ಬಂಡೀಪುರ ಮುಖ್ಯ ರಸ್ತೆಯಲ್ಲಿ ಕಳೆ ಗಿಡಗಳ ತೆರವು
ಚಾಮರಾಜನಗರ

ಬಂಡೀಪುರ ಮುಖ್ಯ ರಸ್ತೆಯಲ್ಲಿ ಕಳೆ ಗಿಡಗಳ ತೆರವು

August 8, 2018

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾ ನದ ರಸ್ತೆ ಬದಿಗಳಲ್ಲಿ ಬೆಳೆದು ನಿಂತಿರುವ ಕಳೆಗಳನ್ನು ಸಿಬ್ಬಂದಿಗಳ ನೆರವಿನೊಂದಿಗೆ ತೆರವುಗೊಳಿಸಲಾಗುತ್ತಿದೆ.

ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ಉತ್ತಮ ಮಳೆ ಬಿದ್ದ ಪರಿಣಾಮವಾಗಿ ಎಲ್ಲೆಡೆಯೂ ಹಸಿರು ಹುಲ್ಲುಗರಿಕೆ ಚಿಗುರಿ ಮರಗಿಡಗಳು ಹಸಿರಿನಿಂದ ನಳನಳಿಸುತ್ತಿವೆ. ಆದರೆ ಇದರೊಂದಿಗೆ ಲಾಂಟಾನ ಹಾಗೂ ಕಳೆಯ ಗಿಡಗಳು ಬೆಳೆದಿದ್ದು, ಹುಲ್ಲು ಗರಿಕೆಗಳು ಹೆಚ್ಚಾಗಿ ಬೆಳೆಯದಂತೆ ವ್ಯಾಪಿಸುವ ಜತೆಗೆ ರಸ್ತೆಯು ಕಾಣದಂತೆ ಆವರಿಸುತ್ತಿದೆ. ಇದನ್ನು ಅರಿತ ಅರಣ್ಯ ಇಲಾಖೆ ಸಿಬ್ಬಂದಿಗಳು ಕಳೆಗಿಡ ಗಳ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ.

ಕಳೆಗಿಡಗಳು ಹೆಚ್ಚಾಗಿ ಆವರಿಸುವುದ ರಿಂದ ಆ ಕಳೆಗಿಡದ ಕೆಳಭಾಗದಲ್ಲಿ ಹುಲ್ಲು ಗರಿಕೆ ಹೆಚ್ಚಿಗೆ ಬೆಳೆಯುವುದಿಲ್ಲ ಹಾಗೂ ಕಳೆಗಿಡಗಳು ಹೆಚ್ಚಾಗಿ ಹಬ್ಬುವುದರಿಂದ ರಸ್ತೆ ದಾಟುವ ವನ್ಯಜೀವಿಗಳು ವೇಗವಾಗಿ ಸಾಗುವ ವಾಹನಗಳಿಗೆ ಸಿಲುಕಿ ಅಪಘಾತಗಳುಂಟಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮೇಲುಕಾಮನಹಳ್ಳಿ ಗೇಟ್ ಬಳಿಯಿಂದ ಕೆಕ್ಕನಹಳ್ಳ ಚೆಕ್ ಪೋಸ್ಟ್ ಮುಖ್ಯ ರಸ್ತೆಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ 30 ಮೀಟರ್ ಅಂತರದಲ್ಲಿ ಬೆಳೆದಿರುವ ಕಳೆಗಿಡಗಳನ್ನು ತೆರವು ಗೊಳಿಸಲಾಗುತ್ತಿದೆ ಎಂದು ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದ್ದಾರೆ.

Translate »