Tag: Mysuru Zoo

ಮೈಸೂರು ಮೃಗಾಲಯಕ್ಕೆ ನೆರವು ನೀಡಲು ಮನವಿ
ಮೈಸೂರು

ಮೈಸೂರು ಮೃಗಾಲಯಕ್ಕೆ ನೆರವು ನೀಡಲು ಮನವಿ

June 21, 2020

ಮೈಸೂರು, ಜೂ.20- ಮೈಸೂರಿನ ಪ್ರತಿಯೊಬ್ಬರೂ ಮೃಗಾ ಲಯದ ನೆರವಿಗೆ ಕೈಚಾಚುವಂತೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ. ಸ್ನೇಹಿತರ ಸಹಕಾರದೊಂದಿಗೆ 20 ಸಾವಿರ ರೂ.ಗಳನ್ನು ಶನಿವಾರ ಮೃಗಾಲಯದ ಅಧಿಕಾರಿಗಳಿಗೆ ಹಸ್ತಾಂತರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಚಾಮುಂಡಿಬೆಟ್ಟ, ಅರಮನೆ ಜೊತೆಗೆ ಮೃಗಾಲಯವೂ ಪ್ರವಾಸಿಗರ ನೆಚ್ಚಿನ ಸ್ಥಳ. ಆದರೆ ಕೊರೊನಾ ಪರಿಣಾಮದಿಂದ ಎರಡೂವರೆ ತಿಂಗಳು ಬಂದ್ ಮಾಡಿದ್ದರಿಂದ ಮೃಗಾಲಯದ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎಂದರು. ಇತ್ತೀಚೆಗೆ ಎಸ್‍ಓಪಿ ಮೂಲಕ ಮೃಗಾಲಯವನ್ನು ತೆರೆದಿದ್ದರೂ ಬೆರಳೆಣಿಕೆಯಷ್ಟು ವೀಕ್ಷಕರು ಭೇಟಿ ನೀಡುತ್ತಿದ್ದಾರೆ. ಪ್ರಾಣಿ-ಪಕ್ಷಿಗಳು,…

ಮೈಸೂರು ಮೃಗಾಲಯಕ್ಕೆ ಹರಿದು ಬಂದ ನೆರವು
ಮೈಸೂರು

ಮೈಸೂರು ಮೃಗಾಲಯಕ್ಕೆ ಹರಿದು ಬಂದ ನೆರವು

June 13, 2020

ಮೈಸೂರು, ಜೂ.12- ಕೋವಿಡ್-19 ಹಿನ್ನೆಲೆಯ ಲಾಕ್‍ಡೌನ್ ಅವಧಿ ಯಲ್ಲಿ ಮೃಗಾಲಯ ನಿರ್ವಹಣೆಗೆ ಕಷ್ಟ ವಾದ ನಿಟ್ಟಿನಲ್ಲಿ ಹಲವಾರು ಗಣ್ಯರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆ ಗಳು ಮೃಗಾಲಯದ ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಮೂಲಕ ಮೃಗಾಲಯದ ಕಲ್ಯಾಣಕ್ಕೆ ಸಹಕರಿಸುತ್ತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕÀ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ. ಮೈಸೂರು ಮೃಗಾಲಯದ “ಪ್ರಾಣಿ ಗಳ ದತ್ತು ಸ್ವೀಕಾರ ಯೋಜನೆ” ಅಡಿ ಯಲ್ಲಿ ಹಲವಾರು ಪ್ರಾಣಿಪ್ರಿಯರು ಒಂದು ವರ್ಷದ ಅವಧಿಗೆ ಪ್ರಾಣಿಗಳನ್ನು ದತ್ತು…

