ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮುನ್ಸೂಚನೆಸಂತೋಷ್ ಜೀ ಸಕ್ರಿಯ ರಾಜಕೀಯ ಪ್ರವೇಶ
ಮೈಸೂರು

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮುನ್ಸೂಚನೆಸಂತೋಷ್ ಜೀ ಸಕ್ರಿಯ ರಾಜಕೀಯ ಪ್ರವೇಶ

April 21, 2019

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ಅವರ ಸಕ್ರಿಯ ರಾಜಕೀಯ ಪ್ರವೇಶ ಮಾಜಿ ಸಿಎಂ ಬಿ.ಎಸ್. ಯಡಿ ಯೂರಪ್ಪ ಅವರ ನಾಯಕತ್ವ ಕ್ಷೀಣಿಸಲು ಪ್ರಾರಂಭಿಸಿದೆ.

ಮೊದಲ ಬಾರಿಗೆ ಸಂತೋಷ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವುದಲ್ಲದೆ, ಪ್ರತಿ ಪಕ್ಷಗಳ ವಿರುದ್ಧ ಮಾಧ್ಯಮಗಳಲ್ಲಿ ನೀಡುತ್ತಿರುವ ಹೇಳಿಕೆ ಇದಕ್ಕೆ ಕಾರಣ. ಪ್ರಸ್ತುತ ಚುನಾವಣೆ ಮುಗಿಯುತ್ತಿ ದ್ದಂತೆ ಸಂತೋಷ್ ಪೂರ್ಣವಾಗಿ ರಾಜ್ಯದ ಹೊಣೆಗಾರಿಕೆ ವಹಿಸಿ ಕೊಳ್ಳುತ್ತಾರೆ ಎಂಬ ಮಾತು ಬಿಜೆಪಿ ವಲಯದಲ್ಲಿ ದಟ್ಟವಾಗಿ ಕೇಳಿ ಬಂದಿದೆ. ಯಡಿಯೂರಪ್ಪ ಅವರನ್ನು ಹಿಂದೆ ಸರಿ ಸಲು ಸಂತೋಷ್ ಅವರನ್ನು ತರಲಾಗುತ್ತಿದೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಮೊದಲ ಹಂತದಲ್ಲಿ ರಾಜ್ಯಾ ಧ್ಯಕ್ಷ ಹುದ್ದೆಯಿಂದ ಅವ ರನ್ನು ಕೆಳಗಿಳಿಸಿ, ಹೊಸಬರನ್ನು ನೇಮಕ ಮಾಡುವುದು. ಪ್ರತಿಪಕ್ಷದ ನಾಯಕರಾಗಿ ಯಡಿ ಯೂರಪ್ಪ ಸ್ವಲ್ಪ ದಿನಗಳ ಕಾಲ ಮುಂದುವರಿಯುತ್ತಾರೆ. ನಂತರ ಆ ಪಟ್ಟಕ್ಕೂ ಕುಂದು ಬಂದರೆ ಆಶ್ಚರ್ಯವಿಲ್ಲ.

ಒಂದು ವೇಳೆ ರಾಜ್ಯ ಲೋಕಸಭಾ ಚುನಾವಣಾ ಫಲಿ ತಾಂಶದಲ್ಲಿ ಏರುಪೇರಾಗಿ ಮೈತ್ರಿ ಸರ್ಕಾರ ಪತನಗೊಂಡರೆ ಸಂತೋಷ್ ಅವರೇ ನಾಯಕತ್ವಕ್ಕೆ ಮುಂದಾಗಬಹು ದೆಂಬ ಮಾತು ಕೇಳಿ ಬಂದಿದೆ. ಇದಕ್ಕಾಗಿ ಅವರು, ತೆರೆಮರೆಯಲ್ಲಿ ಪ್ರಯತ್ನಿಸುತ್ತಿರುವು ದಲ್ಲದೆ, ಪಕ್ಷದ ಪ್ರಮುಖ ಇತರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾ ಗಿದ್ದಾರೆ. ಸಂತೋಷ್ ಬೆಂಬಲಕ್ಕೆ ಆರ್‍ಎಸ್‍ಎಸ್ ಕೂಡಾ ಬೆನ್ನೆಲುಬಾಗಿ ನಿಂತಿದೆ. ಈ ಹಿನ್ನೆಲೆಯಲ್ಲೇ ಚಾಮರಾಜ ಪೇಟೆಯಲ್ಲಿರುವ ಕೇಂದ್ರ ಕಚೇರಿಗೆ ಪಕ್ಷದ ನಾಯಕರನ್ನು ಕರೆದುಕೊಂಡು ಸಂಘಟನೆ ಹಾಗೂ ಪರ್ಯಾಯ ನಾಯ ಕತ್ವ ಬೆಳವಣಿಗೆಯ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ.

