ಮೈಕೊಡವಿ ಎದ್ದ ಸಂಚಾರಿ ಠಾಣೆ ಪೊಲೀಸರು: ಅಡ್ಡಾದಿಡ್ಡಿ ಬೈಕ್ ನಿಲುಗಡೆಗೆ ಬ್ರೇಕ್, ಫುಟ್‍ಪಾತ್‍ಗಳ ತೆರವು
ಚಾಮರಾಜನಗರ

ಮೈಕೊಡವಿ ಎದ್ದ ಸಂಚಾರಿ ಠಾಣೆ ಪೊಲೀಸರು: ಅಡ್ಡಾದಿಡ್ಡಿ ಬೈಕ್ ನಿಲುಗಡೆಗೆ ಬ್ರೇಕ್, ಫುಟ್‍ಪಾತ್‍ಗಳ ತೆರವು

August 8, 2018

ಚಾಮರಾಜನಗರ:  ಜಿಲ್ಲಾ ಕೇಂದ್ರ ವಾದ ಚಾಮರಾಜನಗರದಲ್ಲಿ ವಾಹನ ಮಾಲೀಕರೇ, ನಿಮ್ಮ ಬೈಕ್-ಮೊಪೆಡನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ನಿಲ್ಲಿಸಬೇಡಿ, ನಿಲ್ಲಿಸಿದರೆ ನಿಮ್ಮ ವಾಹನ ಪೊಲೀಸರ ವಶವಾಗಲಿದೆ. ಅಂಗಡಿ ಮಾಲೀಕರೇ, ಫುಟ್‍ಪಾತ್ ಮೇಲೆ ಯಾವುದೇ ವಸ್ತುಗಳನ್ನು ಇಡಬೇಡಿ. ಇಟ್ಟರೆ ನಿಮ್ಮ ಪದಾರ್ಥಕ್ಕೆ ದಂಡ ತೆರಬೇಕಾಗುತ್ತದೆ. ತಳ್ಳುವ ಗಾಡಿ ವ್ಯಾಪಾರಿಗಳೇ ಎಲ್ಲೆಂದಲ್ಲಿ ನೀವೂ ಸಹ ನಿಲ್ಲುವಂತಿಲ್ಲ… ಜೋಕೆ….ಜೋಕೆ….

ಚಾಮರಾಜನಗರದಲ್ಲಿ ಕಳೆದ ಒಂದು ವಾರದಿಂದ ಸಂಚಾರ ಠಾಣೆ ಪೊಲೀ ಸರು ಮೈಕೊಡವಿ ಎದ್ದಿದ್ದಾರೆ. ನಗರದ ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಜೋಡಿ ರಸ್ತೆ, ರಥದ ಬೀದಿ, ತ್ಯಾಗರಾಜ ರಸ್ತೆ, ಡೀವಿಯೇಷನ್ ರಸ್ತೆ, ಸಂತೇಮರಹಳ್ಳಿ ವೃತ್ತ, ನಂಜನಗೂಡು ವೃತ್ತ, ಸಂಪಿಗೆ ರಸ್ತೆ, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದ ರಸ್ತೆ ಸೇರಿದಂತೆ ಇನ್ನಿತರೆ ರಸ್ತೆಗಳಲ್ಲಿ ಅಡ್ಡಾದಿಡ್ಡಿ ನಿಲ್ಲಿಸುವ ಬೈಕ್, ಮೊಪೆಡ್‍ಗಳನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಾರೆ. ಟೆಂಪೋ ಸಹಿತ ಆಗಮಿಸುವ ಪೊಲೀಸರು, ಅಲ್ಲಲ್ಲಿ ಅಡ್ಡಾದಿಡ್ಡಿ ನಿಂತಿರುವ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ನಾಲ್ಕೈದು ಸಿಬ್ಬಂದಿ ವಾಹನಗಳನ್ನು ಎತ್ತಿಕೊಂಡು ಟೆಂಪೋಗೆ ಹಾಕಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

