ತಿತಿಮತಿ ಬಳಿ 2 ಪ್ರತ್ಯೇಕ ಬೈಕ್ ಅಪಘಾತ ಬೈಕ್ ಸವಾರ ಸಾವು, ಚೆನ್ನೈನ ಇಬ್ಬರು ಪ್ರವಾಸಿಗರ ಕಾಲು ಮುರಿತ
ಕೊಡಗು

ತಿತಿಮತಿ ಬಳಿ 2 ಪ್ರತ್ಯೇಕ ಬೈಕ್ ಅಪಘಾತ ಬೈಕ್ ಸವಾರ ಸಾವು, ಚೆನ್ನೈನ ಇಬ್ಬರು ಪ್ರವಾಸಿಗರ ಕಾಲು ಮುರಿತ

July 8, 2018

ಗೋಣಿಕೊಪ್ಪಲು:  ಕೆಎಸ್ ಆರ್‍ಟಿಸಿ ಬಸ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ವಾರದ ರಜೆ ಕಳೆಯಲು ಚೆನ್ನೈನಿಂದ ಕೊಡಗಿಗೆ ಬೈಕ್‍ನಲ್ಲಿ ಆಗ ಮಿಸುತ್ತಿದ್ದ ಇಬ್ಬರು ಯುವಕರು ತೀವ ್ರವಾಗಿ ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ತಿತಿಮತಿ ಬಳಿ ನಡೆದಿದೆ. ರಾತ್ರಿ 8 ಗಂಟೆ ವೇಳೆಯಲ್ಲಿ ಟೆಂಪೋಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಸಾವನ್ನಪ್ಪಿದ್ದಾನೆ.

ಚೆನ್ನೈ ಮೂಲದ ಲೋಕೇಶ್ (25) ಹಾಗೂ ಅಶ್ವಿನ್(24) ಬೆಳಿಗ್ಗೆ ನಡೆದ ಅಪ ಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಇಬ್ಬರು ಯುವಕರ ಕಾಲು ಮುರಿದಿದೆ. ಚೆನ್ನೈನಿಂದ ಬೆಂಗಳೂರು ಮಾರ್ಗವಾಗಿ ಮೈಸೂರು ತಲುಪಿದ 5 ಯುವಕ ತಂಡ ಮೈಸೂರಿನಿಂದ ಇಬ್ಬರು ಯುವಕರು ಬುಲೆಟ್ ಬೈಕ್‍ನಲ್ಲಿ ಇನ್ನು ಮೂವರು ಯುವ ಕರು ಕಾರಿನಲ್ಲಿ ಶನಿವಾರ ಬೆಳಿಗ್ಗೆ ಮೈಸೂರಿ ನಿಂದ ಪ್ರಯಾಣ ಬೆಳೆಸಿದ್ದರು.

ಬೈಕ್‍ನಲ್ಲಿದ್ದ ಲೋಕೇಶ್ ಹಾಗೂ ಆಶ್ವಿನ್ ಹೆಲ್ಮೆಟ್ ಧರಿಸಿ ಮುಂದೆ ಸಾಗಿ ದ್ದರು. ಬೈಕ್‍ನ ಹಿಂದೆ ಮೂರು ಯುವ ಕರ ಕಾರು ಬೈಕ್‍ಅನ್ನು ಹಿಂಬಾಲಿಸುತ್ತಿತ್ತು. ತಿತಿಮತಿ ಆನೆ ಚೌಕೂರು ಗೇಟ್‍ನ ಬಳಿ ಬೈಕ್ ವೇಗವಾಗಿ ತೆರಳಿದ್ದರಿಂದ ಕಾರು ಸ್ವಲ್ಪ ನಿಧಾನಗತಿಯಲ್ಲಿ ತೆರಳುತ್ತಿತ್ತು. ತಿತಿಮತಿ ಭದ್ರಗೊಳದ ಸಮೀಪ ಬೈಕ್ ತೆರಳುತ್ತಿದ್ದಂತೆಯೇ ಎದುರಿಗೆ ಬರುತ್ತಿದ್ದ ಸರ್ಕಾರಿ ಬಸ್‍ಗೆ ಡಿಕ್ಕಿಯಾಗಿದೆ. ಯುವ ಕರಿಬ್ಬರು ಹೆಲ್ಮೆಟ್ ಧರಿಸಿದ್ದರಿಂದ ಇವರ ಪ್ರಾಣ ಉಳಿದಿದೆ.

