ಮೈಸೂರಲ್ಲಿ ಮೃಗಾಲಯಗಳ ಪಶು   ವೈದ್ಯರ ರಾಷ್ಟ್ರೀಯ ಕಾರ್ಯಾಗಾರ ಆರಂಭ
ಮೈಸೂರು

ಮೈಸೂರಲ್ಲಿ ಮೃಗಾಲಯಗಳ ಪಶು ವೈದ್ಯರ ರಾಷ್ಟ್ರೀಯ ಕಾರ್ಯಾಗಾರ ಆರಂಭ

January 8, 2019

ಮೈಸೂರು: ಮೃಗಾಲಯಗಳ ಖ್ಯಾತಿ ಹಾಗೂ ಕುಖ್ಯಾತಿಗೆ ಪಶುವೈದ್ಯರ ಪಾತ್ರ ಪ್ರಮುಖವಾಗಿದೆ ಎಂದು ನವದೆಹಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ಅನೂಪ್ ಕುಮಾರ್ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಮೃಗಾಲಯದಲ್ಲಿ ಸೋಮವಾರ ಆರಂಭವಾದ ಮೂರು ದಿನಗಳ `ಮೃಗಾಲಯಗಳ ಪಶು ವೈದ್ಯರ’ ಕಾರ್ಯಾಗಾರ ಉದ್ಘಾಟಿಸಿ ಮಾತ ನಾಡಿದ ಅವರು, ದೇಶದ ಯಾವುದೇ ಮೃಗಾಲಯಕ್ಕೆ ಒಳ್ಳೆಯ ಅಥವಾ ಕೆಟ್ಟ ಹೆಸರು ಬಂದರೆ, ಅದರ ಹಿಂದೆ ಅಲ್ಲಿನ ಅಧಿಕಾರಿಗಳಿಗಿಂತ ಪಶು ವೈದ್ಯರ ಪಾತ್ರ ಮುಖ್ಯವಾಗಿರುತ್ತದೆ. ಪ್ರಾಣಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪಶು ವೈದ್ಯರ ಸೇವೆ ಅಗತ್ಯವಾಗಿರುತ್ತದೆ. ಪ್ರಾಣಿ-ಪಕ್ಷಿಗಳ ಆರೋಗ್ಯ ಉತ್ತಮವಾಗಿದ್ದರೆ ಸಹಜವಾಗಿ ಮೃಗಾಲಯಕ್ಕೆ ಒಳ್ಳೆಯ ಹೆಸರು ಬರುತ್ತದೆ. ಆರೋಗ್ಯದಲ್ಲಿ ಏರು ಪೇರಾದರೆ ಅನಿವಾರ್ಯವಾಗಿ ಕೆಟ್ಟ ಹೆಸರು ಬರು ತ್ತದೆ ಎಂದು ವಿಶ್ಲೇಷಿಸಿದರು.
ಕೇಂದ್ರ ಮೃಗಾಲಯ ಪ್ರಾಧಿಕಾರವು ಕಟ್ಟುನಿಟ್ಟಾಗಿ ನಿಯಮವನ್ನು ಪಾಲಿಸುತ್ತದೆ.

ನೀತಿ(ಪಾಲಿಸಿ) ಹಾಗೂ ಗುಣಮಟ್ಟ(ಸ್ಟ್ಯಾಂಡರ್ಡ್)ವನ್ನು ಕಾಪಾಡಿಕೊಳ್ಳದ ಮೃಗಾಲಯದ ವಿರುದ್ಧ ಕೇಂದ್ರ ಮೃಗಾಲಯ ಪ್ರಾಧಿ ಕಾರ ರಾಜೀ ಮಾಡಿಕೊಳ್ಳದೆ ಕ್ರಮ ಕೈಗೊಳ್ಳಲಿದೆ. ಈಗಾ ಗಲೇ ನಿಯಮ ಪಾಲಿಸದ ಕೆಲ ಮೃಗಾಲಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕೆಲವುಗಳಿಗೆ ಲೈಸೆನ್ಸ್ ತಡೆ ಹಿಡಿಯಲಾಗಿದೆ. ಮತ್ತೆ ಕೆಲವಕ್ಕೆ ಲೈಸೆನ್ಸ್ ನವೀಕರಿ ಸಿಲ್ಲ. ಈ ಹಿನ್ನೆಲೆಯಲ್ಲಿ ಮೃಗಾಲಯಗಳ ಪಶು ವೈದ್ಯರು ಅಲ್ಲಿ ಪ್ರಾಣಿ ಮತ್ತು ಪಕ್ಷಿಗಳ ಆರೋಗ್ಯ ಕಾಪಾಡುವಲ್ಲಿ ಗುಣಮಟ್ಟದ ಸೇವೆ ನೀಡಬೇಕೆಂದು ಸಲಹೆ ನೀಡಿದರು.

