ಅಕ್ರಮ ರೀಫಿಲ್ಲಿಂಗ್:7 ಸಿಲಿಂಡರ್ ವಶಕ್ಕೆ
ಮೈಸೂರು

ಅಕ್ರಮ ರೀಫಿಲ್ಲಿಂಗ್:7 ಸಿಲಿಂಡರ್ ವಶಕ್ಕೆ

October 6, 2018

ಮೈಸೂರು: ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ದಂಧೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, ಈತನಿಂದ 7 ಗ್ಯಾಸ್ ಸಿಲಿಂಡರ್‍ಗಳು, 3,410 ರೂ.,ನಗದು ಹಾಗೂ ಇತರೆ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗೌಸಿಯಾನಗರದ ಸಮೀರ್(28) ಬಂಧಿತ ಆರೋಪಿ. ಈತ ಮಹಮದೀಯ ರಸ್ತೆಯಲ್ಲಿರುವ ಅರಬ್‍ಜಾನ್ ಮಾಲೀಕತ್ವದ ಶೆಡ್‍ನಲ್ಲಿ ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ದಂಧೆಯಲ್ಲಿ ತೊಡಗಿದ್ದ. ಅ.4 ರಂದು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಗ್ಯಾಸ್ ರೀಫಿಲ್ಲಿಂಗ್ ಮಾಡಲು ಉಪಯೋಗಿಸುತ್ತಿದ್ದ 7 ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟೌವ್ ಹಾಗೂ 2 ಗ್ಯಾಸ್ ರೀಫಿಲ್ಲಿಂಗ್ ರಾಡ್‍ಗಳು ಮತ್ತು ರೆಗ್ಯೂಲೇಟರ್‍ಗಳು ಸೇರಿದಂತೆ ಇತರೆ ಪರಿಕರ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »