Tag: Napoklu

ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ಸಿಂಚನ
ಕೊಡಗು

ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ಸಿಂಚನ

February 7, 2019

ನಾಪೋಕ್ಲು: ವರ್ಷದ ಮೊದಲ ವರ್ಷಧಾರೆಗೆ ನಾಪೋಕ್ಲು ಪಟ್ಟಣ ತೊಯ್ದಿದ್ದು, ಗುಡುಗು ಸಹಿತ ನಾಪೋಕ್ಲು ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಸೊರಗಿದ್ದ ಕೊಡಗಿನಲ್ಲಿ ಆರೇಳು ತಿಂಗಳ ಬಿಸಿಲ ಝಳದ ಬಳಿಕ, ಇದೀಗ ತಂಪೆರೆದಿದ್ದು, ಜನರು ಹರ್ಷಚಿತ್ತರಾಗಿದ್ದಾರೆ. ನಾಪೋಕ್ಲು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮ ಗಳಲ್ಲಿ ವರುಣನ ಸಿಂಚನವಾಗಿದೆ. ಈ ಮಳೆಯಿಂದ ಕಾಫಿ ಬೆಳೆಗಾರರು ಕಳೆ ಗುಂದುವಂತಾಗಿದ್ದು, ಅಷ್ಟಿಷ್ಟು ಕಾಫಿ ಫಸಲು ದಿಢೀರ್ ಮಳೆಗೆ ಒದ್ದೆಯಾಗಿದೆ. ಕಳೆದ ಎರಡು ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿತ್ತಾದರೂ, ಮಳೆಯಾಗು ತ್ತದೆಂಬ ನಿರೀಕ್ಷೆ ಇರಲಿಲ್ಲ….

ನಾಪೋಕ್ಲುವಿನಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
ಕೊಡಗು

ನಾಪೋಕ್ಲುವಿನಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

October 15, 2018

ನಾಪೋಕ್ಲು: 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಪೋಕ್ಲುವಿನಲ್ಲಿ ಆಯೋಜಿಸಲು ಉದ್ದೇಶಿಸಿದ್ದು ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ನಾಪೋಕ್ಲು ಸರಕಾರಿ ಪ್ರೌಢಶಾಲೆಯಲ್ಲಿ ಡಿ.22-23ರಂದು ನಡೆಸಲು ಉದ್ಧೇಶಿಸ ಲಾಗಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ಎಲ್ಲರೊಂದಿಗೆ ಚರ್ಚಿಸಿ ಸರಳ ಕಾರ್ಯಕ್ರಮ ನಡೆಸು ವುದು ಒಳ್ಳೆಯದು ಎಂದರು. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಹೋರಾಟ ನಡೆಸಬೇಕಾದ ಅನಿವಾರ್ಯ…

ನೆಲಜಿ ಗ್ರಾಮದಲ್ಲಿ ಸುರಂಗ ಪತ್ತೆ
ಕೊಡಗು

ನೆಲಜಿ ಗ್ರಾಮದಲ್ಲಿ ಸುರಂಗ ಪತ್ತೆ

September 4, 2018

ನಾಪೋಕ್ಲು:  ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಜಿ ಗ್ರಾಮದ ಮಣವಟ್ಟಿರ ಅರುಣ ಪಳಂಗಪ್ಪ ಅವರ ಕಾಫಿ ತೋಟದಲ್ಲಿ ಭೂಮಿಯೊಳಗೆ ಸುರಂಗ ನಿರ್ಮಾಣವಾಗಿರುವುದು ಗೋಚರಿಸಿದೆ. ಅರುಣ ಅವರ ಕಾಫಿ ತೋಟದಲ್ಲಿ ದೊಡ್ಡ ಗುಂಡಿಯೊಂದು ಮಳೆಗಾಲದ ಅವಧಿಯಲ್ಲಿ ನಿರ್ಮಾಣವಾಗಿದ್ದು, ಹಲವು ದಿನಗಳಿಂದ ಕಾಫಿ ತೋಟದ ಒಳಗೆ ಯಾರೂ ಹೋಗದೆ ಗುಂಡಿ ಗೋಚ ರಿಸಿರಲಿಲ್ಲ. ಇಂದು ಕೆಲಸಕ್ಕೆ ತೆರಳಿದಾಗ ಇದು ಕಂಡು ಬಂದಿದೆ. ಸುಮಾರು 30 ಅಡಿ ಆಳದ ಗುಂಡಿಯಾ ಗಿದ್ದು ಬಳಿಕ ಸುರಂಗ ಗೋಚರಿಸುತ್ತಿದ್ದು, ಗದ್ದೆ ಯೆಡೆಗೆ ತೆರೆದುಕೊಂಡಿದೆ….

