Tag: Guru Purnima

ಮದ್ದಾನೇಶ್ವರ ಯೋಗ ಕೇಂದ್ರದಲ್ಲಿ ಯೋಗ ಶಿಕ್ಷಕರಿಗೆ ಸನ್ಮಾನ
ಚಾಮರಾಜನಗರ

ಮದ್ದಾನೇಶ್ವರ ಯೋಗ ಕೇಂದ್ರದಲ್ಲಿ ಯೋಗ ಶಿಕ್ಷಕರಿಗೆ ಸನ್ಮಾನ

August 8, 2018

ಗುಂಡ್ಲುಪೇಟೆ:  ಪಟ್ಟಣದಲ್ಲಿರುವ ಶ್ರೀ ಮದ್ದಾನೇಶ್ವರ ಮಹಾಮನೆಯ ಯೋಗಕೇಂದ್ರದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಯೋಗ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸನ್ಮಾನದ ಹಿನ್ನೆಲೆಯಲ್ಲಿ ಮುಂಜಾನೆ ಯೋಗ ಮತ್ತು ಪ್ರಾರ್ಥನೆಯೊಂದಿಗೆ ಗುರುವಂದನಾ ಕಾರ್ಯಕ್ರಮವನ್ನು ನಡೆಸಲಾಯಿತು. ಸಮೂಹ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಕೆ.ಸಿ.ರಾಜಪ್ಪ, ಬಸವಣ್ಣ ಮತ್ತು ಶ್ವೇತಾದ್ರಿಯವರನ್ನು ಸನ್ಮಾನಿಸುವುದರೊಂದಿಗೆ ಶಿಬಿರಾರ್ಥಿಗಳು ಗುರುಪೂರ್ಣಿಮೆಯನ್ನು ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಾದ ದೀಪಾಶ್ರೀನಿವಾಸ್, ಜಿ.ಪಿ.ಗಿರೀಶ್, ಪಂಕಜಾ, ವನಜಾ, ಮಹದೇವಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

ದೇಶದಲ್ಲಿ ಗುರುವಿಗೆ ಮಹತ್ತರ ಸ್ಥಾನ
ಕೊಡಗು

ದೇಶದಲ್ಲಿ ಗುರುವಿಗೆ ಮಹತ್ತರ ಸ್ಥಾನ

July 30, 2018

ಸುಂಟಿಕೊಪ್ಪ:  ದೇಶದಲ್ಲಿ ಗುರುವಿಗೆ ಮಹತ್ತರ ಸ್ಥಾನವಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ತ್ಯಾಗ ಮನೋಭಾವನೆಯಿಂದ ಸಮಾಜ ಕಟ್ಟುವ ಕೆಲಸ ವನ್ನು ನಿರ್ವಹಿಸುತ್ತಿದ್ದು, ಯಾವುದೇ ಪ್ರತಿಫಲಾಪೇಕ್ಷೆ ನಿರೀಕ್ಷಿಸದೆ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ರಾಷ್ಟ್ರೀಯ ಸೇವಕ ಸಂಘದ ಜಿಲ್ಲಾ ಸಂಚಾಲಕ ಬೌದ್ದಿಕ್ ಅವಿನಾಶ್ ಹೇಳಿದರು. ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಗುರು ಪೂಜೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದ ಗುರುಕುಲದಲ್ಲಿ ಗುರುಗಳು ತ್ಯಾಗ ಮನೋಭಾವ ದಿಂದ ಶಿಕ್ಷಣವನ್ನು ಶಿಷ್ಯರಿಗೆ ಧಾರೆಯೆರೆಯುತ್ತಿದ್ದರು. ಶಿಷ್ಯರು ಅಷ್ಟೇ ಗೌರವವನ್ನು…

ಗಂಗೋತ್ರಿ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ
ಮೈಸೂರು

ಗಂಗೋತ್ರಿ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ

July 29, 2018

ಮೈಸೂರು: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗಿನ ತಂಪಾದ ವಾತಾವರಣದಲ್ಲಿ ಭಕ್ತಿಭಾವದ ಗುರುಪೂರ್ಣಿಮೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಶಾಲಾ ಕಾಲೇಜಿನ ಆವರಣದಲ್ಲಿ ಶ್ರೀ ಆದಿಗುರು ಶಂಕರಾಚಾರ್ಯರಿಗೆ ಪೂಜೆ ಸಲ್ಲಿಸುತ್ತಾ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ಮೊದಲಿಗೆ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಸುರವಿ ತನ್ನ ಸುಮಧುರವಾದ ಕಂಠದಿಂದ ಪ್ರಾರ್ಥನೆ ಮಾಡಿದರು. ಆಂಗ್ಲ ಪ್ರಾಧ್ಯಾಪಕರಾದ ಲಕ್ಷ್ಮಿ ಚೌಧರಿರವರ ರಚನೆಯ ಗುರುಭಕ್ತಿಯನ್ನು ಬಿಂಬಿಸುವ ಗೀತೆಯನ್ನು ಕಾಲೇಜಿನ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಹಾಡಿದರು….

