ಕುಲ್ಲೇಟಿರ ಕಪ್ ಹಾಕಿ ನಮ್ಮೆ: ಕುಲ್ಲೇಟಿರ, ತೆಕ್ಕೆಡ, ಅಪ್ಪಾರಂಡ ಸೇರಿ 11 ತಂಡ ಮುನ್ನಡೆ
ಕೊಡಗು

ಕುಲ್ಲೇಟಿರ ಕಪ್ ಹಾಕಿ ನಮ್ಮೆ: ಕುಲ್ಲೇಟಿರ, ತೆಕ್ಕೆಡ, ಅಪ್ಪಾರಂಡ ಸೇರಿ 11 ತಂಡ ಮುನ್ನಡೆ

April 26, 2018

ನಾಪೋಕ್ಲು: 22ನೇ ವರ್ಷದ ಕೊಡವ ಕುಟುಂಬಗಳ ನಡುವೆ ನಾಪೋಕ್ಲು ಚೆರಿಯಪರಂಬು ಬಳಿಯ ಜನರಲ್ ತಿಮ್ಮಯ್ಯ ಕ್ರೀಡಾಂ ಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ಚೋಯಮಾಡಂಡ, ಮಂಡೇಟ್ಟಿರ, ತೆಕ್ಕಡ,ತಿತೀರ, ಕುಲ್ಲೇಟಿರ, ಮೂಕಳಮಾಡ, ಮುಕ್ಕಾಟೀರ, ಅಪ್ಪಾರಂಡ, ಪಟ್ಟಚೇರುವಂಡ, ಕೊಂಗೇಟಿರ, ಬೊವ್ವೇರಿ ಯಂಡ ತಂಡಗಳು ಮುನ್ನಡೆ ಸಾಧಿಸಿದವು.

ಇಂದು ನಡೆದ ಮೊದಲ ಪಂದ್ಯಾಟ ದಲ್ಲಿ ಚೋಯಮಾಡಂಡ ತಂಡವು ಭರ್ಜರಿಯಾಗಿ ಆಡುವುದರ ಮೂಲಕ ಕೇಕಡ ತಂಡವನ್ನು 3-0 ಗೋಲು ಗಳಿಂದ ಪರಾಭವಗೊಳಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದು ಕೊಂಡಿತು. ಚೋಯಮಾಡಂಡ ಪರ ಸೋಮಣ್ಣ, ಸನ್ನು ಗಣಪತಿ, ಬಿಪಿನ್ ಗೋಲು ಬಾರಿಸಿ ಮಿಂಚಿ ದರು. ಎರಡನೇ ಪಂದ್ಯಾಟದಲ್ಲಿ ಮಂಡೇ ಟ್ಟಿರ ತಂಡವು ಅಜ್ಜಮಾಡ ತಂಡವನ್ನು 3-1 ಗೋಲುಗಳಿಂದ ಟೈ ಬ್ರೇಕರ್‍ನಲ್ಲಿ ಸೋಲಿಸಿತು.

ಮೂರನೇ ಪಂದ್ಯಾಟದಲ್ಲಿ ತೆಕ್ಕಡ ಮತ್ತು ಚಂಬಂಡ ತಂಡಗಳ ನಡುವೆ ನಡೆಯ ಬೇಕಾಗಿದ್ದು ಚಂಬಂಡ ತಂಡ ಬಾರದ ಕಾರಣ ತೆಕ್ಕಡ ತಂಡಕ್ಕೆ ವಾಕ್ ಓವರ್ ನೀಡಿ ತೆಕ್ಕಡವನ್ನು ವಿಜಯಿ ಎಂದು ಘೋಷಿ ಸಲಾಯಿತು. ನಂತರದ ಪಂದ್ಯಾಟವು ಐಚೇಟ್ಟಿರ ಮತ್ತು ತಿತೀರ ತಂಡಗಳ ನಡುವೆ ನಡೆದು ಟೈ ಬ್ರೇಕರ್‍ನಲ್ಲಿ ತಿತೀರ ತಂಡವು 3-2 ಗೋಲುಗಳಿಂದ ಜಯ ಸಾಧಿಸಿತು. ನಂತರದ ಪಂದ್ಯದಲ್ಲಿ ಅತೀಥೇಯ ಮಾಜಿ ಚಾಂಪಿಯನ್ ಕುಲ್ಲೇಟಿರ ತಂಡವು ಮುಕ್ಕಾಟೀರ (ಬೇತ್ರಿ) ತಂಡವನ್ನು 4-1 ಗೋಲುಗಳಿಂದ ನಿರಾಸದಾಯಿಕವಾಗಿ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದು ಕೊಂಡಿತು.

