- ಶಾಲಾ ಮಕ್ಕಳಿಗೆ ಮಾತ್ರ ಸೀಮಿತವಾದ ಕಾರ್ಯಕ್ರಮ
- ಚಾ.ನಗರದಲ್ಲಿ ಎರಡು ಕಡೆ ನಡೆದ ಯೋಗ ದಿನಾಚರಣೆ
ಭಾರತ ಸರ್ಕಾರದ ಆಯುಷ್ ಮಂತ್ರಾ ಲಯ, ಕೇಂದ್ರಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನ ಸಂಸ್ಥೆ ಮತ್ತು ಆಯುಷ್ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂ ಆಶ್ರಯದಲ್ಲಿ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ 4ನೇ ಅಂತರಾಷ್ಟ್ರೀಯ ಯೋಗ ದಿನಾ ಚರಣೆ ಆಯೋಜಿಸಲಾಗಿತ್ತು. ಈ ಕಾರ್ಯ ಕ್ರಮದಲ್ಲಿ ಯೋಗ ಬಂಧುಗಳು ಹಾಗೂ ಸಾರ್ವಜನಿಕರು, ಸಂಘ-ಸಂಸ್ಥೆಗಳು ಪಾಲ್ಗೊಳ್ಳಬೇಕಿತ್ತು. ಇವರು ಪಾಲ್ಗೊಂಡಿ ದ್ದರೆ ಕಾರ್ಯಕ್ರಮಕ್ಕೆ ಅರ್ಥ ಬರುತ್ತಿತ್ತು. ಆದರೆ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಯವರು ಹಾಗೂ ಬೆರಳೆಣಿಕೆ ಯಷ್ಟು ಅಧಿಕಾರಿಗಳು ಮಾತ್ರ ಪಾಲ್ಗೊಂ ಡಿದ್ದರು. ಹೀಗಾಗಿ ಜಿಲ್ಲಾಮಟ್ಟದ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು.
ಯೋಗ ದಿನಾಚರಣೆಯ ಈ ಕಾರ್ಯ ಕ್ರಮಕ್ಕೆ ಸರ್ಕಾರದ ನಿಯಮಾನುಸಾರ ಜಿಲ್ಲೆಯ ಇಬ್ಬರು ಸಚಿವರು, ಸಂಸದರು, ಶಾಸಕರು, ಜಿಪಂ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಒಟ್ಟು 16 ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದರು. ಆದರೆ ಈ 16 ಜನಪ್ರತಿನಿಧಿಗಳ ಪೈಕಿ ನಗರಸಭಾ ಅಧ್ಯಕ್ಷೆ ಶೋಭಾ ಅವರನ್ನು ಹೊರತು ಪಡಿಸಿದರೆ, ಉಳಿದೆಲ್ಲಾ ಜನ ಪ್ರತಿನಿಧಿಗಳು ಗೈರು ಹಾಜರಾಗಿದ್ದರು. ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ನ್ಯಾಯಾಲಯ ದಲ್ಲಿ ಪಾಲ್ಗೊಳ್ಳಬೇಕಾಗಿದ್ದ ಕಾರಣ ಬೆಂಗಳೂರಿಗೆ ತೆರಳಿದ್ದರು. ಹೆಚ್ಚುವರಿ ಜಿಲ್ಲಾ ಧಿಕಾರಿ ಕೆ.ಎಂ.ಗಾಯತ್ರಿ, ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ಜಿಪಂ ಸಿಇಒ ಡಾ.ಕೆ. ಹರೀಶ್ ಕುಮಾರ್, ಉಪಕಾರ್ಯದರ್ಶಿ ಮುನಿರಾಜಪ್ಪ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪಿ.ಪುನೀತ್ ಬಾಬು ಭಾಗವಹಿಸಿದ್ದರು.
ಯೋಗ ಬಂಧುಗಳ ನಿರ್ಲಕ್ಷ್ಯ: ನಗರ ದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕಳೆದ 12 ವರ್ಷಗಳಿಂದ ಜಿಲ್ಲೆ ಯಲ್ಲಿ ಸಕ್ರಿಯವಾಗಿದೆ. ಪ್ರತಿದಿನ ಯೋಗ ಭ್ಯಾಸದಲ್ಲಿ ತೊಡಗಿದೆ. ಕಳೆದ 8 ವರ್ಷಗಳಿಂದ ಈ ಸಮಿತಿಯ ಆಶ್ರಯದಲ್ಲಿ ಸಾಮೂ ಹಿಕ ಸೂರ್ಯ ನಮಸ್ಕಾರ ನಡೆಸಲಾಗು ತ್ತಿದೆ. ಕಳೆದ 3 ವರ್ಷಗಳಿಂದ ಅಂತ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಆದರೆ ಈ ಬಾರಿ ಜಿಲ್ಲಾಡಳಿತದ ಹಿರಿಯ ಅಧಿಕಾರಿ ಗಳ ಬೇಜವಬ್ದಾರಿತನ ಹಾಗೂ ನಿರ್ಲಕ್ಷ್ಯ ದಿಂದ ಯೋಗದಲ್ಲಿ ಸಕ್ರಿಯವಾಗಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾರ್ಯ ಕ್ರಮದಿಂದ ದೂರ ಉಳಿಯಬೇಕಾಯಿತು.