ಚುನಾವಣೆ, ಪರೀಕ್ಷೆ, ಹೆಚ್ಚಿದ ತಾಪಮಾನ ಎಫೆಕ್ಟ್ಕುಗ್ಗಿದ ಮೈಸೂರು ಪ್ರವಾಸೋದ್ಯಮ
ಮೈಸೂರು

ಚುನಾವಣೆ, ಪರೀಕ್ಷೆ, ಹೆಚ್ಚಿದ ತಾಪಮಾನ ಎಫೆಕ್ಟ್ಕುಗ್ಗಿದ ಮೈಸೂರು ಪ್ರವಾಸೋದ್ಯಮ

April 21, 2019

ಮೈಸೂರು: ದೇಶದಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ಹೆಚ್ಚಿದ ತಾಪಮಾನದ ಹಿನ್ನೆಲೆಯಲ್ಲಿ ಮೈಸೂರಿನ ಪ್ರವಾಸೋದ್ಯಮ ಬಾಡಿ ಹೋಗಿದ್ದು, ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಸದಾ ಗಿಜಿಗುಡುತ್ತಿದ್ದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ್ದು, ಹೋಟೆಲ್ ಉದ್ಯಮ, ವಿವಿಧ ವ್ಯಾಪಾರೋದ್ಯಮ ಕುಗ್ಗಿದೆ. ಸಾಮಾನ್ಯ ವಾಗಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಮೈಸೂರಿನತ್ತ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಿರುತ್ತದೆ. ವಿದ್ಯಾರ್ಥಿಗಳ ಪರೀಕ್ಷೆ ನಡೆ ಯುವ ಹಿನ್ನೆಲೆಯಲ್ಲಿ ಮಾರ್ಚ್ ಎರಡನೇ ವಾರದಿಂದ ಪ್ರವಾಸಿಗರು ಸಾಂಸ್ಕøತಿಕ…

ಬೇಸಿಗೆ ಧಗೆ ತಣಿಸಲು ಮೃಗಾಲಯದ ಪ್ರಾಣಿಗಳಿಗೆ ವಿಶೇಷ ಆರೈಕೆ
ಮೈಸೂರು

ಬೇಸಿಗೆ ಧಗೆ ತಣಿಸಲು ಮೃಗಾಲಯದ ಪ್ರಾಣಿಗಳಿಗೆ ವಿಶೇಷ ಆರೈಕೆ

March 4, 2019

ಮೈಸೂರು: ಬಿರು ಬೇಸಿಗೆಯಿಂದ ತತ್ತರಿಸುತ್ತಿರುವ ಮೈಸೂರು ಮೃಗಾಲಯದ ಪ್ರಾಣಿ ಸಂಕುಲವನ್ನು ರಕ್ಷಿಸಲು ವಿಶೇಷ ಆರೈಕೆ ಮಾಡಲಾಗುತ್ತಿದೆ. ಬಸವಳಿಯುತ್ತಿರುವ ಪ್ರಾಣಿಗಳನ್ನು ತಂಪಾಗಿಸಲು ನೀರಿನ ಸಿಂಚನ, ಮಂಜುಗಡ್ಡೆ, ಕಲ್ಲಂಗಡಿ ಹಣ್ಣನ್ನು ಪೂರೈಸಲಾಗುತ್ತಿದೆ. ಬೇಸಿಗೆ ಕಾವು ಮನುಷ್ಯರಷ್ಟೇ ಅಲ್ಲ ಪ್ರಾಣಿ-ಪಕ್ಷಿ ಸಂಕುಲವನ್ನು ದಿಕ್ಕೆಡಿಸುತ್ತಿದೆ. ಮಾನವರು ಬೇಸಿಗೆ ಬೇಗೆಯಿಂದ ಪಾರಾ ಗಲು ಹಲವು ಮಾರ್ಗೋಪಾಯ ಅನುಸರಿ ಸುತ್ತಾರೆ. ಆದರೆ ಪ್ರಾಣಿ-ಪಕ್ಷಿಗಳ ಪಾಡು ಹೇಳತೀರದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿರುವ ಪ್ರಾಣಿಗಳ ಹಿತ ಕಾಪಾಡುವುದಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ತಂಪಾದ ವಾತಾವರಣ ಸೃಷ್ಟಿಸುವುದರೊಂದಿಗೆ ದೇಹದಲ್ಲಿ ನೀರಿನ…

