ಮೈಸೂರು

ಓದುವ ಹವ್ಯಾಸದಿಂದ ಮನಸ್ಥೈರ್ಯ, ವ್ಯಕ್ತಿತ್ವ ವಿಕಸನ

June 21, 2020

ಮೈಸೂರು, ಜೂ.20(ಆರ್‍ಕೆಬಿ)-ಗ್ರಂಥಾಲಯ ಚಳವಳಿಯ ಪಿತಾಮಹ ಪಿ.ಎನ್.ಪಣಿಕ್ಕರ್ ಸ್ಮರಣಾರ್ಥ ರಾಜ್ಯ ಸರ್ಕಾರದ ಸೂಚನೆಯಂತೆ ಮೈಸೂರು ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ `ಓದುವ ದಿನ’ ಆಚರಿಸಲಾಯಿತು.

ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ತರಬೇತಿ ಸಂಸ್ಥೆ, ವಿಸ್ತರಣಾ ತರ ಬೇತಿ ಕೇಂದ್ರದ ಸಹಯೋಗದಲ್ಲಿ ಗೂಗಲ್ ಮೀಟ್ ಆನ್‍ಲೈನ್‍ನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಬಿ.ರವೀಶ್ ಕುಮಾರ್ ಮಾಹಿತಿ ನೀಡಿದರು. ಓದುವ ಅಭ್ಯಾಸದಿಂದ ಜ್ಞಾನ, ಮಾನಸಿಕ ಸ್ಥೈರ್ಯ, ಸಂಸ್ಕಾರ, ವ್ಯಕ್ತಿತ್ವ ವಿಕಸನ ಲಭಿಸುತ್ತದೆ ಎಂದು ತಿಳಿಸಿಕೊಟ್ಟರು.

ಉಪನಿಷತ್ ಮತ್ತು ಪಂಚತಂತ್ರ ಕಥೆ ಗಳನ್ನು ಹೇಳುವ ಮೂಲಕ ರವಿಕುಮಾರ್ ಅವರು, ಮಕ್ಕಳು ಮತ್ತು ಸಾರ್ವಜನಿಕರನ್ನು ರಂಜಿಸಿದರು. ಇಂದಿನಿಂದ ದಿನಪತ್ರಿಕೆ, ವಾರ ಪತ್ರಿಕೆ ಮತ್ತು ಜ್ಞಾನಾಧಾರಿತ ಪುಸ್ತಕಗಳನ್ನು ಹಾಗೂ ಭಾರತೀಯ ಪಾರಂಪರಿಕ ಗ್ರಂಥ ಗಳಾದ ರಾಮಾಯಣ, ಮಹಾಭಾರತ ವನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳು ವುದಾಗಿ ಮಕ್ಕಳು ವಾಗ್ದಾನ ನೀಡಿದರು.

ಬೆಂಗಳೂರು, ಮೈಸೂರಿನ ಅನೇಕ ಶಾಲೆಗಳ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಂಡು ಪೋಷಕರು, ಶಿಕ್ಷಕರ ಸಮೇತ ಭಾಗವಹಿಸಿದ್ದರು. ಮೈಸೂರು ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಬಿ.ಮಂಜು ನಾಥ್, ಮೈಸೂರು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೆ.ವಿ.ಶಿವ ರಾಮಯ್ಯ, ಪತ್ರಾಂಕಿತ ಬೋಧಕರಾದ ಎನ್.ಭಾರತಿ ಇನ್ನಿತರರು ಉಪಸ್ಥಿತರಿದ್ದರು.

Translate »