ನಗರದಲ್ಲಿ ಆಯೋಜಿಸಿದ್ದ ಜಿಲ್ಲಾಡಳಿತ ಮಟ್ಟದ ಅಂತರಾಷ್ಟ್ರೀಯ ಯೋಗ ದಿನಾ ಚರಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಹೆಸರನ್ನು ಹಾಕಿಸಿರಲಿಲ್ಲ. (ಕಳೆದ 3 ವರ್ಷಗಳು ಸಮಿತಿಯ ಹೆಸರನ್ನು ಹಾಕಲಾಗಿತ್ತು) ಇದರಿಂದ ಬೇಸರ ಗೊಂಡ ಸಮಿತಿಯ ಎಲ್ಲಾ ನೂರಾರು ಸದ ಸ್ಯರು ಹಾಗೂ ಪದಾಧಿಕಾರಿಗಳು ಜಿಲ್ಲಾ ಡಳಿತದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಸಮಿತಿಯ ಅಧ್ಯಕ್ಷ ಶಿವಕುಮಾರ ಸ್ವಾಮಿ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ಜಿಲ್ಲಾಡಳಿತ ಆಯೋಜಿಸಿದ್ದ ಯೋಗ ದಿನಾಚರಣಾ ಕಾರ್ಯಕ್ರಮದಲ್ಲಿ ಸಾರ್ವ ಜನಿಕ ಪಾಲ್ಗೊಳ್ಳುವಿಕೆ ಇರಲಿಲ್ಲ. ಇದಕ್ಕೆ ಕಾರಣ ಜಿಲ್ಲೆಯ ಯಾವುದೇ ಸಂಘ-ಸಂಸ್ಥೆ ಗಳನ್ನು ಜಿಲ್ಲೆಯ ಹಿರಿಯ ಅಧಿಕಾರಿಗಳು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಯಾರೊ ಬ್ಬರಿಗೂ ಆಹ್ವಾನ ಪತ್ರಿಕೆ ನೀಡಿರಲಿಲ್ಲ.
ಕಾಟಾಚಾರಕ್ಕೆ ಎಂಬಂತೆ ಜಿಲ್ಲಾಡಳಿತ ಕಾರ್ಯಕ್ರಮ ರೂಪಿಸಿದ್ದರಿಂದ ಸಾರ್ವ ಜನಿಕರು ಕಾರ್ಯಕ್ರಮದಿಂದ ದೂರ ಉಳಿಯ ಬೇಕಾಯಿತು ಎಂದು ಪರಿಸರವಾದಿ ಪುಣ ಜನೂರು ದೊರೆಸ್ವಾಮಿ ದೂರಿದರು.
ಆಹ್ವಾನ ಪತ್ರಿಕೆಯಲ್ಲಿ ತಮ್ಮ ಸಂಸ್ಥೆಯ ಹೆಸರನ್ನು ಹಾಕಿಸದಿದ್ದರೂ ಅನಿವಾರ್ಯ ಕಾರಣಗಳಿಂದ ಶ್ರೀಧರ್ಮಸ್ಥಳ ಪ್ರಕೃತಿ ಮತ್ತು ಯೋಗ ಆಸ್ಪತ್ರೆಯ ವೈದ್ಯರು ಮಾತ್ರ ಪಾಲ್ಗೊಂಡಿದ್ದರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನಗರದ ಶ್ರೀರಾಮಮಂದಿ ರದಲ್ಲಿ ಪ್ರತ್ಯೇಕವಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿತು. ಇದರಲ್ಲಿ ಸಮಿತಿಯ ನೂರಾರು ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಳೆದ ಬಾರಿ ನಡೆದಿದ್ದ ಯೋಗ ದಿನಾ ಚರಣೆ ಯಶಸ್ವಿಗಾಗಿ ದುಡಿದಿದ್ದ ಅಧಿಕಾರಿ ಗಳು ಇದ್ದರೂ ಸಹ ಈ ಬಾರಿಯ ಯೋಗ ದಿನಾಚರಣೆ ಅರ್ಥಗರ್ಭಿತವಾಗಿ ನಡೆ ಯದೇ ಇರುವುದು ಸಾರ್ವಜನಿಕ ವಲಯ ದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲಾಡಳಿತ ಹಿರಿಯ ಅಧಿಕಾರಿಯ ನಿರ್ಲಕ್ಷ್ಯದಿಂದ ನಗರದಲ್ಲಿಯೇ ಎರಡು-ಮೂರು ಕಡೆ ಯೋಗಭ್ಯಾಸ ನಡೆಯಲು ಕಾರಣವಾ ಯಿತು ಎಂಬ ಮಾತುಗಳು ಕೇಳಿ ಬಂದಿವೆ.