ಹಾಗೆಯೇ ಅಂಗಡಿ ಮಾಲೀಕರು ಅಂಗಡಿ ಮುಂಭಾಗದ ಫುಟ್‍ಪಾತ್‍ನ್ನು ಒತ್ತುವರಿ ಮಾಡಿಕೊಂಡು ಅದರ ಮೇಲೆ ಪದಾರ್ಥ ಗಳನ್ನು ಇಡುತ್ತಿದ್ದರು. ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ಫ್ಯಾನ್, ಸೈಕಲ್, ಗ್ರೈಂಡರ್, ಬಟ್ಟೆ ಇನ್ನಿತರ ಪದಾರ್ಥಗಳನ್ನು ಫುಟ್‍ಪಾತ್‍ನಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದರು. ಇದರಿಂದಾಗಿ ಪಾದಚಾರಿಗಳು ಫುಟ್‍ಪಾತ್ ಮೇಲೆ ಓಡಾಡಲು ಆಗದೇ ರಸ್ತೆಯಲ್ಲಿಯೇ ಸಂಚರಿಸುತ್ತಿದ್ದರು. ಇದನ್ನು ಅರಿತ ಸಂಚಾರ ಠಾಣೆ ಪೊಲೀಸರು, ಅಂಗಡಿ ಮಾಲೀಕರಿಗೆ ತಿಳಿ ಹೇಳಿ ಫುಟ್‍ಪಾತ್‍ನಲ್ಲಿ ಯಾವುದೇ ರೀತಿಯ ಪದಾರ್ಥಗಳನ್ನು ಇಡದಂತೆ ಸೂಚಿಸಿ ದ್ದಾರೆ. ಇದನ್ನು ಅಂಗಡಿ ಮಾಲೀಕರು ಪಾಲಿಸುತ್ತಿದ್ದಾರೆ. ಹೀಗಾಗಿ ಅಂಗಡಿ ಬೀದಿ ವಿಶಾಲವಾಗಿ ಕಾಣುತ್ತಿದೆ. ಸೂಚನೆಯನ್ನು ಪಾಲಿಸದೇ ಫುಟ್‍ಪಾತ್ ಮೇಲೆ ಇಡುವ ಪದಾರ್ಥಗಳನ್ನು ಪೊಲೀಸರು ಮುಲಾ ಜಿಲ್ಲದೆ ವಶಪಡಿಸಿಕೊಳ್ಳುತ್ತಿದ್ದಾರೆ.

ನಗರಸಭೆ ಮುಂಭಾಗದ ವೃತ್ತ, ಮಹಾವೀರ ವೃತ್ತ, ನೃಪತುಂಗ ವೃತ್ತ, ರಥದ ಬೀದಿ, ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಸೇರಿದಂತೆ ಅಲ್ಲಲ್ಲಿ ತಳ್ಳುವಗಾಡಿ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಹಬ್ಬಗಳ ಹಿಂದಿನ ದಿನ, ಹಬ್ಬದ ದಿನ ಹಾಗೂ ವಿಶೇಷ ದಿನಗಳೆಂದು ತಳ್ಳುವಗಾಡಿಗಳನ್ನು ರಸ್ತೆಯ ಎರಡು ಇಕ್ಕೆಲಗಳಲ್ಲಿ ನಿಲ್ಲಿಸಿ ಕೊಂಡು ವ್ಯಾಪಾರ ನಡೆಸುತ್ತಿದ್ದರು. ಇದ ರಿಂದ ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು. ಇದನ್ನು ಪ್ರಶ್ನಿಸಿದ ಪಟ್ಟಣ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಮೇಲೆ ತರಕಾರಿ ಮಾರುತ್ತಿದ್ದ ವ್ಯಾಪಾರಿಯೊಬ್ಬ ಕಳೆದ ಮೂರು, ನಾಲ್ಕು ದಿನದ ಹಿಂದೆ ಹಲ್ಲೆ ನಡೆಸಿದ ಘಟ ನೆಯೂ ನಡೆದಿತ್ತು. ಪರಿಸ್ಥಿತಿ ಕೈ ಮೀರು ತ್ತಿರುವುದನ್ನು ಅರಿತ ಸಂಚಾರ ಠಾಣೆ ಪೊಲೀಸರು, ಕೊನೆಗೂ ಕಾರ್ಯಾಚರ ಣೆಗೆ ಇಳಿಯಲು ನಿರ್ಧರಿಸಿದರು. ಇದರ ಫಲ ವಾಗಿ ಅಡ್ಡಾದಿಡ್ಡಿ ಪಾರ್ಕಿಂಗ್‍ಗೆ ಬ್ರೇಕ್ ಬಿದ್ದಿದೆ. ಫುಟ್ ಪಾತ್ ಒತ್ತುವರಿ ತಪ್ಪಿದ್ದು, ಪಾದಚಾರಿಗಳು ಸಂಚರಿಸುವಂತಾಗಿದೆ.

Translate »