ಮೈಸೂರು ಮೃಗಾಲಯದಿಂದ ಕಾರಂಜಿ ಕೆರೆಗೆ ‘ಕೆಳ ಸೇತುವೆ’ ಸಂಪರ್ಕ
ಮೈಸೂರು

ಮೈಸೂರು ಮೃಗಾಲಯದಿಂದ ಕಾರಂಜಿ ಕೆರೆಗೆ ‘ಕೆಳ ಸೇತುವೆ’ ಸಂಪರ್ಕ

October 25, 2018

ಮೈಸೂರು: ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಇದೀಗ ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆಗೆ ಸಂಪರ್ಕ ಕಲ್ಪಿಸುವ ಕೆಳ ಸೇತುವೆ ನಿರ್ಮಿಸಲಾಗಿದ್ದು, ಪ್ರವಾಸಿಗರು ಒಂದೇ ಟಿಕೆಟ್ ಖರೀದಿಸಿ, ಮೈಗಾಲಯ ಮತ್ತು ಕಾರಂಜಿ ಕೆರೆಯನ್ನು ವೀಕ್ಷಿಸಬಹುದಾಗಿದೆ.

ಮೈಸೂರು ಮೃಗಾಲಯ ಪ್ರಾಧಿಕಾರ ಮೃಗಾಲಯ ಮತ್ತು ಕಾರಂಜಿ ಕೆರೆಗೆ ಕೆಳ ಸೇತುವೆಯೊಂದರ ಸಂಪರ್ಕ ಕಲ್ಪಿಸಿದೆ. 150 ಮೀಟರ್ ಉದ್ದದ ಈ ಕೆಳ ಸೇತುವೆ ಮೂಲಕ ಮೃಗಾಲಯದಿಂದ ಕಾರಂಜಿ ಕೆರೆಗೆ ಅಥವಾ ಕಾರಂಜಿ ಕೆರೆಯಿಂದ ಮೃಗಾಲಯಕ್ಕೆ ಭೇಟಿ ನೀಡಬಹುದಾಗಿದೆ. ಅರಣ್ಯ ಸಚಿವ ಆರ್.ಶಂಕರ್ ಇತ್ತೀಚೆಗಷ್ಟೆ ಕೆಳ ಸೇತುವೆಗೆ ಚಾಲನೆ ನೀಡಿದ್ದರು.

ಮೃಗಾಲಯದ ಮಾಮೂಲಿ ದಿನಗಳ ಟಿಕೆಟ್ ವಯಸ್ಕರಿಗೆ ರೂ.60, ಮಕ್ಕಳಿಗೆ (5ರಿಂದ 12 ವರ್ಷದವರು) ರೂ.30. ವಾರಾಂತ್ಯ ದಿನಗಳಲ್ಲಿ ವಯಸ್ಕರಿಗೆ ರೂ.80 ಮತ್ತು ಮಕ್ಕಳಿಗೆ ರೂ.40. ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ. ಅಂತೆಯೇ ಕಾರಂಜಿ ಕೆರೆಯಲ್ಲಿ ಮಾಮೂಲಿ ದಿನಗಳಲ್ಲಿ ವಯಸ್ಕರಿಗೆ ರೂ.30, ಮಕ್ಕಳಿಗೆ ರೂ.20. ಇದೀಗ ಎರಡನ್ನೂ ಒಟ್ಟಿಗೆ ನೋಡಬಯಸುವವರು ಕಾಂಬೋ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸ ಲಾಗಿದೆ. ಮಾಮೂಲಿ ದಿನಗಳಲ್ಲಿ ವಯಸ್ಕರಿಗೆ ರೂ.80 ಮತ್ತು ಮಕ್ಕಳಿಗೆ ರೂ. 40 ಹಾಗೂ ವಾರಾಂತ್ಯ ದಿನಗಳಲ್ಲಿ ವಯಸ್ಕರಿಗೆ ರೂ.100 ಮತ್ತು ಮಕ್ಕಳಿಗೆ ರೂ.50 ಕಾಂಬೋ ಟಿಕೆಟ್ ದರ ನಿಗದಿಪಡಿಸಲಾಗಿದೆ. ಈ ಟಿಕೆಟ್ ಖರೀದಿಸಿದವರು ಮೃಗಾಲಯ ಮತ್ತು ಕಾರಂಜಿ ಕೆರೆ ಎರಡನ್ನೂ ನೋಡಬಹುದಾಗಿದೆ. ಈ ಮೊದಲು ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರತ್ಯೇಕವಾಗಿ ನೋಡಬೇಕಾಗಿತ್ತು. ಹಲವು ಪ್ರವಾಸಿಗರ ಮನವಿ ಮೇರೆಗೆ ಈ ಎರಡಕ್ಕೂ ಸಂಪರ್ಕ ಕಲ್ಪಿಸುವ ಕೆಳಸೇತುವೆ ನಿರ್ಮಿಸಿದ್ದೇವೆ. ದಸರಾ ಸಂದರ್ಭದಲ್ಲಿ ಸಾಕಷ್ಟು ಮಂದಿ ಕಾಂಬೋ ಟಿಕೆಟ್ ಖರೀದಿಸಿ, ಎರಡನ್ನೂ ನೋಡಿ ಖುಷಿ ಪಟ್ಟಿದ್ದಾರೆ.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇ ಶಕ ಅಜಿತ್ ಕುಲಕರ್ಣಿ ಅವರ ಪ್ರಕಾರ, ಮೃಗಾಲಯ ಮತ್ತು ಕಾರಂಜಿ ಕೆರೆ ಸೇರಿ ಒಟ್ಟು 165 ಎಕರೆ ಪ್ರದೇಶವಿದ್ದು, ಹಸಿರಿನಿಂದ ಆವೃತವಾಗಿದೆ. ಎರಡೂ ಪ್ರದೇಶದಲ್ಲಿ ಶೇ.75ರಷ್ಟು ಮರ-ಗಿಡಗಳಿಂದ ಆವೃತವಾಗಿದ್ದು, ಪ್ರವಾಸಿಗರು 7 ಕಿ.ಮೀ. ನಷ್ಟು ಹಸಿರುಮಯ ಪರಿಸರದ ವಾತಾವರಣದ ನಡುವೆ ಸುತ್ತಾಡಬಹುದಾಗಿದೆ. ಇದು ಆರೋಗ್ಯಕ್ಕೂ ಒಳ್ಳೆಯದು. ಇಲ್ಲಿ ನೂರಾರು ಪಕ್ಷಿಗಳು, ಚಿಟ್ಟೆಗಳನ್ನು ಕಾಣಬಹುದಾಗಿದೆ. ಇದೊಂದು ರೀತಿ ಓಜೋನ್ ಕಾರ್ಖಾನೆ ಎನ್ನಬಹುದು ಎನ್ನುತ್ತಾರೆ

Translate »