ಪೊನ್ನಂಪೇಟೆಯಲ್ಲಿ ಗುರುಪೂರ್ಣಿಮಾ ದಿನಾಚರಣೆ: ‘ಕರುಣಾಸಿಂಧು ಶ್ರೀರಾಮಕೃಷ್ಣ ಪರಮಹಂಸ’ ಕೊಡವ ಭಾಷೆ ಪುಸ್ತಕ ಲೋಕಾರ್ಪಣೆ
ಕೊಡಗು

ಪೊನ್ನಂಪೇಟೆಯಲ್ಲಿ ಗುರುಪೂರ್ಣಿಮಾ ದಿನಾಚರಣೆ: ‘ಕರುಣಾಸಿಂಧು ಶ್ರೀರಾಮಕೃಷ್ಣ ಪರಮಹಂಸ’ ಕೊಡವ ಭಾಷೆ ಪುಸ್ತಕ ಲೋಕಾರ್ಪಣೆ

July 29, 2018

ಗೋಣಿಕೊಪ್ಪಲು:  ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಗುರುಪೂರ್ಣಿವ ದಿನಾಚರಣೆ ಯಶಸ್ವಿಯಾಗಿ ಜರುಗಿತು. ಮೈಸೂರಿನ ಬೇಲೂರು ಮಠದ ಟ್ರಸ್ಟಿ ಸ್ವಾಮಿ ಮುಕ್ತಿ ನಂದಾಜೀ ಮಹಾರಾಜ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಆಶ್ರಮದ ಸಭಾಂಗಣದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತ ರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮಿ ಮುಕ್ತಿನಂದಾಜೀ ಮಹಾರಾಜ್ ಅವರು, ಇಂದು ಆದ್ಯಾತ್ಮಿಕ ಬೆಳವಣಿಗೆ ಕಡಿಮೆಯಾಗುತ್ತಿದೆ ಭಗವಂತನಲ್ಲಿ ನಂಬಿಕೆ ಇಡಬೇಕಾಗಿದೆ. ರಾಮಕೃಷ್ಣ ಪರಮಹಂಸರ ಜೀವನ ಮತ್ತು ಸಂದೇಶವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಎಲ್ಲಾ ಧರ್ಮದ ಸಂಸ್ಕೃತಿಗೆ ತನ್ನದೇ ಆದ…

ಇಂದು ಗುರುಪೂರ್ಣಿಮಾ
ಮೈಸೂರು

ಇಂದು ಗುರುಪೂರ್ಣಿಮಾ

July 27, 2018

ಮೈಸೂರು: ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ದೇಶಾದ್ಯಂತ 109 ಸ್ಥಳಗಳಲ್ಲಿ `ಗುರುಪೂರ್ಣಿಮಾ ಮಹೋತ್ಸವ’ ಆಯೋಜಿಸಿದ್ದು, ಅದರಂತೆ ಜು.27ರಂದು ಸಂಜೆ 5 ಗಂಟೆಗೆ ಮೈಸೂರಿನ ಜಯಲಕ್ಷ್ಮಿಪುರಂನ ಶ್ರೀ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ `ಗುರುಪೂರ್ಣಿಮಾ ಮಹೋತ್ಸವ’ವನ್ನು ಆಯೋಜಿಸಿದೆ. ಈ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಗುರುಪೂಜೆ, ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಸಂಘಟನೆಯ ಅದ್ವಿತೀಯ ಕಾರ್ಯ ಕುರಿತ ಸಾಕ್ಷ್ಯ ಚಿತ್ರ, ಸಮಾಜ-ರಾಷ್ಟ್ರ ಮತ್ತು ಧರ್ಮದ ಬಗ್ಗೆ ಕೃತಿ ಶೀಲರಾಗಿರುವ ಗಣ್ಯರ ವಿಚಾರಗಳು ಹಾಗೂ ಆಪತ್ಕಾಲದಲ್ಲಿ ಸಮಾಜ…

