಕೋಟಿ ರೂ.ಗಳನ್ನು ವಶಪಡಿಸಿ ಕೊಂಡಿದ್ದು, ಈ ಹಣ ಚುನಾವಣೆಗೆ ಹಂಚಲೆಂದೇ ಸಂಗ್ರಹಿಸಿಡ ಲಾಗಿತ್ತು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. 2 ಪ್ರಕರಣಗಳಲ್ಲಿ ಬೆಳಕಿಗೆ ಬಂದ ಸ್ವಾರಸ್ಯಕರ ವಿಚಾರವೆಂದರೆ, ಪ್ರತಿಯೊಂದು ಕಂತೆಯಲ್ಲಿದ್ದ 100 ನೋಟುಗಳಲ್ಲಿ ನಾಲ್ಕು ನೋಟುಗಳು ನಾಪತ್ತೆಯಾಗಿವೆ. ಇವೆ ಲ್ಲವೂ 2 ಸಾವಿರ ಮುಖಬೆಲೆಯ ನೋಟುಗಳಾಗಿವೆ ಎಂದು ಐಟಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

Translate »