ಯಡಿಯೂರಪ್ಪನವರಿಗೆ ಟಾಂಗ್ ಕೊಡಬೇಕೆಂಬ ಉದ್ದೇಶದಿಂದಲೇ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಗಳ ಆಯ್ಕೆ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಸೇರಿ ದಂತೆ ಎರಡು ಕ್ಷೇತ್ರಗಳು ಸಂಘ ಪರಿವಾರದವರನ್ನೇ ಆಯ್ಕೆ ಮಾಡಲಾಗಿದೆ. ಪಕ್ಷದಲ್ಲಿನ ಆಂತರಿಕ ಬೆಳವಣಿಗೆ ಗಳು ಯಡಿಯೂರಪ್ಪನವರಿಗೂ ತಿಳಿದಿದೆ. ಇಷ್ಟಾದರೂ, ಪೂರ್ಣ ಪ್ರಮಾಣದಲ್ಲಿಲ್ಲದಿದ್ದರೂ, ಚುನಾವಣಾ ಪ್ರಚಾರ ದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಚುನಾ ವಣಾ ಪೂರ್ವಕ್ಕಿದ್ದ ಅವರ ಹುರುಪು ನಂತರ ದಿನಗಳಲ್ಲಿ ಕುಂದುತ್ತಾ ಬಂದಿತ್ತು. ಇದಕ್ಕೆ ಸಂತೋಷ್ ದಿಢೀರನೆ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದು. ಇತ್ತೀಚೆಗಂತು ಯಡಿಯೂರಪ್ಪ ತಮ್ಮ ಇತರ ಕಡೆ ಚುನಾವಣಾ ಪ್ರಚಾರ ಕೈಬಿಟ್ಟು ಕಳೆದ ಎರಡು ದಿನಗಳಿಂದ ತಮ್ಮ ಪುತ್ರ ಬಿ.ವೈ. ರಾಘವೇಂದ್ರ ಕಣಕ್ಕಿಳಿದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೀಮಿತಗೊಳಿಸಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ರಾಘವೇಂದ್ರ ವಿರುದ್ಧ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಮೈತ್ರಿ ಕೂಟದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಗೆಲುವಿಗಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಲ್ಲದೆ, ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಟೊಂಕಕಟ್ಟಿ ನಿಂತಿದ್ದಾರೆ. ಕಳೆದ ಏಳು ತಿಂಗಳ ಹಿಂದೆ ಇದೇ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮಧು ಬಂಗಾರಪ್ಪ, 50 ಸಾವಿರ ಚಿಲ್ಲರೆ ಮತಗಳಿಂದ ಪರಾಭವಗೊಂಡಿದ್ದರು.

ಶಿವಮೊಗ್ಗ ಕ್ಷೇತ್ರದಲ್ಲಿ ಹೋರಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪುತ್ರನಿಗಾಗಿ ಕಣಕ್ಕಿಳಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಾಜ್ಯ ಪ್ರವಾಸ ಕೈಗೊಂಡಾಗಲೂ ಮೊದಲಿನ ರೀತಿಯಲ್ಲಿ ಯಡಿ ಯೂರಪ್ಪನವರಲ್ಲಿ ಉತ್ಸಾಹ ಕಂಡಿಲ್ಲ. ಅದರಲ್ಲೂ ಕಳೆದ ಒಂದು ವಾರದಿಂದ ಸ್ವಲ್ಪ ಮಟ್ಟಿಗೆ ದೂರ ಸರಿಯುತ್ತಿದ್ದಾರೆ. ಪಕ್ಷಕ್ಕೆ ಹೆಚ್ಚು ಫಲಿತಾಂಶ ತಂದರೂ ಅದರ ಲಾಭ ಬೇರೆಯವರು ಪಡೆದುಕೊಳ್ಳಲು ಹೊರಟಿದ್ದಾರೆ ಎಂಬ ಭಾವನೆ ಅವರಿಗೆ ಬಂದಂತಿದೆ. ರಾಜ್ಯದ ಇತರೆ ಬಿಜೆಪಿ ನಾಯಕರೂ ಕೂಡ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆಯೇ ಹೊರತು ನಾಯಕತ್ವದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

Translate »