ಇಂದು ವಿವಿಧೆಡೆ ಭಕ್ತಿಭಾವದ ಗುರುಪೂರ್ಣಿಮೆ ಆಚರಣೆ
ಮೈಸೂರು

ಇಂದು ವಿವಿಧೆಡೆ ಭಕ್ತಿಭಾವದ ಗುರುಪೂರ್ಣಿಮೆ ಆಚರಣೆ

July 26, 2018

ಮೈಸೂರು: ಗುರು ಪೂರ್ಣಿಮೆ ಅಂಗವಾಗಿ ಮೈಸೂರಿನ ವಿವಿಧೆಡೆ ಗುರು ಪೂಜಾ ಕಾರ್ಯಕ್ರಮಗಳನ್ನು ಜುಲೈ 27ರ ಶುಕ್ರವಾರದಂದು ಹಮ್ಮಿ ಕೊಳ್ಳಲಾಗಿದೆ. ಆಲನಹಳ್ಳಿ: ಇಲ್ಲಿನ ರುಕ್ಮಿಣಿ ರಾಮ ಚಂದ್ರ ಕಲ್ಯಾಣ ಮಂಟಪದಲ್ಲಿ ಗುರು ಪೂಜಾ ಕಾರ್ಯಕ್ರಮ ಏರ್ಪಡಿಸ ಲಾಗಿದ್ದು ಬೆಳಗ್ಗೆ 6ಕ್ಕೆ ಕಾಕಡಾರತಿ, 7.30ಕ್ಕೆ ಗಣಪತಿ ಹೋಮ, ದತ್ತಾ ತ್ರೆಯ ಹೋಮ, ಅಭಿಷೇಕ ಸೇರಿ ದಂತೆ ಇತರ ಪೂಜಾ ಕಾರ್ಯಗಳು ನಡೆಯಲಿದೆ. ನಂತರ 10 ಗಂಟೆಗೆ ವಿಷ್ಣು ಸಹಸ್ರನಾಮ ಪಾರಾಯಣ, ಅಂಗವಿಕಲ ಶಾಲಾ ಮಕ್ಕಳಿಂದ ಪೂಜೆ, ಸುಮಂಗಲೀ ಪೂಜೆ, ಪೂರ್ಣಾಹುತಿ…

ಗುರುಪೂರ್ಣಿಮಾ ಪ್ರಯುಕ್ತ ನಾಳೆ ವಿವಿಧ ಧಾರ್ಮಿಕ ಕಾರ್ಯ
ಮೈಸೂರು

ಗುರುಪೂರ್ಣಿಮಾ ಪ್ರಯುಕ್ತ ನಾಳೆ ವಿವಿಧ ಧಾರ್ಮಿಕ ಕಾರ್ಯ

July 26, 2018

ಮೈಸೂರು: ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕ ಸೇವಾ ಟ್ರಸ್ಟ್ ವತಿಯಿಂದ ಗುರುಪೂರ್ಣಿಮಾ ಪ್ರಯುಕ್ತ ಜು.27ರಂದು ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟಿ ಮಂಜುನಾಥ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲನಹಳ್ಳಿಯ ರುಕ್ಮಿಣಿ ರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀ ಅರ್ಜುನ ಅವಧೂತರ ನೇತೃತ್ವದಲ್ಲಿ ಬೆಳಿಗ್ಗೆ 6 ಗಂಟೆಯ ಕಾಕಡಾರತಿಯಿಂದ ಗುರುಪೂರ್ಣಿಮಾ ಕಾರ್ಯಕ್ರಮಗಳು ಆರಂಭವಾಗಲಿದೆ. ನಂತರ ಗಣಪತಿ, ದಕ್ಷಿಣಾ ಮೂರ್ತಿ, ದತ್ತಾತ್ರೇಯ ಹೋಮಗಳು, ಅಭಿಷೇಕ, ದೀಪಾಲಂಕಾರ, ಉಯ್ಯಾಲೋತ್ಸವ ನಡೆಯಲಿವೆ. ಅಂದು…

ಜು.27ರಂದು ಕಾಗಿನೆಲೆಯಲ್ಲಿ ಗುರುವಂದನಾ ಕಾರ್ಯಕ್ರಮ
ಮೈಸೂರು

ಜು.27ರಂದು ಕಾಗಿನೆಲೆಯಲ್ಲಿ ಗುರುವಂದನಾ ಕಾರ್ಯಕ್ರಮ

July 15, 2018

ಮೈಸೂರು:  ಗುರು ಪೂರ್ಣಿಮಾ ಮಹೋತ್ಸವದ ಅಂಗವಾಗಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಜು.27ರಂದು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಮೈಸೂರು ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಶಾಖಾ ಮಠದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇವಣಸಿದ್ದೇಶ್ವರ ಮಹಾ ಸಂಸ್ಥಾನದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳಿಗೆ ಗುರುವಂದನೆ ನಡೆಸಲಾಗುವುದು. ಕೆಲ್ಲೋಡು ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕೆ.ಆರ್.ನಗರ ಶಾಖಾ ಮಠದ ಶಿವಾನಂದಪುರಿ…

Translate »