ಮೀಸಲಾತಿ ಸಂರಕ್ಷಣಾ ಸಮಿತಿ ಪ್ರತಿಭಟನೆ
ಹಾಸನ

ಮೀಸಲಾತಿ ಸಂರಕ್ಷಣಾ ಸಮಿತಿ ಪ್ರತಿಭಟನೆ

October 7, 2018

ಹಾಸನ: ಪಿಯು ಉಪನ್ಯಾಸಕರ ನೇಮಕಾತಿಯಲ್ಲಿ ಎಸ್‍ಸಿ/ಎಸ್‍ಟಿ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಮತ್ತೇ ಶೇ.50 ರಿಂದ 55ಕ್ಕೆ ಏರಿಸಿರುವುದನ್ನು ಖಂಡಿಸಿ ಓಬಿಸಿ, ಎಸ್‍ಸಿ/ಎಸ್‍ಟಿ ಮೀಸಲಾತಿ ಸಂರಕ್ಷಣಾ ಸಮಿತಿಯಿಂದ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟಿಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿ ಯಿಂದ ಮೆರವಣಿಗೆ ಹೊರಟ ಪ್ರತಿಭಟನಾ ಕಾರರು, ಬಿಎಂ ರಸ್ತೆ ಮೂಲಕ ಆಗಮಿಸಿ ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ಜಮಾವಣೆ ಗೊಂಡರಲ್ಲದೆ, ಘೋಷಣೆ ಕೋಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

2015ರ ಶೈಕ್ಷಣಿಕ ಸಾಲಿನಲ್ಲಿ ಸುಮಾರು 1,131 ಖಾಲಿ ಪಿಯು ವಿವಿಧ ವಿಷಯವಾರು ಉಪನ್ಯಾಸಕರ ನೇಮಕಾತಿಗೆ ಸರ್ಕಾರದಿಂದ ಅರ್ಜಿ ಕರೆಯಲಾಗಿತ್ತು. ಆ ವೇಳೆ ಅಭ್ಯರ್ಥಿ ಗಳ ನೇಮಕಾತಿ ಅರ್ಹತೆಯನ್ನು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಶೇ.55 ಅಂಕ ಗಳಿಗೆ ನಿಗದಿಪಡಿಸಲಾಗಿತ್ತು. ನಂತರ ಕೆಲವು ಸಂಘ-ಸಂಸ್ಥೆಗಳು ಮತ್ತು ಉದ್ಯೋಗಾ ಕಾಂಕ್ಷಿಗಳು ಎಸ್‍ಸಿ/ಎಸ್‍ಟಿ ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳ ನೇಮಕಾತಿ ಅರ್ಹತೆಯ ಕನಿಷ್ಠ ಅಂಕಗಳನ್ನು ಶೇ.55 ರಿಂದ ಶೇ.50ಕ್ಕೆ ಇಳಿಸುವಂತೆ ಅನೇಕ ಬಾರಿ ಮನವಿ ಕೊಟ್ಟ ಬಳಿಕ ಶೇ.50ಕ್ಕೆ ಇಳಿಸಿ ಜಾರಿ ಆದೇಶ ಮಾಡಲಾಗಿತ್ತು. ಆದರೆ ಈಗ ಕೆಲ ನೆಪವೊಡ್ಡಿ ಎಸ್‍ಸಿ/ಎಸ್‍ಟಿ, ಪ್ರವರ್ಗ -1 ಮತ್ತು ಅಂಗವಿಕಲರ ಅಭ್ಯರ್ಥಿಗಳ ಅಂಕ ಅರ್ಹತೆಯನ್ನು ಮೊದಲಿನಂತೆ ಕಾಯ್ದು ಕೊಳ್ಳಲು ಸೂಚಿಸಿ ಶೇ.55 ಅಂಕದ ಆಧಾ ರದ ಮೇಲೆ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿದೆ. ಇದರಿಂದ ಶೋಷಿತರು, ಅಸಹಾಯಕ ನಿರುದ್ಯೋಗಿಗಳಿಗೆ ದ್ರೋಹ ಬಗೆದಂತಾಗಿದೆ ಎಂದು ಕಿಡಿಕಾರಿದರಲ್ಲದೆ, ಈ ನಿಯಮವನ್ನು ಕೂಡಲೇ ವಾಪಸ್ ಪಡೆದು ಎಸ್‍ಸಿ/ಎಸ್‍ಟಿ ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳ ಕನಿಷ್ಠ ಅಂಕ ಅರ್ಹತೆಯನ್ನು ಶೇ.50ರಷ್ಟು ಕಾಯ್ದು ಕೊಳ್ಳುವಂತೆ ಸರ್ಕಾರಕ್ಕೆ ಒತ್ತಾಯಿಸಿದರ ಲ್ಲದೆ, ಮೂರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ನೇಮಕಾತಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಗೌರವಾಧ್ಯಕ್ಷ ಕೆ.ಕೆ.ರುದ್ರಯ್ಯ, ಅಧ್ಯಕ್ಷ ಕುಮಾರಯ್ಯ, ಉಪಾ ಧ್ಯಕ್ಷ ರಂಗಸ್ವಾಮಿ, ಖಜಾಂಚಿ ಮಲ್ಲಯ್ಯ, ಸಂಚಾಲಕ ಎಂ.ಎಸ್. ಯೋಗೇಶ್, ಮಾನವ ಹಕ್ಕುಗಳ ವೇದಿಕೆ ಮುಖಂಡ ಆರ್.ಮರಿಜೋಸೆಫ್ ಇತರರಿದ್ದರು.

Translate »