ಚಿರತೆ ಹೋಲುವ ಪ್ರಾಣಿ ಪತ್ತೆ
ಕೊಡಗು

ಚಿರತೆ ಹೋಲುವ ಪ್ರಾಣಿ ಪತ್ತೆ

July 8, 2018

ಮಡಿಕೇರಿ:  ನಾಪೋಕ್ಲುವಿನ ಚೆರಿಯಪರಂಬುವಿನ ಕಾಫಿತೋಟವೊಂದರಲ್ಲಿ ಚಿರತೆ ಮರಿಯನ್ನು ಹೋಲುವ ಪ್ರಾಣಿ ಪತ್ತೆಯಾಗಿದೆ.

ಚೆರಿಯಪರಂಬುವಿನ ನಿವಾಸಿ ಹ್ಯಾರಿಸ್ ಎಂಬುವರ ತೋಟ ದಲ್ಲಿ ಪತ್ತೆಯಾದ ಎರಡು ಮರಿಗಳನ್ನು ಕಂಡು ಸ್ಥಳೀಯರು ಇವು ಚಿರತೆಯ ಮರಿ ಗಳೆಂದು ಭಾವಿಸಿದ್ದರಲ್ಲದೇ, ತೋಟದೊಳಗೆ ತಾಯಿ ಚಿರತೆ ಅವಿತುಕೊಂಡಿರುವ ಬಗ್ಗೆ ಆತಂಕಕ್ಕೆ ಒಳಗಾಗಿದ್ದರು.

ಈ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯಾಧಿ ಕಾರಿಗಳು ತೋಟದಲ್ಲಿ ಪತ್ತೆ ಯಾದ ಮರಿಗಳನ್ನು ಪರಿಶೀಲನೆ ನಡೆಸಿದರು.

ಬಳಿಕ ಚಿರತೆಯನ್ನು ಹೋಲುವ ಎರಡು ಮರಿಗಳು ಪೆರ್ಪಣದ ಮರಿಗಳೆಂದು ಅರಣ್ಯಾಧಿಕಾರಿ ರಂಜನ್ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಇದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟರು.

Translate »