ವಿಷ ಪ್ರಾಶನದಿಂದ ಹಸು, ಕರು ಸಾವು
ಕೊಡಗು

ವಿಷ ಪ್ರಾಶನದಿಂದ ಹಸು, ಕರು ಸಾವು

August 11, 2018

ನಾಪೋಕ್ಲು:  ಬೇತು ಗ್ರಾಮದ ನಿವಾಸಿ ಚೋಕಿರ ಪ್ರಭು ಪೂವಪ್ಪ ಮತ್ತು ಗಣೇಶ್‍ರವರಿಗೆ ಸೇರಿದ 3 ಹಸು, ಕರುಗಳು ಇಂದು ಆಕಸ್ಮಿಕವಾಗಿ ನಗರಕ್ಕೆ ದಾರಿ ತಪ್ಪಿ ಬಂದು ನಗರದಲ್ಲಿ ವಿಷ ಪ್ರಾಶನದಿಂದ ಸತ್ತು ಬಿದ್ದಿರುವ ದೃಶ್ಯ ಜನರ ಮನ ಕಲುಕುವಂತಿತ್ತು.

ಇಂದು ಬೆಳಗ್ಗೆ ಕೊಟ್ಟಿಗೆಯಿಂದ ತಪ್ಪಿಸಿ ಕೊಂಡ ಹಸು, ಕರುಗಳು ಸುಮಾರು ಅರ್ಧ ಕಿ.ಮೀ. ದೂರದ ನಾಪೋಕ್ಲು ನಗರಕ್ಕೆ ಬಂದಿದ್ದು, ಮದ್ಯಾಹ್ನದವರೆಗೂ ಗಾಬರಿ ಯಿಂದ ಅಲ್ಲಿ ಇಲ್ಲಿ ತಿರುಗಿಕೊಂಡಿದ್ದ ಹಸು ಕರುಗಳು ನಂತರ ನಗರದ ಬಾರ್ ಒಂದರ ಬಳಿಯಲ್ಲಿ ಹಸುವೊಂದು ಬಿದ್ದು ಹೊರಳಾಡುತ್ತಿದ್ದು, ಕೆಲವೇ ಹೊತ್ತಿನಲ್ಲಿ ಹಸು ಪ್ರಾಣ ಬಿಟ್ಟಿದೆ. ಇದರ ಬಾಯಲ್ಲಿ ನೊರೆ ಕಾಣಿಸಿಕೊಂಡಿದ್ದು, ನಂತರದಲ್ಲಿ ಇದರ ಕರುವೊಂದು ಪಕ್ಕಕ್ಕೆ ದಾವಿಸಿ ತನ್ನ ತಾಯಿಯ ದೇಹವನ್ನು ನೆಕ್ಕಿ ಏಳುವಂತೆ ಪ್ರೇರೇಪಿಸಿದೆ ಆದರು ತಾಯಿ ಮೇಲೆಳಲ್ಲಿಲ್ಲ ನಂತರದ ಕೆಲವೇ ಕ್ಷಣದಲ್ಲಿ ಈ ಕರು ಸಹ ತಾಯಿಯ ಪಕ್ಕದಲ್ಲೇ ಬಿದ್ದು ಪ್ರಾಣ ಕಳೆದುಕೊಂಡಿತ್ತು.

ಅದರಂತೆ ಇನ್ನೊಂದು ಕರು ಸಹ ಅನತಿ ದೂರದಲ್ಲೆ ಸಾವನಪ್ಪಿದ್ದು, ಇದೊಂದು ಅವಮಾನವೀಯ ಕೃತ್ಯ ವಾಗಿದೆ ಎಂದು ನಾಗರೀಕರು ಆರೋಪಿ ಸಿದ್ದಾರೆ. ಇಂತಹ ಅಮಾನುಷ್ಯ ಕೃತ್ಯ ಎಸ ಗಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿರುವ ನಾಗ ರೀಕರು ಕೂಡಲೇ ಸರಕಾರ ಇದರ ಮಾಲೀಕರಿಗೆ ಪರಿಹಾರವನ್ನು ನೀಡ ಬೇಕೆಂದು ಒತ್ತಾಯಿಸಿದ್ದಾರೆ.

Translate »