ಮೈಸೂರು: ಮೈಸೂರಿನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕಾರಂಜಿಕೆರೆ ಮಳೆ ಕೊರತೆ ಹಾಗೂ ಬೇಸಿಗೆಯಿಂದ ಬತ್ತಿ ಹೋಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಮುಂದಾಗಿರುವ ಮೃಗಾಲಯ ಪ್ರಾಧಿಕಾರ, ವಿದ್ಯಾರಣ್ಯ ಪುರಂನಲ್ಲಿರುವ ಒಳಚರಂಡಿ ನೀರು ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿದ ನೀರನ್ನು ಕೆರೆಗೆ ತುಂಬಿ ಸುವ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಕಳೆದ ಸಾಲಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಕಾರಂಜಿಕೆರೆಯಲ್ಲಿ ಕಡಿಮೆ ನೀರು ಸಂಗ್ರಹ ವಾಗಿತ್ತು. ಬಿಸಿಲ ಬೇಗೆ ಹೆಚ್ಚಾಗಿರುವುದರಿಂದ ಜನವರಿ ಯಿಂದಲೇ ಕಾರಂಜಿಕೆರೆಯಲ್ಲಿ ನೀರಿನ ಪ್ರಮಾಣ ಕುಸಿಯಲಾರಂಭಿಸಿತ್ತು. ಕೆರೆಯಲ್ಲಿ…
ಬತ್ತಿದ ಕಾರಂಜಿಕೆರೆ: ದೋಣಿ ವಿಹಾರ ಸ್ಥಗಿತ
February 14, 2019ಮೈಸೂರು: ನೀರಿನ ಪ್ರಮಾಣ ಗಣನೀಯವಾಗಿ ಕುಸಿದ ಹಿನ್ನೆಲೆಯಲ್ಲಿ ಮೈಸೂರಿನ ಕಾರಂಜಿಕೆರೆ ಯಲ್ಲಿ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ವಲಸೆ ಪಕ್ಷಿಗಳ ಸಂತಾನಾಭಿವೃದ್ಧಿ ಸಂದರ್ಭದಲ್ಲಿಯೇ ಕೆರೆಯಲ್ಲಿ ನೀರಿನ ಪ್ರಮಾಣ ಕುಸಿದಿರುವುದು ಪಕ್ಷಿ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಮೈಸೂರಿನ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕಾರಂಜಿ ಕೆರೆಗೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡಿ, ದೋಣಿ ವಿಹಾರ ಮಾಡಿ ಸಂಭ್ರಮಿಸುತ್ತಿದ್ದರು. ಕಳೆದ ಸಾಲಿನಲ್ಲಿ ವಾಡಿಕೆ ಮಳೆ ಬಾರದೆ ಕಾರಂಜಿಕೆರೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆ ನೀರು ಸಂಗ್ರಹವಾಗಿತ್ತು. ರಾಜಕಾಲುವೆ ಒತ್ತುವರಿ ಯಾಗಿರುವುದರಿಂದ ಚಾಮುಂಡಿಬೆಟ್ಟದಿಂದ ಮಳೆ…
ಕಾರಂಜಿಕೆರೆಯಲ್ಲಿ ಮತ್ತೊಮ್ಮೆ ತಲೆ ಎತ್ತಲಿದೆ `ಚಿಟ್ಟೆಗಳ ಉದ್ಯಾನ’
December 10, 2018ಮೈಸೂರು: ಚಿಣ್ಣರೂ ಸೇರಿದಂತೆ ಎಲ್ಲಾ ವಯೋಮಾನದವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ `ಚಿಟ್ಟೆಗಳ ಉದ್ಯಾನವನ’ ಮತ್ತೊಮ್ಮೆ ತಲೆ ಎತ್ತಲಿದೆ. ಕಾರಂಜಿಕರೆಯ ಆವರಣದಲ್ಲಿ ಚಿಟ್ಟೆ ಗಳ ಉದ್ಯಾನವನ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ 20 ಲಕ್ಷ ರೂ. ನೀಡಿದ್ದು, ಮೃಗಾಲಯವು ಈಗಾಗಲೇ ಕಾಮಗಾರಿ ಆರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ. ಕಾರಂಜಿ ಕೆರೆಯ ಆವರಣದಲ್ಲಿ ನ್ಯಾಚ್ಯುರಲ್ ಹಿಸ್ಟರಿ ಮ್ಯೂಸಿಯಂ ಕಟ್ಟಡಕ್ಕೆ ಹೊಂದಿಕೊಂಡಂತೆ ಕಳೆದ 8 ವರ್ಷದ ಹಿಂದೆಯೇ ಚಿಟ್ಟೆಗಳ ಉದ್ಯಾನವನ ನಿರ್ಮಿಸಲಾಗಿತ್ತು. ಈ ಉದ್ಯಾನವನ ದಲ್ಲಿ ಬಣ್ಣಬಣ್ಣದ ಬಗೆಬಗೆಯ ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು….
ಮೈಸೂರು ಮೃಗಾಲಯದಿಂದ ಕಾರಂಜಿ ಕೆರೆಗೆ ‘ಕೆಳ ಸೇತುವೆ’ ಸಂಪರ್ಕ
October 25, 2018ಮೈಸೂರು: ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಇದೀಗ ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆಗೆ ಸಂಪರ್ಕ ಕಲ್ಪಿಸುವ ಕೆಳ ಸೇತುವೆ ನಿರ್ಮಿಸಲಾಗಿದ್ದು, ಪ್ರವಾಸಿಗರು ಒಂದೇ ಟಿಕೆಟ್ ಖರೀದಿಸಿ, ಮೈಗಾಲಯ ಮತ್ತು ಕಾರಂಜಿ ಕೆರೆಯನ್ನು ವೀಕ್ಷಿಸಬಹುದಾಗಿದೆ. ಮೈಸೂರು ಮೃಗಾಲಯ ಪ್ರಾಧಿಕಾರ ಮೃಗಾಲಯ ಮತ್ತು ಕಾರಂಜಿ ಕೆರೆಗೆ ಕೆಳ ಸೇತುವೆಯೊಂದರ ಸಂಪರ್ಕ ಕಲ್ಪಿಸಿದೆ. 150 ಮೀಟರ್ ಉದ್ದದ ಈ ಕೆಳ ಸೇತುವೆ ಮೂಲಕ ಮೃಗಾಲಯದಿಂದ ಕಾರಂಜಿ ಕೆರೆಗೆ ಅಥವಾ ಕಾರಂಜಿ ಕೆರೆಯಿಂದ ಮೃಗಾಲಯಕ್ಕೆ ಭೇಟಿ ನೀಡಬಹುದಾಗಿದೆ. ಅರಣ್ಯ ಸಚಿವ…