ಸುಂಟಿಕೊಪ್ಪದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ಕೊಡಗು

ಸುಂಟಿಕೊಪ್ಪದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

October 6, 2018

ಸುಂಟಿಕೊಪ್ಪ:  ಶಾಲಾ ವಿದ್ಯಾರ್ಥಿನಿಯೋರ್ವಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.

ಬೆಟ್ಟಗೇರಿಯ ಬಿಜಿಲಿಮಂಟಿ ಕಾಫಿ ತೋಟದಲ್ಲಿ ಕಾರ್ಮಿಕರಾಗಿರುವ ಕಿಟ್ಟು ಹಾಗೂ ನೇತ್ರ ದಂಪತಿಯ ಪುತ್ರಿ ಸಿಂಚನ (13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಕುಶಾಲನಗರದ ಶಾಲೆಯೊಂದರಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಿಂಚನಾಳನ್ನು ಪೋಷಕರು ಹಾಸ್ಟೆಲ್‍ಗೆ ಸೇರ್ಪಡೆ ಮಾಡಿ ದ್ದರು. ಆದರೆ ಸಿಂಚನಳಿಗೆ ಹಾಸ್ಟೆಲ್‍ನಲ್ಲಿರಲು ಇಷ್ಟವಿರದೇ ಒಲ್ಲದ ಮನಸ್ಸಿ ನಿಂದ ಹಾಸ್ಟೆಲ್‍ನಿಂದ ಶಾಲೆಗೆ ಹೋಗಿ ಬರುತ್ತಿದ್ದಳು ಎನ್ನಲಾಗಿದೆ.

ಇತ್ತೀಚೆಗೆ ತೋಟದಲ್ಲಿರುವ ಲೈನ್ ಮನೆಗೆ ಬಂದಿದ್ದ ಸಿಂಚನ ಅ. 4ರಂದು ಮಧ್ಯಾಹ್ನ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ವೇಲ್ ಬಿಗಿದು ಆತ್ಮ ಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾಳೆ ಎಂದು ಹೇಳಲಾಗಿದೆ. ಆಕೆಯನ್ನು ಸುಂಟಿಕೊಪ್ಪ ಆಸ್ಪತ್ರೆಗೆ ಕರೆ ತಂದರಾದರೂ ಅದಾಗಲೇ ಸಿಂಚನಾಳ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ವಿಫಲ ಯತ್ನ: ಯುವಕನೊಬ್ಬ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸುಂಟಿಕೊಪ್ಪದ ಬೆಟ್ಟಗೇರಿ ಸಮೀಪದ ಬಿಜಲಿಮಂಟಿ ತೋಟದ ಪಕ್ಕದಲ್ಲಿ ನಡೆದಿದೆ. ಕಾರ್ಮಿಕ ತನಿಯ ಎಂಬು ವವರ ಪುತ್ರ ರಂಜಿತ್ ಅ. 4ರಂದು ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ದ್ದಾನೆ. ತಕ್ಷಣವೇ ಆತನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗಳಿಗೆ ದಾಖಲಿಸಿ ಪ್ರಾಥ ಮಿಕ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Translate »