ಕರ್ನಾಟಕ ಪಶುವೈದ್ಯ, ಪ್ರಾಣಿಗಳು ಮತ್ತು ಮೀನು ಗಾರಿಕೆ ವಿಜ್ಞಾನ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಹೆಚ್.ಡಿ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲಿ ವನ್ಯಜೀವಿಗಳಿಗೆ ಸಂಕಷ್ಟ ಸ್ಥಿತಿ ಒದಗಿ ಬಂದಿದೆ. ಇದರಿಂದ ಹಲವು ಪ್ರಭೇದಗಳ ಪ್ರಾಣಿಗಳು ಅಳಿವಿ ನಂಚಿನಲ್ಲಿವೆ. ಇಂತಹ ಸಂದರ್ಭದಲ್ಲಿ ಮೃಗಾಲಯ ಗಳ ಪಾತ್ರ ಹೆಚ್ಚಾಗಿದೆ. ನಶಿಸುತ್ತಿರುವ ಪ್ರಾಣಿಗಳ ಸಂತತಿಯನ್ನು ವೃದ್ಧಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಹಲವು ಸವಾಲು ಎದುರಾಗುತ್ತವೆ. ಆದರೂ ಪ್ರಾಣಿಗಳ ಸಂತತಿ ಉಳಿಸಿ, ಬೆಳೆಸಲು ಕ್ರಮ ಕೈಗೊಳ್ಳ ಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಪ್ರಾಣಿ-ಪಕ್ಷಿಗಳಿಗೆ ವಿವಿಧ ಬಗೆಯ ರೋಗಗಳು ಬರುತ್ತಿವೆ. ನಿಫಾ ವೈರಸ್, ಹಕ್ಕಿ ಜ್ವರ ಇನ್ನಿತರ ಖಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ವೈರಸ್ ಗಳು ಪ್ರಾಣಿಗಳ ಬದಲು ಮನುಷ್ಯರ ಮೇಲೇ ದುಷ್ಪರಿ ಣಾಮ ಬೀರುತ್ತವೆ. ಇಂತಹ ಸಂದರ್ಭದಲ್ಲಿ ಮೃಗಾಲಯ ದಲ್ಲಿ ಸವಾಲು ಎದುರಾಗುತ್ತದೆ. ಈ ಎಲ್ಲಾ ಅಂಶ ಗಳನ್ನು ಪರಿಗಣಿಸಿ ಅವನತಿಯತ್ತ ಸಾಗುತ್ತಿರುವ ಪ್ರಾಣಿಗಳ ಸಂತತಿ ಉಳಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯ ದರ್ಶಿ ಬಿ.ಪಿ.ರವಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾಡುಗಳ ನಾಶ ಹೆಚ್ಚಾಗುತ್ತಿದೆ. ಇದರಿಂದ ಆನೆ, ಚಿರತೆ, ಕರಡಿ ಇನ್ನಿತರ ಪ್ರಾಣಿಗಳು ನಾಡಿಗೆ ಬರುತ್ತಿವೆ. ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ಹೆಚ್ಚಾಗುತ್ತಿವೆ. ಕಾಡು ಪ್ರಾಣಿಗಳು ಯಾವ ಕಾರಣಕ್ಕೆ ನಾಡಿಗೆ ಬರುತ್ತಿವೆ ಎಂದು ಜನರಿಗೆ ತಿಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾಡಂಚಿನ ಗ್ರಾಮಗಳ ಶಾಲಾ ಮಕ್ಕಳಿಗೆ ಮಾನವ ಮತ್ತು ಪ್ರಾಣಿ ಸಂಘರ್ಷದ ಬಗ್ಗೆ ಮಾಹಿತಿ ನೀಡುವ ಅವಶ್ಯಕತೆ ಯಿದೆ. ಇದರಿಂದ ಆ ಮಕ್ಕಳು ವಯಸ್ಕರಿಗೆ ಮನ ವರಿಕೆ ಮಾಡಿಕೊಡಲಿದ್ದಾರೆ ಎಂದರು.

