ವೈಯಕ್ತಿಕ ಸ್ವಚ್ಛತೆ ಜಾಗೃತಿಗಾಗಿ ಸಖಿ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಭೇರ್ಯ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕೆ.ಆರ್.ನಗರ ತಾಲೂಕಿನ ಚಿಕ್ಕಭೇರ್ಯ ಹಾಗೂ ಹೆಬ್ಸೂರು ಗ್ರಾಮದ ಮತಗಟ್ಟೆಯಲ್ಲಿ ವಿವಿ ಪ್ಯಾಟ್ ದೋಷದಿಂದಾಗಿ ಮತದಾನ ಕೆಲಕಾಲ ಸ್ಥಗಿತಗೊಂಡಿದ್ದನ್ನು ಹೊರತುಪಡಿಸಿ ಉಳಿದಂತೆ ಭೇರ್ಯದಲ್ಲಿ ಶಾಂತಿಯುತ ಮತದಾನವಾಗಿದೆ. ಮತಕೇಂದ್ರಗಳ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲ ಮತಗಟ್ಟೆಗಳಲ್ಲಿ ವಿಶೇಷಚೇತನರು, ವಯೋವೃದ್ಧರನ್ನು ಗಾಲಿ ಕುರ್ಚಿಯಲ್ಲಿ ಸ್ಥಳೀಯ ಗ್ರಾ.ಪಂ. ಸಿಬ್ಬಂದಿ ಮತಗಟ್ಟೆ ಕರೆತಂದು ಮತದಾನ ಮಾಡಿಸಿದರು. ಕೆಲವು ಮತಗಟ್ಟೆಗಳಿಗೆ ಭೇಟಿ…
ಕೆ.ಆರ್.ನಗರ ನಾರಾಯಣಪುರ ಗ್ರಾಮದಲ್ಲಿ ಸಚಿವ ಸಾ.ರಾ.ಮಹೇಶ್ ಗ್ರಾಮ ವಾಸ್ತವ್ಯ
October 7, 2018ಚುಂಚನಕಟ್ಟೆ: ನನ್ನ ಜೀವಿತಾವಧಿಯಲ್ಲಿ ಕೆ.ಆರ್.ನಗರ ಕ್ಷೇತ್ರದಲ್ಲೇ ರಾಜಕೀಯವಾಗಿ ಮುಂದುವರೆಯುತ್ತೇನೆ, ಬೇರೆಲ್ಲೂ ಹೋಗುವುದಿಲ್ಲ. ಆದುದರಿಂದ ಮುಖಂಡರು ಮತ್ತು ಕಾರ್ಯಕರ್ತರು ಆತಂಕ ಪಡಬೇಕಾಗಿಲ್ಲ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್ ಹೇಳಿದರು. ತಾಲೂಕಿನ ಕಗ್ಗೆರೆ ಗ್ರಾ.ಪಂ. ವ್ಯಾಪ್ತಿಯ ನಾರಾಯಣಪುರ ಗ್ರಾಮದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಜನರು ತಮ್ಮ ಕೆಲಸಗಳಿಗೆ ದಾಖಲೆಗಳನ್ನು ಹಿಡಿದು ಸರ್ಕಾರಿ ಕಚೇರಿಗಳಲ್ಲಿ ಅಲೆದಾಡು ವಂತಾಗಬಾರದು ಎಂಬ ಮುಖ್ಯ ಉದ್ದೇಶದಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ…
ತಿಂಗಳಿಗೊಂದು ಗ್ರಾಮದಲ್ಲಿ ವಾಸ್ತವ್ಯ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್
August 5, 2018ಚುಂಚನಕಟ್ಟೆ: ಅಭಿವೃದ್ದಿ ಕೆಲಸಗಳು ಮತ್ತು ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರತೀ ತಿಂಗಳು ಒಂದೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು. ತಾಲೂಕಿನ ಮಿರ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯ ಮತ್ತು ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದ ಅಭಿವೃದ್ದಿ ಮತ್ತು ಜನತೆಯ ಕುಂದು ಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಇಲಾಖೆಯ…
ಆ.1ರಿಂದ ಶಾಸ್ತ್ರ ಚಿಂತನಗೋಷ್ಠಿ ಕಾರ್ಯಾಗಾರ
July 26, 2018ಮೈಸೂರು: ಕೆ.ಆರ್.ನಗರದ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದಲ್ಲಿ ಆ.1ರಿಂದ 5ರವರೆಗೆ ದೇಶದ ಪ್ರಸಿದ್ಧ ವಿದ್ವಾಂಸರ ಸಹಯೋಗದಲ್ಲಿ ಶಾಸ್ತ್ರ ಚಿಂತನಗೋಷ್ಠಿ ಕಾರ್ಯಾಗಾರ ನಡೆಯಲಿದೆ. ಶ್ರೀ ಶಂಕರಭಾರತೀ ಮಹಾಸ್ವಾಮಿಗಳವರು ಈ ಬಾರಿ ಆಷಾಢ ಪೂರ್ಣಿಮೆ ಜು. 27ರಂದು ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತೀ ಮಠದಲ್ಲಿ ಪೂರ್ವಾಹ್ನ 11 ಗಂಟೆಗೆ ವ್ಯಾಸಪೂಜೆ ಯೊಂದಿಗೆ ತಮ್ಮ 24ನೇ ಚಾತುರ್ಮಾಸ್ಯ ವ್ರತಾನುಷ್ಠಾನದ ಸಂಕಲ್ಪ ಕೈಗೊಳ್ಳಲಿದ್ದಾರೆ. ಮರುದಿನ ಮಧ್ಯಾಹ್ನ ಉತ್ತರ ಪೂಜೆಯ ನಂತರ ಸಮಸ್ತ ಭಕ್ತರಿಗೆ ಶ್ರೀ ಶ್ರೀಗಳು ವ್ಯಾಸಾಕ್ಷತೆಯನ್ನು ಅನುಗ್ರಹಿಸಲಿದ್ದಾರೆ. ಪ್ರತಿದಿನ ವಿದ್ವಾಂಸರಿಂದ…
ಹೆಚ್‍ಡಿಕೆ ಮಾದರಿಯಲ್ಲೇ ಗ್ರಾಮ ವಾಸ್ತವ್ಯ ಹರದನಹಳ್ಳಿಯಲ್ಲಿ ಸಚಿವ ಸಾರಾ ಮಹೇಶ್ ಹೇಳಿಕೆ
June 11, 2018ಭೇರ್ಯ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೈಗೊಂಡಿದ್ದ ಗ್ರಾಮವಾಸ್ತವ್ಯ ಮಾದರಿಯಲ್ಲೇ ತಾನೂ ತಾಲೂಕಿನಲ್ಲಿ ಗ್ರಾಮವಾಸ್ತವ್ಯ ಕಾರ್ಯ ಕ್ರಮ ಆರಂಭಿಸುವುದಾಗಿ ಪ್ರವಾಸೋ ದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್ ಪ್ರಕಟಿಸಿದರು. ಅವರು ಕೆ.ಆರ್.ನಗರ ತಾಲೂಕು ಹರದನಹಳ್ಳಿಯಲ್ಲಿ ಭಾನುವಾರ ಗ್ರಾಮಸ್ಥ ರಿಂದ ಅಭಿನಂದನೆ ಸ್ವೀಕರಿಸಿ ಮಾತ ನಾಡಿದರು. ಹರದನಹಳ್ಳಿಯಿಂದಲೇ ಗ್ರಾಮವಾಸ್ತವ್ಯ ಕಾರ್ಯಕ್ರಮ ಪ್ರಾರಂಭ ಗೊಳ್ಳಲಿದ್ದು, ಜುಲೈ 6 ರಂದು ರಾತ್ರಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿದ ಅಧಿಕಾರಿಗಳೊಂದಿಗೆ ವಾಸ್ತವ್ಯ ಹೂಡ ಲಾಗುವುದು. ಜು.7ರಂದು ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ 60…
ಕೊಟ್ಟ ಮಾತಿನಂತೆ ಕುಮಾರಸ್ವಾಮಿಯವರು ನನ್ನನ್ನು ಮಂತ್ರಿ ಮಾಡಿದರು: ಸಾರಾ
June 9, 2018ಕೆ.ಆರ್.ನಗರ: ನನ್ನ ನೆಚ್ಚಿನ ನಾಯಕರಾದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೆ.ಆರ್.ನಗರ ತಾಲೂಕಿನ ಜನತೆಗೆ ಚುನಾವಣೆ ಸಂದರ್ಭ ದಲ್ಲಿ ನೀಡಿದ ಆಶ್ವಾಸನೆಯಂತೆ ನನ್ನನ್ನು ಸಚಿವನನ್ನಾಗಿ ಮಾಡಿ ಪ್ರವಾಸೋ ದ್ಯಮ ಮತ್ತು ರೇಷ್ಮೆ ಖಾತೆಯನ್ನು ನೀಡಿದ್ದು, ಅವರ ಆಶಯದಂತೆ ಈ ರಾಜ್ಯದ ಜನತೆಗೆ ಮತ್ತು ಸರ್ಕಾರಕ್ಕೆ ಹೆಸರು ತರುವ ರೀತಿ ಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ನೂತನ ಸಚಿವ ಸಾ.ರಾ.ಮಹೇಶ್ ಹೇಳಿದರು. ಸಚಿವರಾಗಿ ನೇಮಕಗೊಂಡ ನಂತರ ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಸಾ.ರಾ.ಮಹೇಶ್ ತಾಲೂಕಿನ ಜೆಡಿಎಸ್ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಸ್ವೀಕರಿಸಿ, ನಂತರ…
ಜಿಪಂ ಸದಸ್ಯ ಸಾರಾ ನಂದೀಶ್ ಹೇಳಿಕೆಗೆ ಆಕ್ಷೇಪ: ಡಿ. ರವಿಶಂಕರ್ ಬಗೆ ಹೇಳಿಕೆ ನೀಡುವ ಮುನ್ನ ಅವರು ಆಸ್ತಿಮಾರಿ ಚುನಾವಣೆ ನಡೆಸಿದ್ದನ್ನು ಪರಿಶೀಲಿಸಲಿ
June 1, 2018ಕೆ.ಆರ್.ನಗರ: ಶಾಸಕ ಸಾ.ರಾ.ಮಹೇಶ್ ಅವರನ್ನು ಸೋಲಿಸಲು ಕಾಂಗ್ರೇಸ್ ಅಭ್ಯರ್ಥಿ ಡಿ.ರವಿಶಂಕರ್ ಅವರ ಜಾತಿಯವರು ಹಾಗೂ ಇತರÀರನ್ನು ಹಣಕೊಟ್ಟು ಖರೀದಿಸಿದ್ದಾರೆಂದು ಮಿರ್ಲೆ ಜಿ.ಪಂ ಕ್ಷೇತ್ರದ ಸದಸ್ಯ ಸಾ.ರಾ.ನಂದೀಶ್ ಆರೋಪಿಸಿದ್ದು, ಆದರೆ ಶಾಸಕ ಸಾ.ರಾ.ಮಹೇಶ್ ಅವರಿಗೆ ಯಾವ ಜಾತಿಯವರು ಮತ ಹಾಕಿದ್ದಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ತಾಲೂಕು ಕುರುಬ ಸಂಘದ ಅಧ್ಯಕ್ಷ ಚೀರ್ನಹಳ್ಳಿ ಶಿವಣ್ಣ ಸವಾಲು ಹಾಕಿದ್ದಾರೆ. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಾ.ರಾ.ನಂದೀಶ್ ಅವರು ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ಡಿ.ರವಿಶಂಕರ್ ಅವರಿಗೆ ನಾಲ್ಕು…
ಬಿಸಿಎಂ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
May 30, 2018ಮೈಸೂರು: ಕೆ.ಆರ್.ನಗರ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಕೆ.ಆರ್.ನಗರ ಟೌನ್ ಹೊಸ ಅಗ್ರಹಾರ, ಭೇರ್ಯ, ಹರದನಹಳ್ಳಿ, ಹನಸೋಗೆ, ಮಿರ್ಲೆ, ಮೇಲೂರು ಮತ್ತು ಕೆ.ಆರ್.ನಗರ ಟೌನ್ ಡಿ.ದೇವರಾಜ ಅರಸು ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ, ಕೆ.ಆರ್.ನಗರ ಟೌನ್‍ನಲ್ಲಿರುವ ಬಾಲಕರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಹಿಂದುಳಿದ ವರ್ಗ-1, 2ಎ, 2ಬಿ, 3ಎ,3ಬಿ, ಎಸ್.ಸಿ. ಹಾಗೂ ಎಸ್.ಟಿ. ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ, ಲೇಖನ ಸಾಮಗ್ರಿ, ನೋಟ್ ಪುಸ್ತಕ,…
ಮೊದಲ ಪತ್ನಿ ಹತ್ಯೆ ಯತ್ನ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ
May 29, 2018ಮೈಸೂರು: ಮೊದಲ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಹತ್ಯೆಗೆ ಯತ್ನಿಸಿದ್ದಲ್ಲದೆ, ತಡೆಯಲು ಬಂದ ಸಂಬಂಧಿಕರೊಬ್ಬರ ಮೇಲೂ ಹಲ್ಲೆ ನಡೆಸಿದ್ದ ಆರೋಪಿಗೆ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಶ್ ಒಂಟಿಗೋಡಿ ಅವರು, 5 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಕೆ.ಆರ್.ನಗರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಮಹದೇವನಿಗೆ ಶಿಕ್ಷೆ ವಿಧಿಸ ಲಾಗಿದೆ. ಮುಳ್ಳೂರು ಗ್ರಾಮದ ಸಬಂಧಿ ಕರೊಬ್ಬರ ಮನೆಯ ಸಮಾರಂಭಕ್ಕೆ ತೆರಳಿದ್ದಾಗ, ತನ್ನ ಮೊದಲ ಪತ್ನಿ ಪುಟ್ಟ ಗೌರಿ ಹಾಗೂ ಸಂಬಂಧಿ ಸ್ವಾಮಿಗೌಡರ ಮೇಲೆ…
ಬೈಕುಗಳ ನಡುವೆ ಡಿಕ್ಕಿ: ಓರ್ವ ಸಾವು, ಮತ್ತೋರ್ವನಿಗೆ ಗಾಯ
May 29, 2018ಮೈಸೂರು: ಎರಡು ಬೈಕುಗಳ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ನಗರ ತಾಲೂಕು, ಕಲ್ಯಾಣಪುರ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ. ಗ್ರಾಮದ ಸತೀಶ್ ನಾಯಕ(32) ಸಾವನ್ನಪ್ಪಿದವರಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಉದಯ್ ಅವರನ್ನು ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಸನ-ಮೈಸೂರು ಹೆದ್ದಾರಿಯ ಕಲ್ಯಾಣಪುರ ಬಳಿ ಎರಡು ಬೈಕುಗಳು ಡಿಕ್ಕಿ ಹೊಡೆದ ಪರಿಣಾಮ ಸತೀಶ್ ನಾಯಕ ತಲೆಗೆ ತೀವ್ರ ಗಾಯಗಳಾಗಿ ರಕ್ತಸ್ರಾವವಾದ ಕಾರಣ ಅವರು ಸ್ಥಳದಲ್ಲೇ ಅಸುನೀಗಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ…