ವಿಶ್ವ ಸಂಗೀತ ದಿನ-7 ವಿದ್ವಾಂಸರಿಗೆ ಗೌರವ
ಮೈಸೂರು

ವಿಶ್ವ ಸಂಗೀತ ದಿನ-7 ವಿದ್ವಾಂಸರಿಗೆ ಗೌರವ

June 21, 2020

ಮೈಸೂರು,ಜೂ.20(ಆರ್‍ಕೆಬಿ)- ಸಂಗೀತ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಮೈಸೂರಿನ ವಿದ್ವಾಂಸರನ್ನು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ `ವಿಶ್ವ ಸಂಗೀತ ದಿನ’ ಅಂಗವಾಗಿ ಶನಿವಾರ ಗೌರವಿಸಿತು.

ಚಾಮುಂಡಿಪುರಂ ವೃತ್ತದ ಬಳಿಯ ಅಪೂರ್ವ ಸಭಾಂಗಣದಲ್ಲಿ ಸಂಗೀತ ವಿದ್ವಾಂಸರಾದ ಅಂಬಾ ಪ್ರಸಾದ್ (ಪಿಟೀಲು), ಶಂಕರ್(ವೀಣೆ), ವಿಶ್ವನಾಥ್ (ಮ್ಯಾಂಡೊಲಿನ್), ಇಂದೂ ಶೇಖರ್(ತಬಲಾ), ನಾಗಲಕ್ಷ್ಮಿ, ಇಂದ್ರಾಣಿ ಅನಂತರಾಮ್, ರಶ್ಮಿ (ಗಾಯ ಕರು) ಅವರನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಚನ್ನಪ್ಪ ಶಾಲು ಹೊದಿಸಿ ಗೌರವಿಸಿದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಸಂಗೀತದ ಅಭ್ಯಾಸದಿಂದ ಆರೋಗ್ಯ ವೃದ್ಧಿಸುತ್ತದೆ. ಶಂಖನಾದ ಶ್ವಾಸ ಕೋಶ ಶುದ್ಧಿ ಮಾಡುತ್ತದೆ. ವೇದಮಂತ್ರ ಮೆದುಳಿಗೆ ಶಕ್ತಿ ಹೆಚ್ಚಿಸುತ್ತದೆ ಎಂದರು.

ಕಸಾಪ ಮೈಸೂರು ಜಿಲ್ಲಾಧ್ಯಕ್ಷ ವೈ.ಡಿ. ರಾಜಣ್ಣ ಮಾತನಾಡಿ, ಸಂಗೀತ ಕಾರ್ಯ ಕ್ರಮಗಳು ಕಲಾಭಿಮಾನಿಗಳಿಗೆ ನೆಮ್ಮದಿಯ ಔಷಧಿ ನೀಡುತ್ತವೆ. ದೇವರನಾಮ, ಭಜನೆ, ಸುಗಮ ಸಂಗೀತದಿಂದ ಹಿರಿಯ ನಾಗರಿ ಕರ ಬದುಕಿಗೆ ಶಕ್ತಿ ಬರುತ್ತದೆ ಎಂದರು.

ಇಳೈ ಆಳ್ವಾರ್ ಸ್ವಾಮೀಜಿ, ವಿದ್ವಾಂಸ ಡಾ.ರಾಜ್‍ಕುಮಾರ್, ರಾಷ್ಟ್ರಪ್ರಶಸ್ತಿ ವಿಜೇತ ಗಣೇಶ್ ಈಶ್ವರಭಟ್, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮಿದೇವಿ, ಕೃಷ್ಣರಾಜ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಜಯಸಿಂಹ ಶ್ರೀಧರ್, ಕಡಕೊಳ ಜಗದೀಶ್, ಶ್ರೀಕಾಂತ್ ಕಶ್ಯಪ್ ಇನ್ನಿತರರು ಉಪಸ್ಥಿತರಿದ್ದರು.

Translate »