ನಾಳೆ ಬಸವ ರತ್ನ ಪ್ರಶಸ್ತಿ ಪ್ರದಾನ
ಮೈಸೂರು

ನಾಳೆ ಬಸವ ರತ್ನ ಪ್ರಶಸ್ತಿ ಪ್ರದಾನ

July 26, 2018

ಮೈಸೂರು: ಮೈಸೂರು ಶರಣ ಮಂಡಳಿ ವತಿಯಿಂದ ಬಸವ ಜಯಂತಿ ಅಂಗವಾಗಿ ಬಸವ ರತ್ನ-2018 ಪ್ರಶಸ್ತಿ ಪ್ರದಾನ ಸಮಾ ರಂಭವನ್ನು ಹಮ್ಮಿ ಕೊಳ್ಳಲಾಗಿದೆ.

ಜು.27ರಂದು ಸಂಜೆ 5 ಗಂಟೆಗೆ ಶಂಕರ ಮಠ ರಸ್ತೆಯಲ್ಲಿ ಇರುವ ಶ್ರೀ ನಟರಾಜ ಸಭಾಂಗಣದಲ್ಲಿ ಹೊಸ ಮಠಾಧ್ಯಕ್ಷ ಶ್ರೀ ಚಿದಾನಂದ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಬಸವ ರತ್ನ ಪ್ರಶಸ್ತಿಯನ್ನು ಮುಜ ರಾಯಿ ಸಚಿವ ರಾಜಶೇಖರ್ ಮಾಡಲಿದ್ದಾರೆ. ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಎಸ್.ಎ.ರಾಮದಾಸ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ವೈ.ಡಿ.ರಾಜಣ್ಣ, ನಗರಪಾಲಿಕೆ ಸದಸ್ಯ ಮಂಜುನಾಥ್, ಸಂಸ್ಕøತಿ ಪೋಷಕ ರಘುರಾಂ ವಾಜಪೇಯಿ, ಮಡ್ಡೀಕೆರೆ ಗೋಪಾಲ್ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ನಾಡು-ನುಡಿಗೆ ತಮ್ಮದೇ ಆದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಶ್ರೀಮತಿ ಭಾರತಿ, ಡಾ. ಲತಾ ರಾಜಶೇಖರ್, ಡಾ. ತಿಮ್ಮಯ್ಯ, ಶಿವಕುಮಾರ್ ಹಾಗೂ ಹೆಚ್.ಎಂ. ನಟೇಶ್ ಅವರನ್ನು ಗೌರವಿಸಲಾಗುವುದು.

Translate »