ವಿಷ ಪ್ರಾಶನದಿಂದ ಹಸು, ಕರು ಸಾವು
ಕೊಡಗು

ವಿಷ ಪ್ರಾಶನದಿಂದ ಹಸು, ಕರು ಸಾವು

August 11, 2018

ನಾಪೋಕ್ಲು:  ಬೇತು ಗ್ರಾಮದ ನಿವಾಸಿ ಚೋಕಿರ ಪ್ರಭು ಪೂವಪ್ಪ ಮತ್ತು ಗಣೇಶ್‍ರವರಿಗೆ ಸೇರಿದ 3 ಹಸು, ಕರುಗಳು ಇಂದು ಆಕಸ್ಮಿಕವಾಗಿ ನಗರಕ್ಕೆ ದಾರಿ ತಪ್ಪಿ ಬಂದು ನಗರದಲ್ಲಿ ವಿಷ ಪ್ರಾಶನದಿಂದ ಸತ್ತು ಬಿದ್ದಿರುವ ದೃಶ್ಯ ಜನರ ಮನ ಕಲುಕುವಂತಿತ್ತು. ಇಂದು ಬೆಳಗ್ಗೆ ಕೊಟ್ಟಿಗೆಯಿಂದ ತಪ್ಪಿಸಿ ಕೊಂಡ ಹಸು, ಕರುಗಳು ಸುಮಾರು ಅರ್ಧ ಕಿ.ಮೀ. ದೂರದ ನಾಪೋಕ್ಲು ನಗರಕ್ಕೆ ಬಂದಿದ್ದು, ಮದ್ಯಾಹ್ನದವರೆಗೂ ಗಾಬರಿ ಯಿಂದ ಅಲ್ಲಿ ಇಲ್ಲಿ ತಿರುಗಿಕೊಂಡಿದ್ದ ಹಸು ಕರುಗಳು ನಂತರ ನಗರದ ಬಾರ್ ಒಂದರ ಬಳಿಯಲ್ಲಿ…

ಹಾರಂಗಿ ನಾಲೆಯಲ್ಲಿ ವ್ಯಾನ್ ಮುಳುಗಿ ಸಾವನ್ನಪ್ಪಿದ್ದ ಒಂದೇ  ಕುಟುಂಬದ ನಾಲ್ವರ ಅಂತ್ಯಕ್ರಿಯೆ
ಕೊಡಗು

ಹಾರಂಗಿ ನಾಲೆಯಲ್ಲಿ ವ್ಯಾನ್ ಮುಳುಗಿ ಸಾವನ್ನಪ್ಪಿದ್ದ ಒಂದೇ  ಕುಟುಂಬದ ನಾಲ್ವರ ಅಂತ್ಯಕ್ರಿಯೆ

August 8, 2018

ನಾಪೋಕ್ಲು:  ಕುಶಾಲನಗರದ ಸಮೀಪ ಹಾರಂಗಿ ನಾಲೆಯಲ್ಲಿ ಮುಳುಗಿ ಮೃತ ಪಟ್ಟ ಇಲ್ಲಿನ ಇಂದಿರಾನಗರದ ನಿವಾಸಿ ಪಳನಿಸ್ವಾಮಿ ಮತ್ತು. ಕುಟುಂಬದ ನಾಲ್ವರ ಅಂತ್ಯಕ್ರಿಯೆಯು ನಾಪೋಕ್ಲು ಕಾವೇರಿ ನದಿ ತೀರದ ಹಿಂದು ರುದ್ರಭೂಮಿಯಲ್ಲಿ ಮಧ್ಯಾಹ್ನ ನೆರವೇರಿತು. ಈ ಸಂದರ್ಭದಲ್ಲಿ ನಾಪೋಕ್ಲು ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟು ಗಳನ್ನು ಮುಚ್ಚಿ ಮೃತರಿಗೆ ಸಂತಾಪ ಸೂಚಿಸಲಾಯಿತು. ಜನಪ್ರತಿನಿಧಿಗಳು ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸೋಮವಾರ ಬೆಳಿಗ್ಗೆ ನಾಪೋಕ್ಲು ವಿನಿಂದ ತಮ್ಮ ತಾಯಿಯ ಊರಾದ ಮುತ್ತಿನ ಮುಳ್ಳುಸೋಗೆ ಗ್ರಾಮಕ್ಕೆ ಪಳನೀಸ್ವಾಮಿ ತಮ್ಮ ಒಮ್ನಿ…

ಚಿರತೆ ಹೋಲುವ ಪ್ರಾಣಿ ಪತ್ತೆ
ಕೊಡಗು

ಚಿರತೆ ಹೋಲುವ ಪ್ರಾಣಿ ಪತ್ತೆ

July 8, 2018

ಮಡಿಕೇರಿ:  ನಾಪೋಕ್ಲುವಿನ ಚೆರಿಯಪರಂಬುವಿನ ಕಾಫಿತೋಟವೊಂದರಲ್ಲಿ ಚಿರತೆ ಮರಿಯನ್ನು ಹೋಲುವ ಪ್ರಾಣಿ ಪತ್ತೆಯಾಗಿದೆ. ಚೆರಿಯಪರಂಬುವಿನ ನಿವಾಸಿ ಹ್ಯಾರಿಸ್ ಎಂಬುವರ ತೋಟ ದಲ್ಲಿ ಪತ್ತೆಯಾದ ಎರಡು ಮರಿಗಳನ್ನು ಕಂಡು ಸ್ಥಳೀಯರು ಇವು ಚಿರತೆಯ ಮರಿ ಗಳೆಂದು ಭಾವಿಸಿದ್ದರಲ್ಲದೇ, ತೋಟದೊಳಗೆ ತಾಯಿ ಚಿರತೆ ಅವಿತುಕೊಂಡಿರುವ ಬಗ್ಗೆ ಆತಂಕಕ್ಕೆ ಒಳಗಾಗಿದ್ದರು. ಈ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯಾಧಿ ಕಾರಿಗಳು ತೋಟದಲ್ಲಿ ಪತ್ತೆ ಯಾದ ಮರಿಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಚಿರತೆಯನ್ನು ಹೋಲುವ ಎರಡು ಮರಿಗಳು ಪೆರ್ಪಣದ…

ಕಾರು-ಬಸ್ ಮುಖಾಮುಖಿ ಡಿಕ್ಕಿ: ಕೊಡಗಿನ ನಾಲ್ವರು ಗಂಭೀರ
ಕೊಡಗು

ಕಾರು-ಬಸ್ ಮುಖಾಮುಖಿ ಡಿಕ್ಕಿ: ಕೊಡಗಿನ ನಾಲ್ವರು ಗಂಭೀರ

July 7, 2018

ನಾಪೋಕ್ಲು: ಸಕಲೇಶಪುರ ಸಮೀಪ ಅಳಂದೂರು ಎಂಬಲ್ಲಿ ಕಾರು ಮತ್ತು ಬಸ್ಸು ಮುಖಾಮುಖಿ ಡಿಕ್ಕಿಯಾಗಿ ಕೊಡಗಿನ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಚೆಯ್ಯಂಡಾಣೆ ನರಿಯಂದಡ ಗ್ರಾಮದ ತೋಟಂಬೈಲು ಕುಮಾರ್ ಅವರ ಸಂಬಂಧಿಕರು ಚಿಕ್ಕಮಗಳೂರಿನಲ್ಲಿ ನೆಲೆಸಿದ್ದು ಇತ್ತೀಚೆಗೆ ಅಪಘಾತವೊಂದರಲ್ಲಿ ಅವಘಡಕ್ಕೀಡಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಅವರ ಯೋಗಕ್ಷೇಮ ವಿಚಾರಿಸಲು ಕುಮಾರ್ ತಮ್ಮ ಕಾರಿನಲ್ಲಿ ಪತ್ನಿ ,ತಂಗಿ ಹಾಗೂ ಪತ್ನಿಯ ಅಕ್ಕ ಅವರೊಂದಿಗೆ ತೆರಳುವ ಸಂದರ್ಭ ಈ ಘಟನೆ ನಡೆದಿದೆ. ಅಳಂದೂರು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಡೆಸಿದ…