ಮೈಸೂರಲ್ಲಿ ಮೃಗಾಲಯಗಳ ಪಶು   ವೈದ್ಯರ ರಾಷ್ಟ್ರೀಯ ಕಾರ್ಯಾಗಾರ ಆರಂಭ
ಮೈಸೂರು

ಮೈಸೂರಲ್ಲಿ ಮೃಗಾಲಯಗಳ ಪಶು ವೈದ್ಯರ ರಾಷ್ಟ್ರೀಯ ಕಾರ್ಯಾಗಾರ ಆರಂಭ

January 8, 2019

ಮೈಸೂರು: ಮೃಗಾಲಯಗಳ ಖ್ಯಾತಿ ಹಾಗೂ ಕುಖ್ಯಾತಿಗೆ ಪಶುವೈದ್ಯರ ಪಾತ್ರ ಪ್ರಮುಖವಾಗಿದೆ ಎಂದು ನವದೆಹಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ಅನೂಪ್ ಕುಮಾರ್ ನಾಯಕ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಮೃಗಾಲಯದಲ್ಲಿ ಸೋಮವಾರ ಆರಂಭವಾದ ಮೂರು ದಿನಗಳ `ಮೃಗಾಲಯಗಳ ಪಶು ವೈದ್ಯರ’ ಕಾರ್ಯಾಗಾರ ಉದ್ಘಾಟಿಸಿ ಮಾತ ನಾಡಿದ ಅವರು, ದೇಶದ ಯಾವುದೇ ಮೃಗಾಲಯಕ್ಕೆ ಒಳ್ಳೆಯ ಅಥವಾ ಕೆಟ್ಟ ಹೆಸರು ಬಂದರೆ, ಅದರ ಹಿಂದೆ ಅಲ್ಲಿನ ಅಧಿಕಾರಿಗಳಿಗಿಂತ ಪಶು ವೈದ್ಯರ ಪಾತ್ರ ಮುಖ್ಯವಾಗಿರುತ್ತದೆ. ಪ್ರಾಣಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವ…

ಡಿ.5ರಂದು ಮೃಗಾಲಯದಲ್ಲಿ ವಿಶ್ವ ಮಣ್ಣಿನ ದಿನಾಚರಣೆ
ಮೈಸೂರು

ಡಿ.5ರಂದು ಮೃಗಾಲಯದಲ್ಲಿ ವಿಶ್ವ ಮಣ್ಣಿನ ದಿನಾಚರಣೆ

December 1, 2018

ಮೈಸೂರು: ವಿಶ್ವ ಮಣ್ಣಿನ ದಿನದ ಹಿನ್ನೆಲೆಯಲ್ಲಿ ಮೈಸೂರಿನ ಮೃಗಾಲಯದ ಆವರಣದಲ್ಲಿರುವ ವನ್ಯರಂಗದಲ್ಲಿ ಡಿ.5ರಂದು ಮಧ್ಯಾಹ್ನ 2.30ಕ್ಕೆ ತಜ್ಞರಿಂದ ಮಣ್ಣಿನ ಸವಕಳಿ ತಡೆ, ಸ್ಥಿತಿಗತಿ ಹಾಗೂ ಮಹತ್ವ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ಮತ್ತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳಲ್ಲಿ ಪ್ರಮುಖ ಪಾತ್ರ ವಹಿಸುವ ಮಣ್ಣು ಇತ್ತೀಚಿನ ದಿನಗಳಲ್ಲಿ ಅವನತಿಯತ್ತ ಸಾಗುತ್ತಿದೆ. ನವೀಕರಿಸಲಾಗದ ಸಂಪನ್ಮೂಲವಾಗಿರುವ ಮಣ್ಣಿನ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಅಂತರರಾಷ್ಟ್ರೀಯ ಮಣ್ಣಿನ ವೈಜ್ಞಾನಿಕ…

ಬೃಹತ್ ಅಕ್ವೇರಿಯಂ ಕಾಮಗಾರಿಗೆ ಜಾಗತಿಕ ಟೆಂಡರ್ ಕರೆಯಲು ಮೈಸೂರು ಮೃಗಾಲಯ ನಿರ್ಧಾರ
ಮೈಸೂರು

ಬೃಹತ್ ಅಕ್ವೇರಿಯಂ ಕಾಮಗಾರಿಗೆ ಜಾಗತಿಕ ಟೆಂಡರ್ ಕರೆಯಲು ಮೈಸೂರು ಮೃಗಾಲಯ ನಿರ್ಧಾರ

October 26, 2018

ಮೈಸೂರು:  ಮೈಸೂರು ನಗರ ಪಾಲಿಕೆಯಿಂದ ಹಸ್ತಾಂತರಗೊಂಡ ಬೃಹತ್ ಅಕ್ವೇರಿಯಂ ಕಟ್ಟಡಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವ ಮೃಗಾಲಯ ಪ್ರಾಧಿಕಾರವು ಜಾಗತಿಕ (ಗ್ಲೋಬಲ್) ಟೆಂಡರ್ ಪ್ರಕ್ರಿಯೆಗೆ ಮುಂದಾಗಿದೆ. ಮೈಸೂರಿನ ಕಾರಂಜಿಕೆರೆ ಹಾಗೂ ಮೃಗಾಲಯದ ನಡುವೆ ಬೃಹತ್ ಅಕ್ವೇರಿಯಂ ಸ್ಥಾಪನೆಗೆ ಮುಂದಾ ಗಿದ್ದ ಮೈಸೂರು ನಗರ ಪಾಲಿಕೆ 4.26 ಕೋಟಿ ರೂ. ಅನುದಾನದಲ್ಲಿ ಅಕ್ವೇರಿಯಂ ಕಟ್ಟಡ ನಿರ್ಮಾ ಣಕ್ಕೆ ನಿರ್ಧರಿಸಿತ್ತು. ನಂತರ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಕಳೆದ 5 ವರ್ಷದಿಂದ ಪಾಳು ಬಿದ್ದಿದ್ದ ಅಕ್ವೇರಿಯಂ ಕಟ್ಟಡವನ್ನು 2018ರ ಜು.14ರಂದು ಪ್ರವಾಸೋದ್ಯಮ ಸಚಿವ…

ಮೈಸೂರು ಮೃಗಾಲಯದಿಂದ ಕಾರಂಜಿ ಕೆರೆಗೆ ‘ಕೆಳ ಸೇತುವೆ’ ಸಂಪರ್ಕ
ಮೈಸೂರು

ಮೈಸೂರು ಮೃಗಾಲಯದಿಂದ ಕಾರಂಜಿ ಕೆರೆಗೆ ‘ಕೆಳ ಸೇತುವೆ’ ಸಂಪರ್ಕ

October 25, 2018

ಮೈಸೂರು: ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಇದೀಗ ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆಗೆ ಸಂಪರ್ಕ ಕಲ್ಪಿಸುವ ಕೆಳ ಸೇತುವೆ ನಿರ್ಮಿಸಲಾಗಿದ್ದು, ಪ್ರವಾಸಿಗರು ಒಂದೇ ಟಿಕೆಟ್ ಖರೀದಿಸಿ, ಮೈಗಾಲಯ ಮತ್ತು ಕಾರಂಜಿ ಕೆರೆಯನ್ನು ವೀಕ್ಷಿಸಬಹುದಾಗಿದೆ. ಮೈಸೂರು ಮೃಗಾಲಯ ಪ್ರಾಧಿಕಾರ ಮೃಗಾಲಯ ಮತ್ತು ಕಾರಂಜಿ ಕೆರೆಗೆ ಕೆಳ ಸೇತುವೆಯೊಂದರ ಸಂಪರ್ಕ ಕಲ್ಪಿಸಿದೆ. 150 ಮೀಟರ್ ಉದ್ದದ ಈ ಕೆಳ ಸೇತುವೆ ಮೂಲಕ ಮೃಗಾಲಯದಿಂದ ಕಾರಂಜಿ ಕೆರೆಗೆ ಅಥವಾ ಕಾರಂಜಿ ಕೆರೆಯಿಂದ ಮೃಗಾಲಯಕ್ಕೆ ಭೇಟಿ ನೀಡಬಹುದಾಗಿದೆ. ಅರಣ್ಯ ಸಚಿವ…

