ಇಂದು ವಿವಿಧೆಡೆ ಭಕ್ತಿಭಾವದ ಗುರುಪೂರ್ಣಿಮೆ ಆಚರಣೆ
ಮೈಸೂರು

ಇಂದು ವಿವಿಧೆಡೆ ಭಕ್ತಿಭಾವದ ಗುರುಪೂರ್ಣಿಮೆ ಆಚರಣೆ

July 26, 2018

ಮೈಸೂರು: ಗುರು ಪೂರ್ಣಿಮೆ ಅಂಗವಾಗಿ ಮೈಸೂರಿನ ವಿವಿಧೆಡೆ ಗುರು ಪೂಜಾ ಕಾರ್ಯಕ್ರಮಗಳನ್ನು ಜುಲೈ 27ರ ಶುಕ್ರವಾರದಂದು ಹಮ್ಮಿ ಕೊಳ್ಳಲಾಗಿದೆ.

ಆಲನಹಳ್ಳಿ: ಇಲ್ಲಿನ ರುಕ್ಮಿಣಿ ರಾಮ ಚಂದ್ರ ಕಲ್ಯಾಣ ಮಂಟಪದಲ್ಲಿ ಗುರು ಪೂಜಾ ಕಾರ್ಯಕ್ರಮ ಏರ್ಪಡಿಸ ಲಾಗಿದ್ದು ಬೆಳಗ್ಗೆ 6ಕ್ಕೆ ಕಾಕಡಾರತಿ, 7.30ಕ್ಕೆ ಗಣಪತಿ ಹೋಮ, ದತ್ತಾ ತ್ರೆಯ ಹೋಮ, ಅಭಿಷೇಕ ಸೇರಿ ದಂತೆ ಇತರ ಪೂಜಾ ಕಾರ್ಯಗಳು ನಡೆಯಲಿದೆ. ನಂತರ 10 ಗಂಟೆಗೆ ವಿಷ್ಣು ಸಹಸ್ರನಾಮ ಪಾರಾಯಣ, ಅಂಗವಿಕಲ ಶಾಲಾ ಮಕ್ಕಳಿಂದ ಪೂಜೆ, ಸುಮಂಗಲೀ ಪೂಜೆ, ಪೂರ್ಣಾಹುತಿ ನಡೆಯಲಿದ್ದು, ಮಧ್ಯಾಹ್ನ 12.15 ಗಂಟೆಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಪೂಜಾ ಕಾರ್ಯಕ್ರಮಗಳ ಸಾನಿಧ್ಯವನ್ನು ಪೂಜ್ಯ ಶ್ರೀ ಅರ್ಜುನ ಅವಧೂತ ಮಹಾರಾಜ ರವರು ವಹಿಸಲಿದ್ದಾರೆ.

ಯರಗನಹಳ್ಳಿ: ಮೈಸೂರು ಬನ್ನೂರು ರಸ್ತೆ ಯರಗನಹಳ್ಳಿಯ ದೇವೇಗೌಡ ಸರ್ಕಲ್ ಬಳಿಯಿರುವ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಜು.27ರಂದು ಗುರು ಪೂರ್ಣಿಮಾ ವಿಶೇಷ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಶ್ರೀ ಬಾಬಾರಿಗೆ ವಿಶೇಷ ಅಭಿಷೇಕ, ಧೂಪಾರತಿ, ದೀಪಾರತಿ ಸೇರಿದಂತೆ ವಿವಿಧ ಪೂಜೆಗಳೊಂದಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಾಮಕೃಷ್ಣನಗರ: ಇಲ್ಲಿನ ಶ್ರೀ ಪ್ರಸನ್ನ ಗಣಪತಿ ಹಾಗೂ ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಾನದಲ್ಲಿ ಜು.27ರಂದು ಗುರುಪೂರ್ಣಿಮೆಯನ್ನು ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 6.30ಕ್ಕೆ ಕಾಕಡಾರತಿ, 7.30ಕ್ಕೆ ಜಲಾಭಿಷೇಕ, ಪುಷ್ಪಾರ್ಚನೆ, 8.30ಕ್ಕೆ ಷೋಡಶೋಪ ಚಾರ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ನೈವೇದ್ಯ, ಆರತಿ, ಸಂಜೆ 6.30ಕ್ಕೆ ಧೂಪಾರತಿ, ಪಲ್ಲಕ್ಕಿ ಪ್ರಾಕಾರೋತ್ಸವ, ರಾತ್ರಿ 10.30ಕ್ಕೆ ಶೇಜಾರತಿ ನಡೆಯಲಿದೆ. ಭಕ್ತ ವೃಂದಕ್ಕೆ ಪ್ರಸಾದ ವಿತರಣೆಯೂ ಇರುತ್ತದೆ.

ಹೆಬ್ಬಾಳ: ಇಲ್ಲಿನ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಜುಲೈ 26 ಹಾಗೂ 27 ರಂದು ಸಂಜೆ 4ರಿಂದ 10 ಗಂಟೆಯವರೆಗೆ ವಿಶೇಷ ಪೂಜೆ, ಹೋಮ, ಭಜನೆ, ಆರಾಧನೆ ಹಾಗೂ ಪ್ರಸಾದ ವಿನಿಯೋಗವನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9986073501, 8152915666 ಅನ್ನು ಸಂಪರ್ಕಿಸಬಹುದು.

ಬೋಗಾದಿ: ಶ್ರೀ ಯಾಜ್ಞವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾ ವತಿಯಿಂದ ಜು.27ರಂದು ಬೆಳಗ್ಗೆ 10 ಗಂಟೆಗೆ ಬೋಗಾದಿ 2ನೇ ಹಂತದ ಆಯಿಷ್ ಕಾಲೋನಿಯಲ್ಲಿ ರುವ ಸಭಾದ ಆವರಣದಲ್ಲಿ ಗುರು ಪೂರ್ಣಿಮೆ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

Translate »