ಚಿರತೆ ಸೆರೆ: ಜಂತಗಳ್ಳಿ ಗ್ರಾಮಸ್ಥರಿಗೀಗ ನಿರಾತಂಕ
ಮೈಸೂರು

ಚಿರತೆ ಸೆರೆ: ಜಂತಗಳ್ಳಿ ಗ್ರಾಮಸ್ಥರಿಗೀಗ ನಿರಾತಂಕ

June 21, 2020

ಮೈಸೂರು, ಜೂ.20(ಎಂಟಿವೈ)- ಮೈಸೂರು ತಾಲೂಕಿನ ಜಂತಗಳ್ಳಿ ಗ್ರಾಮದಲ್ಲಿ ಆಗಾಗ್ಗೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಅತಂಕ ಉಂಟು ಮಾಡಿದ್ದ ಹೆಣ್ಣು ಚಿರತೆ ಶುಕ್ರವಾರ ರಾತ್ರಿ ಬೋನಿಗೆ ಬಿದ್ದಿದೆ.

ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಗ್ರಾಮದ ಜೆ.ಕೆ.ಫಾರಂನಲ್ಲಿ ಇಟ್ಟಿದ್ದ ಬೋನಿನಲ್ಲಿ 4 ವರ್ಷದ ಚಿರತೆ ಸೆರೆಯಾಗಿದೆ. ಇದರಿಂದ ಗ್ರಾಮಸ್ಥರಲ್ಲಿದ್ದ ಆತಂಕ ದೂರವಾಗಿದೆ. ಸ್ಥಳಕ್ಕೆ ತೆರಳಿದ ಅರಣ್ಯ ಸಿಬ್ಬಂದಿ ಚಿರತೆಯನ್ನು ಮೈಸೂರಿನ ಅರಣ್ಯ ಭವನಕ್ಕೆ ಒಯ್ದರು. ಚಿರತೆ ಆರೋಗ್ಯವಾಗಿದ್ದು, ಅದನ್ನು ಬಂಡೀಪುರದ ಮೂಲೆಹೊಳೆ ಅರಣ್ಯದಲ್ಲಿ ಬಿಡಲಿದ್ದಾರೆ.

ಕೆಲ ದಿನಗಳಿಂದ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿ ಕುರಿ, ಬೀದಿನಾಯಿಗಳು ಆಹಾರವಾಗಿದ್ದವು. ಇದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿತ್ತು. ಚಿರತೆ ಕಾಟ ತಪ್ಪಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

Translate »