ಹುಲಿ ಸಂತತಿ ರಕ್ಷಿಸಿದರೆ ಇಡೀ ಪರಿಸರ ಕಾಪಾಡಿದಂತೆ
ಮೈಸೂರು

ಹುಲಿ ಸಂತತಿ ರಕ್ಷಿಸಿದರೆ ಇಡೀ ಪರಿಸರ ಕಾಪಾಡಿದಂತೆ

July 30, 2018

ಮೈಸೂರು: ಅಳಿವಿನಂಚಿನಲ್ಲಿರುವ ಹುಲಿ ಸಂತತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವುದಕ್ಕೆ ಎಲ್ಲರೂ ಕೈಜೋಡಿಸಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಅರಣ್ಯ ಇಲಾಖೆ ನಿವೃತ್ತ ಹಿರಿಯ ಅಧಿಕಾರಿ ಪಿ.ಎಸ್.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಮೃಗಾಲಯದ ಆವರಣದಲ್ಲಿರುವ ಆ್ಯಂಪಿಥೇಟರ್‍ನಲ್ಲಿ ಭಾನುವಾರ ಆಯೋಜಿಸಲಾಗಿದ್ದ `ವಿಶ್ವ ಹುಲಿ ದಿನ’ದ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶೇಷ ಉಪನ್ಯಾಸ ನೀಡಿದ ಅವರು, ಪರಿಸರ ವ್ಯವಸ್ಥೆಯಲ್ಲಿ ಹುಲಿಗಳು ಅಪರೂಪದ ಪ್ರಾಣಿಗಳಾಗಿದ್ದು, ಮುಂಜೂಣಿ ಸ್ಥಾನದಲ್ಲಿವೆ. ಆದರೆ ಬೇಟೆಗಾರರ ಹಾವಳಿ ಸೇರಿದಂತೆ ವಿವಿಧ ಕಾರಣಗಳಿಂದ ಹುಲಿಗಳ ಸಂತತಿ ಅವನತಿಯತ್ತ ಸಾಗುತ್ತಿದೆ. ದೇಶದಲ್ಲಿ ಪ್ರಸ್ತುತವಿರುವ…

ಅಕ್ವೇರಿಯಂ ಕಟ್ಟಡ ಪರಿಶೀಲಿಸಿದ ಶಾಸಕ ಎಸ್.ಎ.ರಾಮದಾಸ್
ಮೈಸೂರು

ಅಕ್ವೇರಿಯಂ ಕಟ್ಟಡ ಪರಿಶೀಲಿಸಿದ ಶಾಸಕ ಎಸ್.ಎ.ರಾಮದಾಸ್

July 27, 2018

ಪ್ರವಾಸಿಗರ ಆಕರ್ಷಣೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ಮೈಸೂರು: ಮೈಸೂರು ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮತ್ಸಾಗಾರ (ಅಕ್ವೇರಿಯಂ) ದ ಕಟ್ಟಡವನ್ನು ಗುರುವಾರ ಶಾಸಕ ಎಸ್.ಎ.ರಾಮದಾಸ್ ಅವರು ಪರಿಶೀಲಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಸಮರ್ಪಿಸುವಂತೆ ಸಲಹೆ ನೀಡಿದರು. ಮೃಗಾಲಯ ಹಾಗೂ ಪಾಲಿಕೆಯ ಅಧಿಕಾರಿಗಳೊಂದಿಗೆ ಇಂದು ಮಧ್ಯಾಹ್ನ ಅಕ್ವೇರಿಯಂ ಕಟ್ಟಡಕ್ಕೆ ಆಗಮಿಸಿದ ಎಸ್.ಎ.ರಾಮದಾಸ್ ಮೃಗಾಲಯದ ಅಧಿಕಾರಿಗಳಿಂದ ಅಕ್ವೇರಿಯಂನ ನಕ್ಷೆಯನ್ನು ವೀಕ್ಷಿಸಿದರು. ಸಾಂಸ್ಕೃತಿಕ ಹಾಗೂ ಪಾರಂಪರಿಕ ನಗರವಾದ ಮೈಸೂರಿಗೆ ಬೃಹತ್ ಗಾತ್ರದ ಅಕ್ವೇರಿಯಂ…

1 2
Translate »