ಸ್ಥಳೀಯರು ತಿತಿಮತಿ ವಿವೇಕಾನಂದ ಆಸ್ಪತ್ರೆಯ ಆ್ಯಂಬುಲೆನ್ಸ್ ಸಹಾಯ ಪಡೆದು ಗೋಣಿಕೊಪ್ಪ ಆಸ್ಪತ್ರೆಗೆ ಯುವಕರನ್ನು ಸಾಗಿಸಿದರು.ನಂತರ ಗೋಣಿಕೊಪ್ಪ ಆಸ್ಪತ್ರೆಯ ವೈದ್ಯಾರಾದ ಡಾ.ಗ್ರೀಷ್ಮಾ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂ ರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಮಾಹಿತಿ ತಿಳಿದ ಸಮಾಜ ಸೇವಕರಾದ ಸ್ನೇಕ್ ಶರತ್ ಕಾಂತ್‍ರವರು ಆಸ್ಪತ್ರೆಗೆ ತೆರಳಿ ವಾಹನ ಚಾಲಕರ ಸಂಘದ ಆ್ಯಂಬು ಲೆನ್ಸ್‍ನಲ್ಲಿ ಯುವಕರನ್ನು ಕಳುಹಿಸಿ ಕೊಡುವಲ್ಲಿ ಸಹಕರಿಸಿದರು.

ಅಪಘಾತದಲ್ಲಿ ನೊಂದ ಯುವಕ ರೊಂದಿಗಿದ್ದ ಮೂವರು ಯುವಕರಿಗೆ ಕನ್ನಡ ಭಾಷೆ ಬಾರದೆ ಮೈಸೂರಿನ ಆಸ್ಪ ತ್ರೆಯ ಪರಿಚಯವಿಲ್ಲದೆ ಗೊಂದಲದಲ್ಲಿದ್ದ ಯುವಕರಿಗೆ ಮಾದ್ಯಮ ಸ್ನೇಹಿತರೊಬ್ಬರು ಸೂಕ್ತ ಸಲಹೆಗಳನ್ನು ನೀಡುವ ಮೂಲಕ ಧೈರ್ಯ ತುಂಬಿ ಆಸ್ಪತ್ರೆಯ ಸಿಬ್ಬಂದಿಗಳ ಸಹಾಯದಿಂದ ಗಂಭೀರ ಗಾಯ ಗೊಂಡಿದ್ದ ಯುವಕರಿಬ್ಬರನ್ನು ಆ್ಯಂಬು ಲೆನ್ಸ್‍ಗೆ ಹತ್ತಿಸಿ ಮಾರ್ಗದರ್ಶನ ನೀಡುವ ಮೂಲಕ ಮೈಸೂರಿನ ಅಪೋಲೋ ಆಸ್ಪತ್ರೆಗೆ ಕಳುಹಿಸಿಕೊಡುವಲ್ಲಿ ಮಾನ ವೀಯತೆ ಮೆರೆದರು.

ರಾತ್ರಿ 8 ಗಂಟೆ ಸುಮಾರಿನಲ್ಲಿ ತುಂತುರ ಮಳೆಯ ನಡುವೆ ಬೈಕ್‍ನಲ್ಲಿ ಗೋಣಿಕೊಪ್ಪ ಕಡೆಯಿಂದ ಹುಣಸೂರು ಕಡೆಗೆ ಬೈಕ್‍ನಲ್ಲಿ ತೆರಳುತ್ತಿದ್ದ ಯುವಕ ತಿತಿ ಮತಿಯ ಮಜ್ಜಿಗೆಹಳ್ಳ ಕಾಲೋನಿ ಬಳಿ ನಿಯಂತ್ರಣ ತಪ್ಪಿ ನಿಂತಿದ್ದ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Translate »