ರಾಜ್ಯದಲ್ಲಿ 9 ಮೃಗಾಲಯಗಳಿವೆ. ಅದರಲ್ಲಿ ಮೈಸೂರು ಮೃಗಾಲಯ ಹಾಗೂ ಬನ್ನೇರುಘಟ್ಟದ ವನ್ಯಧಾಮದ ವತಿಯಿಂದ ರಾಜ್ಯದ ವಿವಿಧ ಮೃಗಾಲಯಗಳನ್ನು ದತ್ತು ಪಡೆಯಲಾಗಿದೆ. ಮೃಗಾಲಯಗಳಲ್ಲಿ ಹೊಸದಾಗಿ ಪಶು ವೈದ್ಯಕೀಯ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಪಶು ವೈದ್ಯರನ್ನು ನೇಮಕ ಮಾಡಿದೆ. ಕೆಲವೊಮ್ಮೆ ಕಾಡುಪ್ರಾಣಿಗಳು ನಾಡಿಗೆ ಬಂದಾಗ ಸೆರೆ ಹಿಡಿಯುವ ಕಾರ್ಯಾಚರಣೆಗೆ ಮೃಗಾಲಯದ ಪಶು ವೈದ್ಯರನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ. ಕುಲಕರ್ಣಿ ಮಾತನಾಡಿ, ಮೂರು ದಿನ ಕಾರ್ಯಾಗಾರ ನಡೆಯುತ್ತದೆ. ಇದರಲ್ಲಿ ಪ್ರಾಣಿಗಳಿಗೆ ನೀಡುವ ಚಿಕಿತ್ಸಾ ವಿಧಾನ, ಅರವಳಿಕೆ ಮದ್ದು, ಖಾಯಿಲೆ ಗಳು ಬಂದಾಗ ಕೈಗೊಳ್ಳಬೇಕಾದ ಕ್ರಮ ಇನ್ನಿತರ ವಿಷಯಗಳ ಬಗ್ಗೆ ಪರಿಣತರಿಂದ ಗೋಷ್ಠಿಗಳು ನಡೆ ಯುತ್ತವೆ. ಕಾರ್ಯಾಗಾರದಲ್ಲಿ ದೇಶದ ವಿವಿಧ ಮೃಗಾ ಲಯಗಳಿಂದ 28 ಪಶುವೈದ್ಯರು, ಸ್ಥಳೀಯ ಸಂಸ್ಥೆಗಳು, ರಾಷ್ಟ್ರೀಯ ಉದ್ಯಾನವನಗಳ ಪಶು ವೈದ್ಯರು ಸೇರಿದಂತೆ 55 ಮಂದಿ ಪಾಲ್ಗೊಂಡಿದ್ದಾರೆ ಎಂದರು. ಕಾರ್ಯಾಗಾರದಲ್ಲಿ ಹುಲಿ ಯೋಜನೆ ನಿರ್ದೇಶಕ ಜಗತ್ ರಾಮ್, ಗೊರಿಲ್ಲಾ ಇಇಪಿ ಸಹ ಸಂಚಾಲಕ ನೈಲ್ ಬೆಮ್ಮೆಂಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »