ಈ ಬಾರಿ ಬಿಜೆಪಿಗೆ ಕುರುಬ ಸಮುದಾಯ ಬೆಂಬಲ
ಮೈಸೂರು

ಈ ಬಾರಿ ಬಿಜೆಪಿಗೆ ಕುರುಬ ಸಮುದಾಯ ಬೆಂಬಲ

April 22, 2019

ತಿ.ನರಸೀಪುರ: ರಾಜ್ಯ ದಲ್ಲಿ ಮೂರನೇ ಸ್ಥಾನದಲ್ಲಿರುವ ಕುರುಬ ಸಮುದಾಯ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರೂ ಆದ ತಾಲೂಕು ಕುರುಬರ ಸಂಘದ ಮಾಜಿ ಉಪಾಧ್ಯಕ್ಷ ಕೆ.ನಂಜುಂಡಸ್ವಾಮಿ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿ ಗೊಷ್ಠಿಯಲ್ಲಿ ಮಾತನಾಡಿ, ಅನೇಕ ಶತಕ ಗಳಿಂದ ಕಾಂಗ್ರ್ರೆಸ್ ಕುರುಬ ಸಮುದಾಯ ವನ್ನು ವೋಟ್ ಬ್ಯಾಂಕ್‍ಗಾಗಿ ಮಾಡಿಕೊಂಡಿತೇ ವಿನಹ ಸಮುದಾಯಕ್ಕೆ ರಾಜ ಕೀಯ ಸ್ಥಾನ-ಮಾನ ನೀಡಿರಲಿಲ್ಲ ಎಂದು ದೂರಿದರು.

ಪ್ರಸಕ್ತ ಚುನಾವಣೆ ಯಲ್ಲಿ ಚಾ.ನಗರ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಕುರುಬ ಜನಾಂಗದ ಮತಗಳು ಹೆಚ್ಚಿನ ರೀತಿಯಲ್ಲಿ ದೊರಕಿದೆ ಎಂದು ತಿಳಿಸಿದ ರಲ್ಲದೆ, ಬಿಜೆಪಿ ಕನಕ ಜಯಂತಿಗೆ ರಜಾ ಘೊಷಣೆ, ಕಾಗಿನೆಲೆ ಮಠಕ್ಕೆ 10 ಕೋಟಿ ರೂ. ಅನುದಾನ ನೀಡಿದೆ. ಈ ಎಲ್ಲಾ ಅಭಿವೃದ್ಧಿ ಗಮನಿಸಿ ಮೈಸೂರು ಮತ್ತು ಚಾ.ನಗರ ಕ್ಷೇತ್ರದ ಅಭ್ಯರ್ಥಿಗಳು ಗೆಲ್ಲಲು ಸಮುದಾಯದ ಮತಗಳು ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು. ಈ ವೇಳೆ ಸಮುದಾಯದ ಮುಖಂಡರಾದ ಜಯರಾಮ್, ನಾಗರಾಜು, ಹೆಳವರಹುಂಡಿ ಮಲೇಶ್, ಪುಟ್ಟಸ್ವಾಮಿ ಮತ್ತಿತರಿದ್ದರು.

Translate »