ಅಳುವ ಕಂದನ ಆಕ್ರಂದನ ಕೇಳದ ನಿಷ್ಕರುಣ ತಾಯಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಿಂದ ಬುಧವಾರ ರಾತ್ರಿ ನಾಪತ್ತೆ
ಚಾಮರಾಜನಗರ

ಅಳುವ ಕಂದನ ಆಕ್ರಂದನ ಕೇಳದ ನಿಷ್ಕರುಣ ತಾಯಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಿಂದ ಬುಧವಾರ ರಾತ್ರಿ ನಾಪತ್ತೆ

June 22, 2018

ಚಾಮರಾಜನಗರ: ತಾಯಿ… ಈ ಪದಕ್ಕೆ ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಅಪಾರವಾದ ಗೌರವವಿದೆ. ದೇವರಿಗಿಂತಲೂ ತಾಯಿಯೇ ಹೆಚ್ಚು ಎಂಬ ಅತ್ಯುನ್ನತ ಸ್ಥಾನವನ್ನು ನೀಡಲಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ‘ತಾಯಿ’ ತನ್ನ ವ್ಯಕ್ತಿತ್ವ, ಘನತೆ, ಗೌರವಗಳನುನ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಅಘಾತ ಕಾರಿ ಬೆಳವಣ ಗೆ, ಕರುಣೆ, ತ್ಯಾಗ, ಮಮತೆಯ ಪ್ರತೀಕವಾಗಿದ್ದ ತಾಯಿ, ಇಂದು ನಿಷ್ಕರುಣಿಯಾಗಿ ‘ಸ್ವಾರ್ಥ’ದ ಸುಳಿಗೆ ಸಿಲುಕು ತ್ತಿರುವುದು ನಿಜಕ್ಕೂ ದುರಂತ. ಇಂತಹ ನಿಷ್ಕರುಣ ತಾಯಿ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಮೂರು ತಿಂಗಳ ಅಳುವ ಕಂದನ ಆಕ್ರಂದನವನ್ನು ಕೇಳಿಸಿಕೊಳ್ಳದೆ ನಿಷ್ಕರುಣಿಯಾಗಿ ನಾಪತ್ತೆಯಾಗಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕಣ್ಣೇಗಾಲದಿಂದ ನಂಜನಗೂಡು ತಾಲೂಕಿನ ಹಳ್ಳಿದಿಡ್ಡಿ ಗ್ರಾಮದ ಮಹದೇವ ಎಂಬುವವರಿಗೆ ವಿವಾಹವಾಗಿದ್ದ ಜ್ಯೋತಿ (22) ನಾಪತ್ತೆಯಾದ ಮಹಿಳೆ.

ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದ ಜ್ಯೋತಿ ತನ್ನ 3 ತಿಂಗಳ ಹಸುಗೂಸನ್ನು ಬಿಟ್ಟು ನಾಪತ್ತೆಯಾಗಿದ್ದಾರೆ.ಮಹದೇವಸ್ವಾಮಿಗೂ ಜ್ಯೋತಿಗೂ 4 ವರ್ಷದ ಹಿಂದೆ ವಿವಾಹ ವಾಗಿತ್ತು. ಇವರಿಗೆ 3 ವರ್ಷದ ಹೆಣ್ಣು ಮತ್ತು 3 ತಿಂಗಳ ಹೆಣ್ಣು ಹಸುಕೂಸು ಇತ್ತು. ಬಾಣಂತಿ ಜ್ಯೋತಿ ತನ್ನ ತವರು ಮನೆ ಕಣ್ಣೇ ಗಾಲದಲ್ಲಿ ಇದ್ದರು. ಸಂತಾನಹರಣ ಶಸ್ತ್ರ ಚಿಕಿತ್ಸೆಗೆಂದು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಶಸ್ತ್ರ ಚಿಕಿತ್ಸೆ ಮಾಡಲು ವೈದ್ಯರು ಎಲ್ಲಾ ಸಿದ್ಧತೆ ಕೈಗೊಂಡಿದ್ದರು. ಆದರೆ ಬುಧವಾರ ರಾತ್ರಿ ಸುಮಾರು 10 ಗಂಟೆ ವೇಳೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಜ್ಯೋತಿ ನಾಪತ್ತೆಯಾಗಿದ್ದಾರೆ. ಜ್ಯೋತಿ ತಾನು ದಾಖಲಾಗಿದ್ದ ವಾರ್ಡ್‍ನಿಂದ ಹೊರಬರುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ತನ್ನ ಪತ್ನಿ ಆಸ್ಪತ್ರೆಯಿಂದ ಕಾಣೆಯಾಗಿದ್ದಾಳೆ ಎಂದು ಜ್ಯೋತಿ ಪತಿ ಮಹದೇವಸ್ವಾಮಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

3 ತಿಂಗಳ ಹಸುಗೂಸು ತಾಯಿಯನ್ನು ಕಾಣದೆ ರೋಧಿ ಸುತ್ತಿದ್ದ ದೃಶ್ಯ ಎಂತಹವರ ಹೃದಯವನ್ನು ಕಲಕುವಂತಿತ್ತು. ಜ್ಯೋತಿ ನಾಪತ್ತೆಯಿಂದ ಪೋಷಕರು ಹಾಗೂ ಪತಿ ಅಘಾತಕ್ಕೆ ಒಳಗಾಗಿದ್ದಾರೆ. ಏನೂ ಅರಿಯದ ಮುಗ್ಧ ಮಕ್ಕಳು ಕಂಗಾ ಲಾಗಿದ್ದಾರೆ. ಜ್ಯೋತಿ ಎಲ್ಲಿ ಹೋದಳು, ಏನಾದಳು ಎಂಬುದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆ.

Translate »