ಸಾಲ ಮನ್ನಾ ಕಾಫಿ ಬೆಳೆಗಾರರಿಗೆ ಕಹಿ!
ಕೊಡಗು

ಸಾಲ ಮನ್ನಾ ಕಾಫಿ ಬೆಳೆಗಾರರಿಗೆ ಕಹಿ!

July 8, 2018

ಕೊಡಗಿನ ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಕೇವಲ 168 ಬೆಳೆಗಾರರಿಗೆ ಮಾತ್ರ ಸಾಲ ಮನ್ನಾ ಸೌಲಭ್ಯ

  • ಸಹಕಾರ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿರುವ 35 ಸಾವಿರ ಬೆಳೆಗಾರರು ಸೌಲಭ್ಯ ವಂಚಿತರು
  • ಅವಿಭಕ್ತ ಕುಟುಂಬದ ರೈತರಿಗೆ ಸೌಲಭ್ಯ ಗಗನ ಕುಸುಮ

ಮಡಿಕೇರಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ ನಲ್ಲಿ ರಾಜ್ಯದ ರೈತರಿಗೆ 34 ಸಾವಿರ ಕೋಟಿ ರೂ. ಸುಸ್ತಿ ಸಾಲ ಮನ್ನಾ ಮಾಡು ವುದಾಗಿ ಘೋಷಿಸಿದ್ದಾರೆ. ಈ ಸಾಲ ಮನ್ನಾ ಕಾಫಿ ಬೆಳೆಗಾರರಿಗೂ ಅನ್ವಯಿಸು ತ್ತದೆಯಾದರೂ, ಸಹಕಾರಿ ಬ್ಯಾಂಕ್‍ಗಳಲ್ಲಿ ಸಾಲ ಪಡೆದ ಕಾಫಿ ಬೆಳೆಗಾರರಿಗೆ ಇದರ ಪ್ರಯೋಜನ ಶೂನ್ಯವಾಗಿದೆ.

ಮುಖ್ಯಮಂತ್ರಿಗಳು ಘೋಷಿಸಿದ ರೈತರ ಸಾಲ ಮನ್ನಾ ಯೋಜನೆ ಕೊಡಗಿನ ಕಾಫಿ ಬೆಳೆಗಾರರಿಗೆ ತೀವ್ರ ನಿರಾಸೆ ತಂದಿದೆ. ಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ ಕೇವಲ 168 ಮಂದಿ ಮಾತ್ರ ಸಾಲ ಮನ್ನಾ ಪ್ರಯೋಜನವನ್ನು ಪಡೆಯಲು ಅರ್ಹ ರಾಗಿದ್ದಾರೆ ಎಂಬುದೇ ಕಾಫಿ ಬೆಳೆಗಾರರ ನಿರಾಸೆಗೆ ಕಾರಣವಾಗಿದೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಾಗಿದ್ದ ವೇಳೆ ಸಹಕಾರಿ ಬ್ಯಾಂಕ್‍ಗಳಲ್ಲಿ ರೈತರು ಪಡೆದಿದ್ದ 50 ಸಾವಿರ ರೂ. ವರೆಗಿನ ಸಾಲ ಮನ್ನಾ ಮಾಡಿದ್ದರು. ಆ ಸಂದರ್ಭದಲ್ಲಿ ಕೊಡಗಿನ 35 ಸಾವಿರ ಮಂದಿ ಕಾಫಿ ಬೆಳೆಗಾರರು ಅದರ ಪ್ರಯೋಜನ ಪಡೆದಿದ್ದರು. ಇವರೆಲ್ಲರೂ ಕುಮಾರಸ್ವಾಮಿ ಘೋಷಿಸಿರುವ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ.

ಈ ಸಂಬಂಧ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ.ಮಂಜುನಾಥ್ ಅವರು, ರಾಜ್ಯ ಸರ್ಕಾರ ಘೋಷಿಸಿರುವ ಸಾಲ ಮನ್ನಾ ಯೋಜನೆಯಿಂದ ಕೇವಲ 168 ಮಂದಿ ಮಾತ್ರ ಪ್ರಯೋಜನ ಪಡೆಯಲು ಸಾಧ್ಯ ಎಂದರು. ಆದರೆ ರಾಷ್ಟ್ರೀಕೃತ ಬ್ಯಾಂಕು ಗಳಲ್ಲಿ ಸಾಲ ಪಡೆದಿರುವ ಕಾಫಿ ಬೆಳೆಗಾ ರರು ಈ ಸಾಲ ಮನ್ನಾ ಸೌಲಭ್ಯಕ್ಕೆ ಅರ್ಹ ರಾಗಿರುತ್ತಾರೆ. ಆದರೂ ಅಲ್ಲಿಯೂ ಕೂಡ ನಿರ್ಬಂಧಗಳಿವೆ. ನಿರ್ಬಂಧದ ಅನ್ವಯ 1-4-2009ರಿಂದ 31-12-2017 ಅವಧಿವರೆಗಿನ ಬಾಕಿ ಇರುವ ಅವಧಿ ಮೀರಿದ ಬೆಳೆಗಾರರಿಗೆ ಮಾತ್ರ ಈ ಸೌಲಭ್ಯ ಅನ್ವಯ ವಾಗುತ್ತದೆ ಎಂದು ಅವರು ಹೇಳಿದರು.

ಜಿಲ್ಲಾ ನಬಾರ್ಡ್ ಅಧಿಕಾರಿ ಎಂ.ಸಿ. ನಾಣಯ್ಯ ಅವರ ಪ್ರಕಾರ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ ರೈತರ ಬೆಳೆ ಸಾಲದ ಬಾಕಿ 37.74 ಕೋಟಿ ಇದೆ. ರಾಷ್ಟ್ರೀಯ ಬ್ಯಾಂಕ್ ಗಳಿಂದ ರೈತರ ಸಾಲದ ಅಂಕಿ-ಅಂಶ ಗಳು ಇನ್ನಷ್ಟೇ ಸಂಗ್ರಹಿಸಬೇಕಾಗಿದೆ.
ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂ ಟದ ಕೊಡಗು ವಕ್ತಾರ ಕೆ.ಕೆ.ವಿಶ್ವನಾಥ್ ಪ್ರಕಾರ ಕೊಡಗು ಸೇರಿದಂತೆ ಕಾಫಿ ಬೆಳೆ ಯುವ ಜಿಲ್ಲೆಗಳಲ್ಲಿ ಇದುವರೆಗೆ ಅವಧಿ ಮೀರಿದ ಬೆಳೆ ಸಾಲ ಒಟ್ಟು 3817.87 ಕೋಟಿ ಬಾಕಿ ಇದೆ. ಆದರೆ ಅದರ ಪೈಕಿ ಸಿದ್ದರಾಮಯ್ಯನವರು ಘೋಷಿಸಿದ್ದ ಸಾಲ ಮನ್ನಾ ಸೌಲಭ್ಯವನ್ನು ಪಡೆದವ ರೆಷ್ಟು ಎಂಬ ಮಾಹಿತಿ ದೊರೆತ ನಂತರ ವಷ್ಟೇ ಈಗಿನ 2 ಲಕ್ಷದವರೆಗಿನ ಸಾಲ ಮನ್ನಾ ಪ್ರಯೋಜನ ಎಷ್ಟು ಬೆಳೆಗಾರರಿಗೆ ದೊರೆಯಲಿದೆ ಎಂಬುದು ಸ್ಪಷ್ಟವಾಗಲಿದೆ.

ಕುಮಾರಸ್ವಾಮಿಯವರು ಘೋಷಿಸಿ ರುವ ಸಾಲ ಮನ್ನಾದಲ್ಲಿ ಪ್ರತೀ ರೈತ ಕುಟುಂಬಕ್ಕೆ 2 ಲಕ್ಷ ರೂ. ಎಂದು ಮಿತಿ ಗೊಳಿಸಲಾಗಿದೆ. ಕುಟುಂಬವೆಂದರೆ ರೈತ, ಆತನ ಪತ್ನಿ ಹಾಗೂ ಅವಲಂಬಿತ ಮಕ್ಕಳು ಸೇರಲಿದ್ದು, ಎಲ್ಲರ ಹೆಸರಿನಲ್ಲೂ ಸಾಲವಿದ್ದರೂ, ಈ ಸೌಲಭ್ಯ ಒಬ್ಬರಿಗೆ ಮಾತ್ರ ಅನ್ವಯವಾಗುವುದರಿಂದ ಅವಿಭಕ್ತ ಕುಟುಂಬದ ಕಾಫಿ ಬೆಳೆಗಾರರು ಬಹು ತೇಕ ಈ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇದೆ.

Translate »