ಕೆ.ಆರ್.ನಗರ ನಾರಾಯಣಪುರ ಗ್ರಾಮದಲ್ಲಿ ಸಚಿವ ಸಾ.ರಾ.ಮಹೇಶ್ ಗ್ರಾಮ ವಾಸ್ತವ್ಯ
ಮೈಸೂರು

ಕೆ.ಆರ್.ನಗರ ನಾರಾಯಣಪುರ ಗ್ರಾಮದಲ್ಲಿ ಸಚಿವ ಸಾ.ರಾ.ಮಹೇಶ್ ಗ್ರಾಮ ವಾಸ್ತವ್ಯ

October 7, 2018

ಚುಂಚನಕಟ್ಟೆ:  ನನ್ನ ಜೀವಿತಾವಧಿಯಲ್ಲಿ ಕೆ.ಆರ್.ನಗರ ಕ್ಷೇತ್ರದಲ್ಲೇ ರಾಜಕೀಯವಾಗಿ ಮುಂದುವರೆಯುತ್ತೇನೆ, ಬೇರೆಲ್ಲೂ ಹೋಗುವುದಿಲ್ಲ. ಆದುದರಿಂದ ಮುಖಂಡರು ಮತ್ತು ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್ ಹೇಳಿದರು.

ತಾಲೂಕಿನ ಕಗ್ಗೆರೆ ಗ್ರಾ.ಪಂ. ವ್ಯಾಪ್ತಿಯ ನಾರಾಯಣಪುರ ಗ್ರಾಮದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಜನರು ತಮ್ಮ ಕೆಲಸಗಳಿಗೆ ದಾಖಲೆಗಳನ್ನು ಹಿಡಿದು ಸರ್ಕಾರಿ ಕಚೇರಿಗಳಲ್ಲಿ ಅಲೆದಾಡು ವಂತಾಗಬಾರದು ಎಂಬ ಮುಖ್ಯ ಉದ್ದೇಶದಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕರೆ ತಂದು ಜನತೆಯ ಸಮಸ್ಯೆಯನ್ನು ಸ್ಥಳ ದಲ್ಲಿಯೇ ಬಗೆ ಹರಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಈಗಾಗಲೇ ವಸತಿ ಯೋಜನೆಯಡಿಯಲ್ಲಿ ಅರ್ಹ ಪಲಾನುಭವಿ ಗಳಿಗೆ ಮನೆ ಹಂಚಿಕೆ, ವೃದ್ದಾಪ್ಯ ವೇತನ, ವಿಧವಾ, ವಿಕಲ ಚೇತನ ವೇತನ, ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ರಸ್ತೆಗಳ ದುರಸ್ಥಿ ಕಾರ್ಯ ಮತ್ತು ಗ್ರಾಮಕ್ಕೆ ಬೇಕಾಗುವ ಮೂಲ ಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಕಗ್ಗೆರೆ ಗ್ರಾ.ಪಂ. ವ್ಯಾಪ್ತಿಯ ನಾರಾ ಯಣ ಪುರ ಗ್ರಾಮಕ್ಕೆ ಶುಕ್ರವಾರ ರಾತ್ರಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸಚಿವ ಸಾ.ರಾ.ಮಹೇಶ್ ಆಗಮಿಸುತ್ತಿದ್ದಂತೆಯೇ ಹೂ ಗುಚ್ಛ ನೀಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿ ಗಳೊಂದಿಗೆ ಗ್ರಾಮದ ಅಭಿವೃದ್ದಿಯ ಬಗ್ಗೆ ಚರ್ಚೆ ನಡೆಸಿ, ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಿದರು, ನಂತರ ನಾಮಧಾರಿ ಸಮು ದಾಯದ ಸೀತಮ್ಮ ಎಂಬುವವರು ಮನೆಯಲ್ಲಿ ವ್ಯಾಸ್ತವ್ಯ ಹೂಡಿದರು.

ಇದೇ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ಎಂಡಿಸಿಸಿ ಹಾಗೂ ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ಉಪ ವಿಭಾಗಾಧಿಕಾರಿ ನಿತೀನ್, ತಹಸಿಲ್ದಾರ್ ನಿಖಿತ ಎಂ.ಚಿನ್ನಸ್ವಾಮಿ, ಎಎಸ್‍ಪಿ ಅರು ಣಾಂಗ್ಯೂ ಗಿರಿ, ಗ್ರಾ,ಪಂ.ಅಧ್ಯಕ್ಷೆ ಸುಮಾ ಮಹೇಶ್, ತಾ.ಪಂ. ಕಾರ್ಯನಿರ್ವಹಣಾ ಧಿಕಾರಿ ಲಕ್ಷ್ಮಿಮೋಹನ್, ಸಿಡಿಪಿಓ ಸುಮಿತ್ರ, ಬಿಇಓ ಎಂ.ರಾಜು, ಪಿಡಬ್ಲ್ಯೂಡಿ ಇಂಜಿನೀ ಯರ್ ಟಿ.ಡಿ.ಪ್ರಸಾದ್, ಅಬಕಾರಿ ನಿರೀಕ್ಷಕಿ ಹೆಚ್.ಡಿ.ರಮ್ಯ, ವಲಯ ಅರಣ್ಯಾಧಿಕಾರಿ ಜಗದೀಶ್, ಹಾರಂಗಿ ಸಹಾಯಕ ಕಾರ್ಯ ಪಾಲಕ ಇಂಜಿನೀಯರ್ ಚಂದ್ರಶೇಖರ್, ಸಹಾಯಕ ಇಂಜಿನೀಯರ್‍ಗಳಾದ ಎಸ್.ವಿ.ಪ್ರಕಾಶ್, ಅಭಿಲಾಶ್, ಕಿರಣ್ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗರಾಜನ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸನ್ನ, ಅಗ್ನಿ ಶಾಮಕ ದಳದ ಠಾಣಾಧಿಕಾರಿ ರಾಮಚಂದ್ರಪ್ಪ ಸೇರಿದಂತೆ ಇತರೆ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

Translate »