ಆ.1ರಿಂದ ಶಾಸ್ತ್ರ ಚಿಂತನಗೋಷ್ಠಿ ಕಾರ್ಯಾಗಾರ
ಮೈಸೂರು

ಆ.1ರಿಂದ ಶಾಸ್ತ್ರ ಚಿಂತನಗೋಷ್ಠಿ ಕಾರ್ಯಾಗಾರ

July 26, 2018

ಮೈಸೂರು:  ಕೆ.ಆರ್.ನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದಲ್ಲಿ ಆ.1ರಿಂದ 5ರವರೆಗೆ ದೇಶದ ಪ್ರಸಿದ್ಧ ವಿದ್ವಾಂಸರ ಸಹಯೋಗದಲ್ಲಿ ಶಾಸ್ತ್ರ ಚಿಂತನಗೋಷ್ಠಿ ಕಾರ್ಯಾಗಾರ ನಡೆಯಲಿದೆ.

ಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ಈ ಬಾರಿ ಆಷಾಢ ಪೂರ್ಣಿಮೆ ಜು. 27ರಂದು ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದಲ್ಲಿ ಪೂರ್ವಾಹ್ನ 11 ಗಂಟೆಗೆ ವ್ಯಾಸಪೂಜೆ ಯೊಂದಿಗೆ ತಮ್ಮ 24ನೇ ಚಾತುರ್ಮಾಸ್ಯ ವ್ರತಾನುಷ್ಠಾನದ ಸಂಕಲ್ಪ ಕೈಗೊಳ್ಳಲಿದ್ದಾರೆ.

ಮರುದಿನ ಮಧ್ಯಾಹ್ನ ಉತ್ತರ ಪೂಜೆಯ ನಂತರ ಸಮಸ್ತ ಭಕ್ತರಿಗೆ ಶ್ರೀ ಶ್ರೀಗಳು ವ್ಯಾಸಾಕ್ಷತೆಯನ್ನು ಅನುಗ್ರಹಿಸಲಿದ್ದಾರೆ. ಪ್ರತಿದಿನ ವಿದ್ವಾಂಸರಿಂದ ಉಪನ್ಯಾಸವು ನಡೆಯಲಿದೆ. ಶ್ರಾವಣಮಾಸದಲ್ಲಿ ಪ್ರತಿದಿನ ಬೆಳಿಗ್ಗೆ ಶ್ರೀಚಕ್ರ ನವಾವರಣ ಪೂಜೆ, ಶ್ರಾವಣ ಸೋಮವಾರದಂದು ಶ್ರೀ ನೀಲಕಂಠೇಶ್ವರ ದೇವರಿಗೆ ವಿಶೇಷ ಪೂಜೆ ನಡೆಯಲಿದೆ. ಆ. 26 ರಂದು ಲೋಕಕಲ್ಯಾಣಾರ್ಥವಾಗಿ ಶತಚಂಡೀ ಅನುಷ್ಠಾನ, ಆ. 30 ರಂದು ಶತಚಂಡೀ ಮಹಾಯಾಗದ ಪೂರ್ಣಾಹುತಿ ಮತ್ತು ಶ್ರೀಗಳವರ ವರ್ಧಂತ್ಯುತ್ಸವದ ನಿಮಿತ್ತ ಸಭಾ ಕಾರ್ಯಕ್ರಮ ಮತ್ತು ಗ್ರಂಥ ಬಿಡುಗಡೆ, ವಿದ್ವತ್ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ. ಆಗಸ್ಟ್ 24 ರಂದು ಸೀಮೋಲ್ಲಂಘನ ದೊಂದಿಗೆ ಚಾತುರ್ಮಾಸ್ಯ ವ್ರತಾನುಷ್ಠಾನ ಪೂರ್ಣಗೊಳ್ಳಲಿದೆ ಎಂದು ಚಾತು ರ್ಮಾಸ್ಯ ಸಂಚಾಲನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Translate »