ತೋಟದಲ್ಲಿ ಮಗುಚಿ ಬಿದ್ದ ಕಾರು
ಕೊಡಗು

ತೋಟದಲ್ಲಿ ಮಗುಚಿ ಬಿದ್ದ ಕಾರು

July 15, 2018

ಸುಂಟಿಕೊಪ್ಪ: ಚಾಲಕನ ಅಜಾಗರೂಕತೆಯಿಂದ ಮತ್ತು ಅತೀ ವೇಗದ ಚಾಲನೆ ಯಿಂದ ಕಾರೊಂದು ತೋಟದೊಳಗೆ ಮಗುಚಿಕೊಂಡ ಘಟನೆ ಸಮೀಪದ ಬಾಳೆಕಾಡು ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಶನಿವಾರ ನಡೆದಿದೆ.

ಕುಶಾಲನಗರದಿಂದ ಮಡಿಕೇರಿಯತ್ತ ತೆರಳುತ್ತಿದ್ದ ನಾಲ್ವರು ಪ್ರವಾಸಿಗರಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬಲಭಾಗದ ತೋಟದೊಳಗೆ ಮಗುಚಿಕೊಂಡಿದೆ. ಪರಿಣಾಮ ಸಣ್ಣಪುಟ್ಟ ಗಾಯಗಳಿಂದ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಂಟಿಕೊಪ್ಪದ ಗ್ಯಾಸ್ ಏಜೆನ್ಸಿಯ ಸಮೀಪದಲ್ಲಿ ನಿಲ್ಲಿಸಿದ್ದ ಕಾರೊಂದಕ್ಕೆ ಈ ಕಾರು ತಾಗಿಸಿಕೊಂಡು ಹೋಗಿದ್ದು, ನಮ್ಮನ್ನು ಅಟ್ಟಿಸಿಕೊಂಡು ಬರುವರೆನ್ನುವ ಭೀತಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಈ ಅಪಘಾತ ಸಂಭವಿಸಿರಬಹುದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »