ಬೆಳೆ ಪರಿಹಾರ ವಿತರಣೆಗೆ ಸೂಚನೆ
ಹಾಸನ

ಬೆಳೆ ಪರಿಹಾರ ವಿತರಣೆಗೆ ಸೂಚನೆ

October 7, 2018

ಹಾಸನ: ಅತಿವೃಷ್ಟಿ, ಅನಾವೃಷ್ಟಿ ಯಿಂದ ಹಾನಿಗೀಡಾದ ಬೆಳೆಗಳಿಗೆ ಸೂಕ್ತ ಪರಿಹಾರ ವಿತರಿಸುವಂತೆ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಸೂಚಿಸಿದರು.

ನಗರದ ತಾಪಂ ಕಚೇರಿಯಲ್ಲಿ ಂದು ತಾಪಂ ಅಧ್ಯಕ್ಷ ಬಿ.ಟಿ.ಸತೀಶ್ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡಿದ ಶಾಸಕರು, ಆಲೂಗೆಡ್ಡೆ ಬೆಳೆ ಹಾನಿಗೆ ಒಳಗಾದ ರೈತರಿಗೆ ವಿಮೆ ಪರಿಹಾರ ಮಾರ್ಗ ಒದಗಿಸು ವಂತೆ ತಿಳಿಸಿದರಲ್ಲದೆ, ಪಶುಭಾಗ್ಯ ಯೋಜನೆ ಯಡಿ ಬ್ಯಾಂಕ್‍ಗಳಲ್ಲಿ ಅರ್ಹ ಫಲಾನುಭವಿ ಗಳಿಗೆ ಶೀಘ್ರವಾಗಿ ಸಾಲ ಸೌಲಭ್ಯ ನೀಡಬೇಕು. ಜಾನುವಾರು ಸಂಖ್ಯೆಗನುಗುಣವಾಗಿ ಪಶು ವೈದ್ಯಕೀಯ ಆಸ್ಪತ್ರೆ ತೆರೆಯುವಂತೆ ಸಂಬಂಧಪಟ್ಟವರಿಗೆ ತಿಳಿಸಿದರು.
ದೊಡ್ಡ ಬೀಕನಹಳ್ಳಿ, ಅಂಕಪುರ, ಕಾರ್ಲೆ, ಮತ್ತಿತರ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಶೀಘ್ರವೇ ವಿದ್ಯುತ್ ಸಮ ರ್ಪಕ ಒದಗಿಸಬೇಕು. ಪಿಡಿಓಗಳು ಇದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಾಪಂ ಅಧ್ಯಕ್ಷ ಬಿ.ಟಿ.ಸತೀಶ್ ಮಾತ ನಾಡಿ, ಕಟ್ಟಾಯ, ಕಾರ್ಲೆ, ನಾಯಕರಹಳ್ಳಿ ಹಾಗೂ ಕಬತ್ತಿ ಮಾರ್ಗಗಳ ಬಸ್‍ಗಳ ಸಂಚಾ ರಕ್ಕೆ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಕೆಎಸ್ ಆರ್‍ಟಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳು ವಂತೆ ಸೂಚಿಸಿದರು. ಕೃಷಿ ಇಲಾಖೆ ಅಧಿಕಾರಿ ಗಳು, ಈ ಬಾರಿಯ ಮಳೆ ಬೆಳೆ ಪರಿಸ್ಥಿತಿ ವಿವರಿ ಸಿದರು. ತಾಪಂ ಇಓ ದೇವರಾಜ್‍ಗೌಡ ಹಾಗೂ ವಿವಿಧ ಇಲಾಖಾ ಅಧಿಕಾರಿಗಳಿದ್ದರು.

Translate »