ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ಸಿಂಚನ
ಕೊಡಗು

ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ಸಿಂಚನ

February 7, 2019

ನಾಪೋಕ್ಲು: ವರ್ಷದ ಮೊದಲ ವರ್ಷಧಾರೆಗೆ ನಾಪೋಕ್ಲು ಪಟ್ಟಣ ತೊಯ್ದಿದ್ದು, ಗುಡುಗು ಸಹಿತ ನಾಪೋಕ್ಲು ಸುತ್ತಮುತ್ತ ಸಾಧಾರಣ ಮಳೆಯಾಗಿದೆ.

ಸೊರಗಿದ್ದ ಕೊಡಗಿನಲ್ಲಿ ಆರೇಳು ತಿಂಗಳ ಬಿಸಿಲ ಝಳದ ಬಳಿಕ, ಇದೀಗ ತಂಪೆರೆದಿದ್ದು, ಜನರು ಹರ್ಷಚಿತ್ತರಾಗಿದ್ದಾರೆ. ನಾಪೋಕ್ಲು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮ ಗಳಲ್ಲಿ ವರುಣನ ಸಿಂಚನವಾಗಿದೆ.

ಈ ಮಳೆಯಿಂದ ಕಾಫಿ ಬೆಳೆಗಾರರು ಕಳೆ ಗುಂದುವಂತಾಗಿದ್ದು, ಅಷ್ಟಿಷ್ಟು ಕಾಫಿ ಫಸಲು ದಿಢೀರ್ ಮಳೆಗೆ ಒದ್ದೆಯಾಗಿದೆ. ಕಳೆದ ಎರಡು ಮೂರು ದಿನಗಳಿಂದ ಮೋಡ ಕವಿದ ವಾತಾವರಣವಿತ್ತಾದರೂ, ಮಳೆಯಾಗು ತ್ತದೆಂಬ ನಿರೀಕ್ಷೆ ಇರಲಿಲ್ಲ. ಬುಧವಾರ ಅಪ ರಾಹ್ನ ಗುಡುಗು ಸಹಿತ ಸುರಿದ ಮಳೆಗೆ ಬೆಳೆಗಾರರ ಮುಖದಲ್ಲಿ ಸಂಭ್ರಮದ ಬದಲು, ಆತಂಕ ಕಾಣಿಸಿಕೊಂಡಿತ್ತು.

ಸಾಮಾನ್ಯ ವಾಗಿ ಮಾರ್ಚ್ ಅಥವಾ ಏಪ್ರಿಲ್ ತಿಂಗ ಳಲ್ಲಿ ಜಿಲ್ಲೆಯಲ್ಲಿ ಮಳೆಯಾಗುತ್ತಿತ್ತು. ಆ ಮೂಲಕ ಕಾಫಿ ಗಿಡಗಳಲ್ಲಿ ಮುಂದಿನ ವರ್ಷದ ಭವಿಷ್ಯ ಅರಳುತ್ತಿತ್ತು. ಆದರೆ, ಬೆಳೆ ಗಾರರು ಇನ್ನೂ ಕೊನೇ ಹಂತದ ಕಾಫಿ ಕೊಯ್ಲು ಪ್ರಕ್ರಿಯೆಯಲ್ಲಿರುವಾಗಲೇ ವರ್ಷಧಾರೆಯಾಗಿ ರುವುದು ಆತಂಕಕ್ಕೂ ಕಾರಣವಾಗಿದೆ.

Translate »