ಹಾರಂಗಿ ಜಲಾಶಯದಲ್ಲಿ ಕೆಸರುಮಯ
ಕೊಡಗು

ಹಾರಂಗಿ ಜಲಾಶಯದಲ್ಲಿ ಕೆಸರುಮಯ

January 10, 2019

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿರುವ ಹಾರಂಗಿ ಜಲಾಶಯದ ನೀರಿನ ಮಟ್ಟ ಕ್ರಮೇಣ ಇಳಿಮುಖವಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 8.5 ಟಿಎಂಸಿ ಇದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟ 0.3 ಟಿಎಂಸಿಗೆ ಇಳಿಮುಖ ವಾಗಿದೆ. ಪ್ರಸ್ತುತ ಜಲಾಶಯಕ್ಕೆ ಒಳಹರಿವು ಇಂದು ಬೆಳಗಿನ ದಾಖಲೆ ಪ್ರಕಾರ 103 ಕ್ಯೂಸೆಕ್, ಹೊರಹರಿವು 15ಕ್ಯೂಸೆಕ್.

ಜಲಾಶಯವು ಅತೀ ಹೆಚ್ಚು ಕೆಸರಿನಿಂದ ಕೂಡಿದ್ದು, ಹೆಚ್ಚಿನ ನೀರು ಸಂಗ್ರಹಣಾ ಸಾಮಥ್ರ್ಯವನ್ನು ಕಳೆದುಕೊಂಡಿದೆ. ಜಲಾ ಶಯದ ನೀರಿನ ಮಟ್ಟ ಗಣನೀಯವಾಗಿ ಇಳಿಮುಖವಾಗುತ್ತಿರುವುದರಿಂದ ಕುಶಾಲ ನಗರ, ಕೂಡಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಬೇಸಿಗೆ ಕಾಲ ದಲ್ಲಿ ತೀವ್ರವಾದ ನೀರಿನ ಸಮಸ್ಯೆ ಎದು ರಾಗುವ ಭಯ ಕಾಡುತ್ತಿದೆ.

ಈ ಸಮಸ್ಯೆಯನ್ನು ಪರಿಹರಿಸಲು, ಕರ್ನಾಟಕ ಇಂಜಿನಿಯರಿಂಗ್ ರೀಸರ್ಚ್ ಸ್ಟೇಷನ್ (ಕೆಇಆರ್‍ಎಸ್) ಅಧಿಕಾರಿಗಳ ತಂಡ ಶೀಘ್ರವಾಗಿ ಜಲಾಶಯದ ಹೂಳು ತೆಗೆಯುವ ಅಗತ್ಯವಿದೆ. ಈ ಸಂಬಂಧ ಕೆಇಆರ್‍ಎಸ್ ತಂಡ ಜಲಾಶಯದಲ್ಲಿ ಶೇಖರಗೊಂಡಿರುವ ಕೆಸರನ್ನು ಸರ್ವೆ ಮಾಡಬೇಕಾಗಿದೆ. ಕೆಇಆರ್‍ಎಸ್ ಅನ್ನು 1944ರಲ್ಲಿ ಮಂಡ್ಯ ಜಿಲ್ಲೆಯ ಕೆಆರ್‍ಎಸ್. ಅಣೆಕಟ್ಟು ಪ್ರದೇಶದಲ್ಲಿ ಸ್ಥಾಪಿಸಲಾಯಿತು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇತ್ತೀಚಿನ ಕೆಲವು ತಿಂಗಳಲ್ಲಿ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಾರಂಗಿ ಜಲಾಶಯದಲ್ಲಿ ಕೆಸರು ತುಂಬಿ ರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು. ಈ ವೇಳೆ ಮುಖ್ಯ ಮಂತ್ರಿಯವರು ಕೆಇಆರ್‍ಎಸ್ ತಂಡಕ್ಕೆ ಸರ್ವೆ ಕಾರ್ಯ ಕೈಗೊಳ್ಳುವಂತೆ ಆದೇಶಿಸಿದರು.

ಸರ್ವೆ ತಂಡ ತನ್ನ ಕೆಲಸವನ್ನು ಸೋಮ ವಾರಪೇಟೆ ತಾಲೂಕಿನ ಅತ್ತಿಹೊಳೆ ಯಿಂದ ಆರಂಭಿಸಿ, ಪ್ರಸ್ತುತ ಈ ಸರ್ವೆ ಕಾರ್ಯ ಹಾರಂಗಿಯ ಕೋಟೆಬೆಟ್ಟ ಉಪನದಿ ದಡದಲ್ಲಿ ನಡೆಯುತ್ತಿದೆ. ಕೆಸರು ಶೇಖರಣೆ ಅಲ್ಲದೆ, ಸರ್ವೆ ತಂಡ ನದಿ ಯಲ್ಲಿರುವ ಬಂಡೆಗಳ ಬಗ್ಗೆ ಅಧ್ಯಯನ ಮಾಡಿ ಅದಕ್ಕೆ ಸೂಕ್ತ ಪರಿಹಾರ ಕೈಗೊ ಳ್ಳಲು ಸಲಹೆ ನೀಡಿತು. ಕಳೆದ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಕೊಡಗಿನಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದ ಸಂದರ್ಭದಲ್ಲಿ ಸಾವಿರಾರು ಟನ್ನುಗಳಷ್ಟು ಮರಳು ಕಲ್ಲುಗಳೊಂದಿಗೆ, ಮರಗಳು ಮತ್ತು ಕಾಫಿ ಎಸ್ಟೇಟ್ಸ್ ಹತ್ತಿಹೊಳೆ ಮತ್ತು ಮಾದಾಪುರ ವಲಯದಿಂದ ಕೊಚ್ಚಿ ಹೋಗಿತ್ತು.

ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದ ಹಾಗೂ ಭೂಕುಸಿತದಿಂದ ನದಿರೂಪವೇ ಬದಲಾಗಿದೆ. ಅಲ್ಲದೆ, ಸಾವಿರಾರು ಟನ್ನುಗಳಷ್ಟು ಕೆಸರು ಮತ್ತು ಮಣ್ಣು ನದಿಯ ಹಿನ್ನೀರಿನಲ್ಲಿ ಶೇಖರಣೆ ಯಾಗಿದೆ. ಸಾಮಾನ್ಯವಾಗಿ, ನದಿಯ ಹಿನ್ನೀರಿನ ಪ್ರಮಾಣ ಡಿಸೆಂಬರ್ ಮತ್ತು ಜನವರಿಯವರೆಗೆ ಸಂಪೂರ್ಣವಾಗಿರು ತ್ತದೆ. ಆದರೆ ಈ ವರ್ಷ, ಸಾವಿರಾರು ಟನ್ನುಗಳಷ್ಟು ಮಣ್ಣು ಶೇಖರಣೆಯಾ ಗಿರುವುದರಿಂದ ಪ್ರಸ್ತುತ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ.

ಮಡಿಕೇರಿ ಶಾಸಕ ಅಪ್ಪಚ್ಚುರಂಜನ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಹಾರಂಗಿ ಜಲಾಶಯ ಮತ್ತು ಹಿನ್ನೀರಿ ನಲ್ಲಿ 2.5 ಟಿಎಂಸಿಯಷ್ಟು ಕೆಸರು ಇದ್ದು, ಅದನ್ನು ಮೇ ತಿಂಗಳೊಳಗೆ ಆದಷ್ಟು ಶೀಘ್ರ ವಾಗಿ ತೆರವು ಮಾಡಬೇಕಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದ ನೀರನ್ನು ಶೇಖರಿಸ ಬಹುದು. ಇಲ್ಲದಿದ್ದಲ್ಲಿ ಈ ವರ್ಷದ ಪ್ರವಾಹ ಸಂದರ್ಭದಲ್ಲಿ ಆಸ್ತಿಪಾಸ್ತಿ ಕೊಚ್ಚಿ ಹೋಗಿ ಅಪಾಯ ಸಂಭವಿಸÀಬಹುದು’’ ಎಂದು ಅವರು ಹೇಳಿದರು.

ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಮಾತನಾಡಿ, ಕುಶಾ ಲನಗರ, ಕೂಡಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ಪ್ರವಾಹದ ಭೀತಿ ಯಲ್ಲಿ ಬದುಕುವಂತಾಗಿದೆ. “ರಾಜ್ಯ ಸರ್ಕಾರ ಆದಷ್ಟು ಶೀಘ್ರವಾಗಿ ಕೆಸರನ್ನು ತೆಗೆಯ ಬೇಕು. ಇಲ್ಲದಿದ್ದಲ್ಲಿ ಕೊಡಗು ಬಂದ್ ಮಾಡು ವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ, ಹಾರಂಗಿ ಜಲಾಶಯದ ಹೆರೂರು ಹಿನ್ನೀರಿನಲ್ಲಿ ಕೆಸರಿನಿಂದ ಸಾವಿ ರಾರು ಮೀನುಗಳು ಸಾವನ್ನಪ್ಪಿವೆ. ಸಾವನ್ನ ಪ್ಪಿದ ಮೀನುಗಳು ಸುಮಾರು 4 ರಿಂದ 5 ಕೆಜಿ ಇದ್ದವು. ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಮೀನುಗಳು ಸಾವನ್ನಪ್ಪಿದ್ದು, ಕೆಲವು ಜೀವಂತ ಮೀನುಗಳು ನದಿಯಲ್ಲಿ ರುವ ಸಣ್ಣ ಸಣ್ಣ ನೀರಿನ ಗುಂಡಿಗಳಲ್ಲಿ ಸಾವು ಬದುಕಿನೊಡನೆ ಸೆಣಸಾಡುತ್ತಿವೆ ಎಂದು ಅವರು ಹೇಳಿದರು.

Translate »