`ಸಂಗೀತದಿಂದ ಆರೋಗ್ಯ’ ವಿಚಾರ ಮಂಥನ : ಸಂಗೀತ ಸಾಧಕರಿಗೆ ಅಭಿನಂದನೆ
ಮೈಸೂರು

`ಸಂಗೀತದಿಂದ ಆರೋಗ್ಯ’ ವಿಚಾರ ಮಂಥನ : ಸಂಗೀತ ಸಾಧಕರಿಗೆ ಅಭಿನಂದನೆ

June 22, 2018

ಮೈಸೂರು: ಮೈಸೂರಿನಲ್ಲಿ ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ರಾಮಾನುಜ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ “ಸಂಗೀತದಿಂದ ಆರೋಗ್ಯ” ವಿಚಾರಮಂಥನ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು,ಆಕಾಶವಾಣಿ ಸಂಗೀತ ಸಂಯೋಜಕಿ ಪುಷ್ಪಲತಾ, ಗಮಕ ವಿದೂಷಿ ಜ್ಯೋತಿ, ಡಾ.ರಾಜಕುಮಾರ್ ಸಂಗೀತ ಸಂಜೆಯ ಡ್ರಮರ್ ರಾಘವೇಂದ್ರ ಪ್ರಸಾದ್, ಸುಗಮ ಸಂಗೀತದ ಕಲಾವಿದ ಮಹಾಲಿಂಗು, ಎದೆ ತುಂಬಿ ಹಾಡುವೆನು ಖ್ಯಾತಿಯ ಕುಮಾರಿ ಹಂಸಿಣಿ ಸನ್ಮಾನಿತರು.

ಇದೇ ಸಂದರ್ಭದಲ್ಲಿ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ ಸಾಂಸ್ಕೃತಿಕ ರಾಜಧಾನಿ ಮೈಸೂರು ಕಲಾವಿದರ ತವರೂರು. ಇದಕ್ಕೆ ಸಂಗೀತದ ಶಕ್ತಿಯೇ ಕಾರಣ. ಸಂಗೀತಾಭ್ಯಾಸದಿಂದ ಆರೋಗ್ಯ ವೃದ್ಧಿಸುತ್ತದೆ, ಶಂಖನಾದ ಶ್ವಾಸಕೋಶ ಶುದ್ಧಿ ಮಾಡುತ್ತದೆ, ಜನಪದ ಶೈಲಿ ಉತ್ತಮ ಆರೋಗ್ಯಕ್ಕೆ ಸಹಕಾರಿ, ವೇದಮಂತ್ರ ಮೆದುಳಿನ ಶಕ್ತಿ ಹೆಚ್ಚಿಸುತ್ತದೆ, ಹಿಂದೂಸ್ತಾನಿ ಕರ್ನಾಟಿಕ್ ಸಂಗೀತ ಪ್ರದರ್ಶನಕ್ಕೆ ವಿದೇಶಗಳಲ್ಲಿ ಗೌರವವಿದೆ, ಕಟ್ಟುನಿಟ್ಟಿನ ಸಂಗೀತ ಪ್ರಾಕಾರದಿಂದ ಅರೋಗ್ಯ ವೃದ್ಧಿಯಾಗುತ್ತದೆ. ಮಕ್ಕಳನ್ನು ಕಡ್ಡಾಯವಾಗಿ ಸಂಗೀತ ಶಾಲೆಗೆ ಸೇರಿಸಿದರೆ ಮುಂದಿನ ಅವರ ಭವಿಷ್ಯ ಉಜ್ವಲವಾಗಿರುತ್ತದೆ. ಹಿಂದಿನ ಕಾಲದಲ್ಲಿ ಆಕಾಶವಾಣಿ , ದೂರದರ್ಶನದಲ್ಲಿ ಸಂಗೀತ ಕಾರ್ಯಕ್ರಮಗಳಿಗೆ ಜನಸಾಮಾನ್ಯರು ಅವಲಂಭಿತರಾಗಿದ್ದರು. ಆರೋಗ್ಯದ ಮನಃಶಾಂತಿ ಹೆಚ್ಚಾಗಿ ಸಿಗುತ್ತಿದ್ದ ಕಾಲ ಎಂದು ಸ್ಮರಿಸಿದರು.

ನಂತರ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಹೆಚ್. ಎನ್.ಶ್ರೀಧರಮೂರ್ತಿ ಮಾತನಾಡಿ ಸಂಗೀತ ಕಾರ್ಯಕ್ರಮಗಳು ಕಲಾಭಿಮಾನಿಗಳಿಗೆ ನೆಮ್ಮದಿಯ ಔಷಧಿ ನೀಡುತ್ತದೆ. ದೇವರನಾಮ, ಭಜನೆ, ಸುಗಮಸಂಗೀತದಿಂದ ಹಿರಿಯ ನಾಗರಿಕರಿಗೆ ಬದುಕಿನ ಶಕ್ತಿ ಸಿಗುತ್ತದೆ. ಆಕಾಶವಾಣಿ , ದೂರದರ್ಶನ, ಸಂಗೀತ ವಿಶ್ವವಿದ್ಯಾನಿಯಗಳು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಾಮಾಜಿಕ ಜಾಲತಾಣದ ಮೂಲಕ ಕಲಾವಿದರನ್ನು ಗುರುತಿಸಿ ಮುಖ್ಯವಾಹಿನಿಗೆ ತಂದು ಕಲಾಭಿಮಾನಿಗಳಿಗೆ ಪರಿಚಯಿಸಲು ಯೋಜನೆಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿಪಿ.ಮಂಜುನಾಥ್, ನಗರಪಾಲಿಕೆ ಸದಸ್ಯ ಮಾವಿ. ರಾಂಪ್ರಸಾದ್, ಮಹರ್ಷಿ ಶಾಲೆಯ ಕಾರ್ಯದರ್ಶಿ ಭವಾನಿ ಶಂಕರ್, ಕಲಾವಿದ ಮೈಕ್ ಚಂದ್ರು, ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಹೆಚ್.ಎನ್ ಶ್ರೀಧರಮೂರ್ತಿ, ಬಿಜೆಪಿ ಮುಖಂಡರಾದ ಎ.ಸಂತೋಷ್, ಹೆಚ್.ವಿ ಭಾಸ್ಕರ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಜಯಸಿಂಹ ಶ್ರೀಧರ್, ತೇಜಸ್ ಶಂಕರ್, ಡಿ.ಕೆ.ನಾಗಭೂಷಣ್ ಮುಂತಾದವರು ಭಾಗವಹಿಸಿದ್ದರು.

Translate »