ಎರಡನೇ ಮೈದಾನದ ಮೊದಲ ಪಂದ್ಯಟ ದಲ್ಲಿ ಮೂಕಳಮಾಡ ತಂಡವು ಮಲ್ಲಂ ಗಡ ತಂಡವನ್ನು 5-0 ಗೋಲುಗಳಿಂದ ಸುಲಭವಾಗಿ ಮಣ ಸಿತು. ಮೂಕಳಮಾಡ ತಂಡ ಗಣಪತಿ ಹ್ಯಾಟ್ರಿಕ್‍ನೊಂದಿಗೆ 5 ಗೋಲು ಬಾರಿಸುವುದರ ಮೂಲಕ ಈ ವರೆಗಿನ ಪಂದ್ಯಾಟದಲ್ಲಿ ಒಂದೇ ಪಂದ್ಯ ದಲ್ಲಿ ಹೆಚ್ಚು ಗೋಲು ಬಾರಿಸಿದ ಕೀರ್ತಿಗೆ ಪಾತ್ರರಾದರು. ನಂತರದ ಪಂದ್ಯದಲ್ಲಿ ಮುಕ್ಕಾ ಟೀರ ತಂಡವು ಕುಟ್ಟೇಟಿರ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತು. ಮುಕ್ಕಾಟೀರ ಪರ ಸಂಜು ತಿಮ್ಮಯ್ಯ, ರತನ್ ಕುಶಾಲಪ್ಪ, ದೀಪಕ್ ಚಂಗಪ್ಪ, ಗೋಲು ಗಳಿಸಿದರು.

ಬಲ್ಯಾಮಾಂಡ ತಂಡವನ್ನು ಅಪ್ಪಾರಂಡ ತಂಡವು 5-0 ಗೋಲುಗಳಿಂದ ಭರ್ಜರಿ ಯಾಗಿ ಮಣ ಸಿತು, ಏಕ ಪಕ್ಷೀಯವಾಗಿದ್ದ ಪಂದ್ಯದಲ್ಲಿ ಅಪ್ಪಾರಂಡ ಸುಮಾನ್ 2 ಗೋಲು ಹೊಡೆದರೆ, ಗಿಪ್ಸ್ ಮಂದಣ್ಣ 3 ಗೋಲು ಬಾರಿಸಿ ಹ್ಯಾಟ್ರಿಕ್ ಸಾಧನೆ ಮಾಡಿ ಮಿಂಚಿದರು. ನಂತರದ ಪಂದ್ಯ ದಲ್ಲಿ ಪಟ್ಟಚೇರುವಂಡ ತಂಡವು ಕಂಜೀ ತಂಡ ತಂಡವನ್ನು 2-1 ಗೋಲುಗಳಿಂದ ಮಣ ಸಿತು ಪಟ್ಟಚೇರುವಂಡ ಪರ ಗಗನ್, ಆಯುಶ್ ಗೋಲು ಹೊಡೆದರೆ ಕಂಜೀ ತಂಡ ಪರ ಪೂವಣ್ಣ ಗೋಲು ಬಾರಿಸಿ ಅಂತರವನ್ನು ತಗ್ಗಿಸಿಕೊಂಡರು. ಐದನೇ ಪಂದ್ಯಾಟದಲ್ಲಿ ಕೊಂಗೇಟಿರ ತಂಡವು ಮೇರಿಯಂಡ ತಂಡವನ್ನು 2-1 ಗೋಲು ಗಳಿಂದ ಸೋಲಿಸಿ ಮುಂದಿನ ಹಂತ ಪ್ರವೇಶಿಸಿತು.ಕೊಂಗೇಟಿರ ಪರ ಅನಿಲ್ ಉತ್ತಯ್ಯ 2 ಗೋಲು ಬಾರಿಸಿ ಮಿಂಚಿದರೆ ಮೇರಿಯಂಡ ನೀಕಿಲ್ ಬೋಪಣ್ಣ 1 ಗೋಲು ಬಾರಿಸಿ ಅಂತರವನ್ನು ತಗ್ಗಿಸಿಕೊಂಡರು. ನಂತರದ ಪಂದ್ಯದಲ್ಲಿ ಚೆರೀಯಪಂಡ ತಂಡ ಬಾರದೇ ಇದ್ದುದರಿಂದ ಬೊವ್ವೆರೀಯಂಡ ತಂಡವನ್ನು ವಾಕ್ ಓವರ್ ನೀಡಿ ವಿಜಯಿ ಎಂದು ಘೋಷಿಸಲಾಯಿತು.

Translate »