ಮುಕ್ತ ವಿವಿಗೆ ನೂತನ ಪ್ರವೇಶಾತಿ ನಿರ್ದೇಶಕರ ನೇಮಕ
ಮೈಸೂರು

ಮುಕ್ತ ವಿವಿಗೆ ನೂತನ ಪ್ರವೇಶಾತಿ ನಿರ್ದೇಶಕರ ನೇಮಕ

October 25, 2018

ಮೈಸೂರು: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾ ನಿಲಯವು ಪ್ರವೇಶಾತಿ ನಿರ್ದೇಶಕರನ್ನಾಗಿ ಪ್ರೊ.ಶೆಲ್ವಪಿಳ್ಳೆ ಅಯ್ಯಂಗಾರ್ ಅವರನ್ನು ನೇಮಿಸಿದೆ. ಮಾಜಿ ಪರೀಕ್ಷಾಂಗ ಡೆಪ್ಯುಟಿ ರಿಜಿಸ್ಟ್ರಾರ್ ಹಾಗೂ ಪ್ರಾಚೀನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಶೆಲ್ವಪಿಳ್ಳೆ ಅಯ್ಯಂಗಾರ್ ಅವರನ್ನು ನಿರ್ದೇಶಕ (ಪ್ರವೇಶಾತಿ ಗಳು)ರನ್ನಾಗಿ ಮಂಗಳವಾರ ನೇಮಿಸಿ, ಮುಕ್ತ ವಿಶ್ವವಿದ್ಯಾನಿಲ ಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

ವಿಶ್ವವಿದ್ಯಾನಿಲಯಗಳ ಕಾಯ್ದೆ ಪ್ರಕಾರ ಪ್ರವೇಶಾತಿ ಪ್ರಕ್ರಿಯೆ ದಾಖ ಲಾತಿಗಳಿಗೆ ನಿರ್ದೇಶಕರೇ ಸಹಿ ಮಾಡಬೇಕು. ಆದರೆ ಇದುವರೆಗೆ ಅದನ್ನು ಅನುಸರಿಸುತ್ತಿರಲಿಲ್ಲ. ರಿಜಿಸ್ಟ್ರಾರ್ ಅವರೇ ಪ್ರವೇಶಾತಿ ಪ್ರಕ್ರಿಯೆಗಳನ್ನು ನಡೆಸುತ್ತಾ ಬಂದಿದ್ದರು ಎಂದು ಮೂಲಗಳು ತಿಳಿಸಿವೆ. ಇದೀಗ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಪ್ರೊ. ಶೆಲ್ವಪಿಳ್ಳೆ ಅಯ್ಯಂಗಾರ್ ಅವರನ್ನು ನಿರ್ದೇಶಕ(ಪ್ರವೇಶಗಳು) ರನ್ನಾಗಿ ನೇಮಿಸಲಾಗಿದ್ದು, ಅವರು ನಾಳೆ(ಅ.25) ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.

Translate »