ಯುವಕರಿಂದಷ್ಟೇ ದೇಶದ ಅಭಿವೃದ್ಧಿ ಸಾಧ್ಯ: ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಜೆ.ಡಿ.ಹರೀಶ್‍ಗೌಡ ವಿಶ್ವಾಸ
ಮೈಸೂರು

ಯುವಕರಿಂದಷ್ಟೇ ದೇಶದ ಅಭಿವೃದ್ಧಿ ಸಾಧ್ಯ: ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಜೆ.ಡಿ.ಹರೀಶ್‍ಗೌಡ ವಿಶ್ವಾಸ

October 7, 2018

ತಿ.ನರಸೀಪುರ: ಯುವಕರು ಸಂಘಟಿತರಾಗಿ ಕೆಲಸ ಮಾಡಿದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದು ಮೈಸೂರಿನ ಎಂಸಿಡಿಸಿಸಿ ಬ್ಯಾಂಕ್‍ನ ನಿರ್ದೇಶಕರೂ ಆದ ಜೆಡಿಎಸ್ ಯುವ ಮುಖಂಡ ಜಿ.ಡಿ. ಹರೀಶ್‍ಗೌಡ ಹೇಳಿದರು.

ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮೊದಲ ವರ್ಷದ ಕಬ್ಬಡಿ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರಲ್ಲಿ ಮಾತ್ರ ದೇಶವನ್ನು ಬದ ಲಾವಣೆ ಮಾಡುವ ಶಕ್ತಿ ಇದ್ದು, ರಾಜಕಾರಣಿ ಅಥವಾ ಅಧಿಕಾರಿಗಳಿಂದ ದೇಶದ ಅಭಿ ವೃದ್ದಿ ಸಾಧ್ಯವಿಲ್ಲ ಎಂದರು. ದೇಶೀಯ ಕಲೆ, ಕ್ರೀಡೆಗಳು ಪ್ರಸಕ್ತ ಋತುಮಾನದಲ್ಲಿ ಉಳಿದು ಬೆಳೆಯಬೇಕಿದೆ. ದೇಶಿಯ ಕಲೆಗೆ ಶತಮಾನಗಳ ಇತಿಹಾಸವಿದೆ.

ಕಬ್ಬಡ್ಡಿ ದೇಶಿಯ ಕಲೆಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಬೆಂಗಳೂರಿನಲ್ಲಿ ನಡೆದ ಪ್ರೋ ಕಬ್ಬಡಿ ದೇಶಿಯ ಕಬ್ಬಡಿಗೆ ಹೊಸ ರೂಪ ತಂದುಕೊಟ್ಟಿದ್ದಕ್ಕೆ ಇಂದು ದೇಶೀಯ ಕ್ರೀಡೆಯಾಗಿ ಕಬ್ಬಡಿ ಉಳಿದುಕೊಂಡಿದೆ. ಕಬ್ಬಡಿಯಾಗಲಿ, ಕುಸ್ತಿಯಾಗಲಿ, ಇಂತಹ ಜನಪ್ರಿಯ ಕ್ರೀಡೆಗಳನ್ನು ಇಂದಿನ ಯುವ ಜನತೆ ಮರೆಯುತ್ತಿದ್ದು, ಇಲ್ಲಿ ದೇಶೀಯ ಕ್ರೀಡೆಗೆ ಇಂಬುಕೊಟ್ಟು ಗ್ರಾಮೀಣ ಪ್ರದೇಶ ದಲ್ಲಿ ಕಬ್ಬಡಿಯಂತಹ ಕ್ರೀಡೆ ಆಯೋಜಿಸು ತ್ತಿರುವುದು ಶ್ಲಾಘನೀಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಶಾಸಕ ಎಂ.ಅಶ್ವಿನ್‍ಕುಮಾರ್, ದೇಶೀಯ ಕ್ರೀಡೆಗಳು ಇಂದು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಜೀವಂತವಾಗಿವೆ. ಈ ಕ್ರೀಡೆಗಳು ಪಟ್ಟಣ ಪ್ರದೇಶಕ್ಕೂ ವ್ಯಾಪಿಸುವಂತಹ ಕಾರ್ಯವನ್ನು ಯುವ ಜನತೆ ಮಾಡಬೇಕಿದೆ. ಕ್ರೀಡೆಯಿಂದ ಮನುಷ್ಯನ ದೈಹಿಕ, ಮಾನಸಿಕ ಆರೋಗ್ಯ ವೃದ್ದಿಸಲಿದೆ ಎಂದರು.

ಮಾಜಿ ಜಿ.ಪಂ ಸದಸ್ಯ ಎಂ.ಆರ್.ಸೋಮಣ್ಣ, ತಾ.ಪಂ ಸದಸ್ಯ ಎಂ.ಚಂದ್ರಶೇಖರ್, ಗ್ರಾ.ಪಂ ಅಧ್ಯಕ್ಷ ಚಂಡೀಪ್ರಕಾಶ್,ಪುರಸಭೆ ಸದಸ್ಯ ರಾದ ವಿ.ಮೋಹನ್, ಸೈಯದ್‍ಅಹ ಮ್ಮದ್, ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಎಂ.ಎಸ್.ಅನಿಕೇತ್‍ಗೌಡ, ಪಿಎಸಿಸಿ ಮಾಜಿ ಅಧ್ಯಕ್ಷ ಎಸ್.ಮಾದಯ್ಯ(ತೋಳಪ್ಪ) ಜೆಡಿಎಸ್ ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ಕಾರ್ಯಾಧ್ಯಕ್ಷ ಬಿ.ಆರ್.ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷರಾದ ಯಶೋದಮ್ಮ, ರಾಜೇಶ್ವರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ. ಶಿವಶಂಕರ್‍ನಾಯ್ಕ, ಎಂ.ಆರ್.ಶಿವಮೂರ್ತಿ, ಶಿವು, ಕುಮಾರಸ್ವಾಮಿ, ಮುಖಂಡರಾದ ರಮೇಶ್, ಬಾಲಕೃಷ್ಣ, ಸುಹಾಸ್‍ನಾಯ್ಕ, ಕುಮಾರ್(ಕಿಚ್ಚ), ಮಾಜಿ ಗ್ರಾಪಂ ಸದಸ್ಯ ಎಲ್.ಉಮಾಪತಿ, ಸುಂದರನಾಯ್ಕ, ಪ್ರೀತಮ್, ಜಯಪಾಲ್‍ಭರಣಿ, ಗೋಪಿಬೋರೇ ಗೌಡ, ಮೋಹನ್‍ಕುಮಾರ್, ಇತರರು ಇದ್ದರು.

Translate »