ವಿರಾಜಪೇಟೆ: ಸಾರ್ವಜನಿಕರಿಗೆ ಸುಲಭವಾಗಿ ಹಣ ದೊರಕಿಸಿಕೊಡುವ ಸಲುವಾಗಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಎಟಿಎಂ ಸೇವೆಯನ್ನು ಲೋಕಾರ್ಪಣೆ ಗೊಳಿಸಿದೆ ಎಂದು ದೇವಣಗೇರಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಹೇಳಿದರು.
ವಿರಾಜ ಪೇಟೆ ಪಟ್ಟಣದಲ್ಲಿರುವ ಸಹಕಾರ ಬ್ಯಾಂಕ್‍ನ ಎಟಿಎಂನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳ ಒಟ್ಟು 10 ಎಟಿಎಂಗಳಿದ್ದು ಅದರೊಂದಿಗೆ ಕೆಡಿಸಿಸಿ ಬ್ಯಾಂಕ್‍ನ ಎಟಿಎಂ ಕೂಡ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ ಎಂದರು. ಈ ಸಂಧರ್ಭದಲ್ಲಿ ಡಿಸಿಸಿ ಬ್ಯಾಂಕ್‍ನ ನಿರ್ದೇಶಕರಾದ ರಘನಾಣಯ್ಯ, ಕೋಲತಂಡ ಸುಬ್ರಮಣ , ಕರ್ನಂಡ ಸೋಮಯ್ಯ, ಪಪಂ ಅಧ್ಯಕ್ಷ ಇ.ಸಿ ಜೀವನ್, ಹಿರಿಯ ಗ್ರಾಹಕರಾದ ಬಿ.ಬಿ.ನಾಣಯ್ಯ, ಮಣ ನಂಜಪ್ಪ, ಮಾಳೇಟಿರ ಮಣ ಸೇರಿದಂತೆ ಹಲವಾರು ಗ್ರಾಹಕರು ಉಪಸ್ಥಿತರಿದ್ದರು.