ನಗರಸಭೆ ಕಚೇರಿಗೆ ಲೋಕಾಯುಕ್ತ ದಾಳಿ: ದಾಖಲೆ ಪರಿಶೀಲನೆ
ಚಾಮರಾಜನಗರ

ನಗರಸಭೆ ಕಚೇರಿಗೆ ಲೋಕಾಯುಕ್ತ ದಾಳಿ: ದಾಖಲೆ ಪರಿಶೀಲನೆ

July 8, 2018

ಚಾಮರಾಜನಗರ:  ದೂರೊಂದಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಎಸ್‍ಪಿ ಜಿ.ರಶ್ಮಿ ಅವರ ನೇತೃತ್ವದ ತಂಡ ಶನಿವಾರ ನಗರದ ನಗರಸಭೆ ಕಾರ್ಯಾಲ ಯಕ್ಕೆ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು.

ಕುಡಿಯುವ ನೀರಿನ ಯೋಜನೆ, ಒಳಚರಂಡಿ ಕಾಮಗಾರಿ ಬಗ್ಗೆ ಸಾರ್ವಜನಿಕರಿಂದ ಲೋಕಾಯುಕ್ತರಿಗೆ ದೂರು ಸಲ್ಲಿಕೆ ಆಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಯಿಂದ ಮಾಹಿತಿ ನೀಡುವಂತೆ ನಗರಸಭೆಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ, ಅಧಿಕಾರಿಗಳು ಇದಕ್ಕೆ ಉತ್ತರಿಸಿರಲಿಲ್ಲ. ಹಾಗಾಗಿ, ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿ ಕೆಲವು ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎನ್ನಲಾಗಿದೆ.

ನಗರಸಭೆ ಪೌರಾಯುಕ್ತ ಎಂ.ರಾಜಣ್ಣ ಹಾಗೂ ಇತರೆ ನೌಕರರು ಈ ವೇಳೆ ಹಾಜರಿದ್ದು, ಕಡತಗಳ ಪರಿಶೀಲನೆಗೆ ಸಹಕರಿಸಿದರು. ಈ ವೇಳೆ ಸುದಿಗಾರರೊಂದಿಗೆ ಮಾತ ನಾಡಿದ ಲೋಕಾಯುಕ್ತ ಎಸ್‍ಪಿ ಜೆ.ರಶ್ಮಿ ಅವರು, ದೂರೊಂ ದಕ್ಕೆ ಸಂಬಂಧಿ ಸಿದಂತೆ ದಾಖಲಾತಿ ನೀಡುವಂತೆ ಹಲವು ಬಾರಿ ನಗರಸಭೆಗೆ ನೋಟಿಸ್ ನೀಡಿದರೂ, ಸಹ ನಗರ ಸಭೆಯಿಂದ ಯಾವುದೇ ಉತ್ತರ ಬಂದಿರಲಿಲ್ಲ. ಹಾಗಾಗಿ, ದಾಳಿ ನಡೆಸಿ ದಾಖಲಾತಿ ಪರಿಶೀಲಿಸಲಾಗಿದೆ. ಸೋಮ ವಾರವೂ ಸಹ ಭೇಟಿ ನೀಡಿ ದಾಖಲೆಗಳನ್ನು ಪರಿ ಶೀಲಿಸಲಾಗುವುದು ಎಂದು ತಿಳಿಸಿದರು.

ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಪೌರಾಯುಕ್ತ ಎಂ.ರಾಜಣ್ಣ ಅವರು, 2013ರ ಕೆಲವು ದಾಖಲೆಗಳನ್ನು ಲೋಕಾಯುಕ್ತರ ತಂಡ ಪರಿಶೀಲಿಸಿದೆ. ಸೋಮವಾರವೂ ಲೋಕಾಯುಕ್ತ ತಂಡ ದಾಖಲೆ ಪರಿ ಶೀಲಿಸಲಿದ್ದು, ಅವರಿಗೆ ಸಹಕರಿಸಲಾಗುವುದು ಎಂದರು. ದಾಳಿಯಲ್ಲಿ ಲೋಕಾಯುಕ್ತ ಡಿವೈಎಸ್‍ಪಿ ವಿ.ಕೃಷ್ಣಯ್ಯ, ಇನ್‍ಸ್ಪೆಕ್ಟರ್‍ಗಳಾದ ಬಿ.ಜೆ.ಕುಮಾರ್, ರೂಪಶ್ರೀ, ಸಿಬ್ಬಂದಿಗಳಾದ ನಾಗೇಂದ್ರ, ಪುರುಷೋತ್ತಮ, ಮಹಾ ಲಿಂಗಸ್ವಾಮಿ ಇತರರು ಹಾಜರಿದ್ದರು.

Translate »