ಕಾಡಾನೆ ದಾಳಿಗೆ ಎತ್ತು ಬಲಿ
ಕೊಡಗು

ಕಾಡಾನೆ ದಾಳಿಗೆ ಎತ್ತು ಬಲಿ

June 23, 2018

ನಾಪೋಕ್ಲು :  ಮನೆ ಸಮೀ ಪದ ಕೊಟ್ಟಿಗೆಯಲ್ಲ್ಲಿ ಕಟ್ಟಿಹಾಕಿದ್ದ ಎತ್ತನ್ನು ಆನೆ ತುಳಿದು ಕೊಂದು ಹಾಕಿ ರುವ ಘಟನೆ ಸಮೀಪದ ಚೇಲಾವರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಟ್ಟಚೆರುವಂಡ ಚಿಟ್ಟಿಯಪ್ಪ ತಮ್ಮ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಎತ್ತನ್ನು ರಾತ್ರಿ ಕಟ್ಟಿ ಹಾಕಿದ್ದರು. ರಾತ್ರಿ ಅಲ್ಲಿಗೆ ಆಗಮಿಸಿದ ಕಾಡಾನೆಗಳು ಎತ್ತನ್ನು ತುಳಿದು ಕೊಂದು ಹಾಕಿವೆ. ರಾತ್ರಿ ಮೂರು ಗಂಟೆಯ ವೇಳೆಗೆ ಒಂದು ಮರಿಯಾನೆ ಸೇರಿದಂತೆ ಎರಡು ಕಾಡಾನೆಗಳು ಹಸುವನ್ನು ಅನತಿದೂರದವರೆಗೆ ಎಳೆದುಕೊಂಡು ಹೋಗಿ ತುಳಿದು ಸಾಯಿಸಿವೆ. ಸುತ್ತಮುತ್ತ ಲಿನ ಕಾಫಿ…

ಒಂಟಿ ಸಲಗ ದಾಳಿ: ಮಹಿಳೆ ಕೈಮುರಿತ
ಕೊಡಗು

ಒಂಟಿ ಸಲಗ ದಾಳಿ: ಮಹಿಳೆ ಕೈಮುರಿತ

June 19, 2018

ನಾಪೋಕ್ಲು:  ಒಂಟಿ ಸಲಗದ ದಾಳಿಗೆ ಸಿಲುಕಿದ ಕಾರ್ಮಿಕ ಮಹಿಳೆ ಯೋರ್ವರ ಕೈ ಮುರಿದಿದ್ದು, ಅದೃಷ್ಟವ ಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಪೋಕ್ಲು ಸಮೀಪದ ಅಡಿಯರ ಕಾಲೋನಿಯ ಬೋಳ್ಕ ಎಂಬುವರ ಪತ್ನಿ ಚುಬ್ಬಿ ಗಾಯಗೊಂಡಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚುಬ್ಬಿ ಕಕ್ಕಬ್ಬೆ ಯವಕಪಾಡಿ ಗ್ರಾಮದ ಹೋಂ ಸ್ಟೇಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆ ಹಿಂದಿರುಗುವ ವೇಳೆ ಒಂಟಿಸಲಗ ದಾಳಿ ನಡೆಸಿದೆ. ಆನೆ ದಾಳಿಯಿಂದ ಗಾಬರಿ ಗೊಂಡ ಚುಬ್ಬಿ ಕಿರುಚಿಕೊಂಡು ಓಡಲೆ ತ್ನಿಸುವ ವೇಳೆ ಸೊಂಡಿಲನ್ನು ಬೀಸಿದ ಒಂಟಿ ಸಲಗ ಆಕೆಯ ಕೈಯನ್ನು…

ಗುಂಡು ಹೊಡೆದುಕೊಂಡು ಬೆಳೆಗಾರ ಆತ್ಮಹತ್ಯೆ
ಕೊಡಗು

ಗುಂಡು ಹೊಡೆದುಕೊಂಡು ಬೆಳೆಗಾರ ಆತ್ಮಹತ್ಯೆ

June 13, 2018

ಮಡಿಕೇರಿ:  ಸಾಲಬಾಧೆಯಿಂದ ಮನನೊಂದ ಕಾಫಿ ಬೆಳೆಗಾರ ರೋರ್ವರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಪೇರೂರು ಗ್ರಾಮದಲ್ಲಿ ನಡೆದಿದೆ. ನಾಪೋಕ್ಲು ಸಮೀಪದ ಪೇರೂರು ಗ್ರಾಮದ ನಿವಾಸಿ ಮಚ್ಚೂರ ಪವನ್ ಮಂದಣ್ಣ(67) ಎಂಬವರೆ ಆತ್ಮಹತ್ಯೆಗೆ ಶರಣಾದ ಬೆಳೆಗಾರರಾಗಿದ್ದಾರೆ. ಕೃಷಿಗಾಗಿ ಸಾಲ ಮಾಡಿದ್ದ ಮಚ್ಚೂರ ಪವನ್ ಮಂದಣ್ಣ ಸಾಲ ತೀರಿಸಲಾಗದೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ತಕ್ಷಣವೇ ನೆರೆಹೊರೆಯವರು ಮಂದಣ್ಣ ಅವರನ್ನು ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ…

1 2
Translate »