ಗುಂಡ್ಲುಪೇಟೆ: ಪಟ್ಟಣದಲ್ಲಿರುವ ಶ್ರೀ ಮದ್ದಾನೇಶ್ವರ ಮಹಾಮನೆಯ ಯೋಗಕೇಂದ್ರದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಯೋಗ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸನ್ಮಾನದ ಹಿನ್ನೆಲೆಯಲ್ಲಿ ಮುಂಜಾನೆ ಯೋಗ ಮತ್ತು ಪ್ರಾರ್ಥನೆಯೊಂದಿಗೆ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು. ಸಮೂಹ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಕೆ.ಸಿ.ರಾಜಪ್ಪ, ಬಸವಣ್ಣ ಮತ್ತು ಶ್ವೇತಾದ್ರಿಯವರನ್ನು ಸನ್ಮಾನಿಸುವುದರೊಂದಿಗೆ ಶಿಬಿರಾರ್ಥಿಗಳು ಗುರುಪೂರ್ಣಿಮೆಯನ್ನು ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಾದ ದೀಪಾಶ್ರೀನಿವಾಸ್, ಜಿ.ಪಿ.ಗಿರೀಶ್, ಪಂಕಜಾ, ವನಜಾ, ಮಹದೇವಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.