ಸಾಲಬಾಧೆ: ಕಾಫಿ ಬೆಳೆಗಾರ ಆತ್ಮಹತ್ಯೆ
ಕೊಡಗು

ಸಾಲಬಾಧೆ: ಕಾಫಿ ಬೆಳೆಗಾರ ಆತ್ಮಹತ್ಯೆ

February 7, 2019

ಗೋಣಿಕೊಪ್ಪ: ಸಾಲಬಾಧೆಯಿಂದ ಬೇಸತ್ತ ಕಾಫಿ ಬೆಳೆಗಾರರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ವೀರಾಜಪೇಟೆ ತಾಲೂಕಿನ ಕುಟ್ಟ ಸಮೀಪದ ಮಂಚಳ್ಳಿಯ ತೈಲ ಗ್ರಾಮದ ಅಜ್ಜಿಕುಟ್ಟಿರ ವಿನೋಜ್ ಎಂಬುವರೇ ತಮ್ಮ ಬಂದೂಕಿನಿಂದ ಗುಂಡು ಹಾರಿಸಿ ಕೊಂಡು ಸಾವಿಗೆ ಶರಣಾಗಿರುವ ಕಾಫಿ ಬೆಳೆ ಗಾರರಾಗಿದ್ದಾರೆ. ಆತ್ಮಹತ್ಯೆಗೆ ಮುನ್ನ ವಿನೋಜ್ (36) ಅವರು ಮೀನು ಹಿಡಿಯಲು ಹೋಗುವುದಾಗಿ ಮನೆ ಯಲ್ಲಿ ತಿಳಿಸಿ ತೆರಳಿದ್ದಾರೆ. ಆದರೆ ಮನೆ ಸಮೀಪವಿರುವ ಕಾಫಿ ತೋಟದೊಳಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿನೋಜ್ ಅವರು ಸಾಲಬಾಧೆಯಿಂದ ಕಂಗಾಲಾಗಿ ಆತ್ಮಹತ್ಯೆ ಮಾಡಿ ಕೊಂಡಿರಬಹುದೆಂದು ಶಂಕಿಸಲಾಗಿದೆ. ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. ಕುಟ್ಟ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »