ಬೆಂಗಳೂರಲ್ಲಿ ನಾಳೆ ಸಿಎನ್‍ಸಿ ಸತ್ಯಾಗ್ರಹ
ಕೊಡಗು

ಬೆಂಗಳೂರಲ್ಲಿ ನಾಳೆ ಸಿಎನ್‍ಸಿ ಸತ್ಯಾಗ್ರಹ

August 8, 2018

ಮಡಿಕೇರಿ:  ಸ್ವಾಯತ್ತ ಕೊಡವ ಲ್ಯಾಂಡ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವಿಶ್ವ ಆದಿಮಸಂಜಾತ ಜನಾಂಗಗಳ ಹಕ್ಕುಗಳ ದಿನವಾದ ಆ.9ರಂದು ಬೆಂಗಳೂರು ಟೌನ್ ಹಾಲ್ ಮುಂಭಾಗದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡವರ ಪ್ರಧಾನ ಭೂ- ರಾಜಕೀಯ ಲ್ಯಾಂಡ್ ಸ್ವಾಯ ತ್ತತೆ ಅನ್ವೇಷಣೆ (ಕೊಡವ ಕ್ವೆಸ್ಟ್ ಫಾರ್ ಅಟೋನಮಿ) ಕೇಂದ್ರಾಡಳಿತ ಪ್ರದೇಶ ಹಕ್ಕೊತ್ತಾಯವು ಸೇರಿದಂತೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342 ರ ವಿಧಿಯಂತೆ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಿ ರಾಜ್ಯಾಂಗ ಖಾತರಿ ನೀಡಬೇಕು ಮತ್ತು ಅತೀ ಸೂಕ್ಷ್ಮಾತಿ ಸೂಕ್ಷ್ಮ ಜನಾಂಗೀಯ ಅಲ್ಪ ಸಂಖ್ಯಾತ ಸಾಂಸ್ಕøತಿಕ ಕೊಡವ ಬುಡಕಟ್ಟು ಕುಲವನ್ನು ಯುನೆಸ್ಕೊದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಮುಂದಿರಿಸಿ ಸತ್ಯಾಗ್ರಹ ನಡೆಯಲಿದೆ ಎಂದರು.

ಕೊಡವ ಬುಡಕಟ್ಟು ಕುಲಕ್ಕೆ ಸಂವಿಧಾನದ 340-342ನೇ ವಿಧಿಯಂತೆ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಿ ರಾಜ್ಯಾಂಗ ಖಾತರಿ ನೀಡುವುದು, ಸಂವಿಧಾನದ 6 ನೇ ಶೆಡ್ಯೂಲ್ ಪ್ರಕಾರ ಸ್ವಾಯತ್ತತೆ (ಅಟೋನಮಿ)ಕಲ್ಪಿಸಿ ಸಂವಿಧಾನದ 2 ಮತ್ತು 3ನೇ ವಿಧಿ ಪ್ರಕಾರ ಕೇಂದ್ರಾಡಳಿತ ಪ್ರದೇಶವಾಗಿ ಪರಿಗಣಿಸುವಂತೆ ಒತ್ತಾಯಿಸಲಾಗುವುದೆಂದರು.

Translate »