ಹಾರಂಗಿ ನಾಲೆಯಲ್ಲಿ ವ್ಯಾನ್ ಮುಳುಗಿ ಸಾವನ್ನಪ್ಪಿದ್ದ ಒಂದೇ  ಕುಟುಂಬದ ನಾಲ್ವರ ಅಂತ್ಯಕ್ರಿಯೆ
ಕೊಡಗು

ಹಾರಂಗಿ ನಾಲೆಯಲ್ಲಿ ವ್ಯಾನ್ ಮುಳುಗಿ ಸಾವನ್ನಪ್ಪಿದ್ದ ಒಂದೇ  ಕುಟುಂಬದ ನಾಲ್ವರ ಅಂತ್ಯಕ್ರಿಯೆ

August 8, 2018

ನಾಪೋಕ್ಲು:  ಕುಶಾಲನಗರದ ಸಮೀಪ ಹಾರಂಗಿ ನಾಲೆಯಲ್ಲಿ ಮುಳುಗಿ ಮೃತ ಪಟ್ಟ ಇಲ್ಲಿನ ಇಂದಿರಾನಗರದ ನಿವಾಸಿ ಪಳನಿಸ್ವಾಮಿ ಮತ್ತು. ಕುಟುಂಬದ ನಾಲ್ವರ ಅಂತ್ಯಕ್ರಿಯೆಯು ನಾಪೋಕ್ಲು ಕಾವೇರಿ ನದಿ ತೀರದ ಹಿಂದು ರುದ್ರಭೂಮಿಯಲ್ಲಿ ಮಧ್ಯಾಹ್ನ ನೆರವೇರಿತು.

ಈ ಸಂದರ್ಭದಲ್ಲಿ ನಾಪೋಕ್ಲು ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟು ಗಳನ್ನು ಮುಚ್ಚಿ ಮೃತರಿಗೆ ಸಂತಾಪ ಸೂಚಿಸಲಾಯಿತು. ಜನಪ್ರತಿನಿಧಿಗಳು ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸೋಮವಾರ ಬೆಳಿಗ್ಗೆ ನಾಪೋಕ್ಲು ವಿನಿಂದ ತಮ್ಮ ತಾಯಿಯ ಊರಾದ ಮುತ್ತಿನ ಮುಳ್ಳುಸೋಗೆ ಗ್ರಾಮಕ್ಕೆ ಪಳನೀಸ್ವಾಮಿ ತಮ್ಮ ಒಮ್ನಿ ವ್ಯಾನಿನಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ತೆರಳಿದ್ದರು. ಮಧ್ಯಾಹ್ನ ಪಿರಿಯಾಪಟ್ಟಣ ತಾಲೂಕಿನ ದೊಡ್ಡಕಮರಹಳ್ಳಿ ಗ್ರಾಮದ ಹಾರಂಗಿ ನಾಲೆಯ ಸಮೀಪ ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿ ಬಿದ್ದು ದುರಂತ ಸಾವನ್ನಪ್ಪಿದ ಘಟನೆ ಪಟ್ಟಣದ ಜನತೆಗೆ ಬರಸಿಡಿಲಿನಂತೆ ಬಂದೆರಗಿತ್ತು.

Translate »