ನೆಲಜಿ ಗ್ರಾಮದಲ್ಲಿ ಸುರಂಗ ಪತ್ತೆ
ಕೊಡಗು

ನೆಲಜಿ ಗ್ರಾಮದಲ್ಲಿ ಸುರಂಗ ಪತ್ತೆ

September 4, 2018

ನಾಪೋಕ್ಲು:  ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಜಿ ಗ್ರಾಮದ ಮಣವಟ್ಟಿರ ಅರುಣ ಪಳಂಗಪ್ಪ ಅವರ ಕಾಫಿ ತೋಟದಲ್ಲಿ ಭೂಮಿಯೊಳಗೆ ಸುರಂಗ ನಿರ್ಮಾಣವಾಗಿರುವುದು ಗೋಚರಿಸಿದೆ.

ಅರುಣ ಅವರ ಕಾಫಿ ತೋಟದಲ್ಲಿ ದೊಡ್ಡ ಗುಂಡಿಯೊಂದು ಮಳೆಗಾಲದ ಅವಧಿಯಲ್ಲಿ ನಿರ್ಮಾಣವಾಗಿದ್ದು, ಹಲವು ದಿನಗಳಿಂದ ಕಾಫಿ ತೋಟದ ಒಳಗೆ ಯಾರೂ ಹೋಗದೆ ಗುಂಡಿ ಗೋಚ ರಿಸಿರಲಿಲ್ಲ. ಇಂದು ಕೆಲಸಕ್ಕೆ ತೆರಳಿದಾಗ ಇದು ಕಂಡು ಬಂದಿದೆ. ಸುಮಾರು 30 ಅಡಿ ಆಳದ ಗುಂಡಿಯಾ ಗಿದ್ದು ಬಳಿಕ ಸುರಂಗ ಗೋಚರಿಸುತ್ತಿದ್ದು, ಗದ್ದೆ ಯೆಡೆಗೆ ತೆರೆದುಕೊಂಡಿದೆ.
ಹಿಂದಿನ ಕಾಲದಲ್ಲಿ ಕೊಪ್ಪರಿಗೆ ಹೋಗುವುದು ಎನ್ನುವ ಮಾತು ಪ್ರಚಲಿತ ದಲ್ಲಿತ್ತು. ಈ ಸುರಂಗ ಇದಾಗಿರಬಹದು ಎಂಬ ಮಾತು ಸಾರ್ವಜನಿಕ ರಿಂದ ಕೇಳಿಬರುತ್ತಿದೆ. ಸ್ಥಳಕ್ಕೆ ಮಡಿಕೇರಿ ತಹಶೀಲ್ದಾರ್ ಕುಸುಮ ಕಂದಾಯ ಪರಿವೀಕ್ಷಕ ರಾಮಯ್ಯ, ಗ್ರಾಮಲೆಕ್ಕಿಗರಾದ ದಾನೇಶ್ವರಿ, ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭೂಗರ್ಭ ಶಾಸ್ತ್ರಜ್ಞರನ್ನು ಸ್ಥಳಕ್ಕೆ ಕರೆಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವುದಾಗಿ ಕಂದಾಯ ಅಧಿಕಾರಿ ರಾಮಯ್ಯ ತಿಳಿಸಿದ್ದಾರೆ.

Translate »